Apple iOS 18.2 Released in India:ಐಫೋನ್ ಬಳಕೆದಾರರಿಗಾಗಿ ಬಹು ನಿರೀಕ್ಷಿತ ಆಪಲ್ 18.2 ಅಪ್ಡೇಟ್ ಕೊನೆಗೂ ಬಿಡುಗಡೆಯಾಗಿದೆ. ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ ಈ ಅಪ್ಡೇಟ್ ಅನ್ನು ಡಿಸೆಂಬರ್ ಎರಡನೇ ವಾರದಲ್ಲಿ ತರುವುದಾಗಿ ಕಂಪನಿಯು ಇತ್ತೀಚೆಗೆ ಘೋಷಿಸಿತು. ಬುಧವಾರ ಕಂಪನಿಯು ಈ ಅಪ್ಡೇಟ್ ಬಿಡುಗಡೆ ಮಾಡಿದೆ. ಈ ಅಪ್ಡೇಟ್ನಲ್ಲಿ ಯಾವ ವೈಶಿಷ್ಟ್ಯಗಳಿವೆ ಎಂಬ ಇತ್ಯಾದಿ ವಿವರಗಳು ಇಲ್ಲಿವೆ..
ಈ ಅಪ್ಡೇಟ್ ಯಾರಿಗೆಲ್ಲ ಲಭ್ಯ?:ಈ ಅಪ್ಡೇಟ್ ಎಲ್ಲ ಐಫೋನ್ ಸ್ಮಾರ್ಟ್ಫೋನ್ಗಳಿಗೆ ಲಭ್ಯವಿದೆ. ಹೊಸ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳು iPhone 16, iPhone 15 Pro ಮತ್ತು iPhone 15 Pro Max ನಲ್ಲಿ ಮಾತ್ರ ಲಭ್ಯವಿವೆ. ಈ ವೈಶಿಷ್ಟ್ಯಗಳನ್ನು ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಯುಕೆ ಮುಂತಾದ ಇಂಗ್ಲಿಷ್ ಮಾತನಾಡುವ ದೇಶಗಳಿಗೆ ವಿಸ್ತರಿಸಲಾಗುತ್ತಿದೆ. ಈ ವೈಶಿಷ್ಟ್ಯಗಳು ಚೀನಾ ಮತ್ತು ಯುರೋಪಿಯನ್ ಯೂನಿಯನ್ (EU) ಹೊರತುಪಡಿಸಿ ಎಲ್ಲಾ ದೇಶಗಳಲ್ಲಿ ಲಭ್ಯವಿದೆ.
iOS 18 ಅಪ್ಡೇಟ್ನಲ್ಲಿನ ವೈಶಿಷ್ಟ್ಯಗಳಿವು!:ಕಂಪನಿಯು WWDC 2024 ರಲ್ಲಿ ತನ್ನ ಆಪಲ್ ಇಂಟೆಲಿಜೆನ್ಸ್ ಅನ್ನು ಘೋಷಿಸಿತು. ಆದರೆ ಈ ವೈಶಿಷ್ಟ್ಯಗಳು iOS 18 ಅಪ್ಡೇಟ್ ಜೊತೆ ಲಭ್ಯವಿರಲಿಲ್ಲ. ಆದರೆ ಆಪಲ್ನ ಇತ್ತೀಚಿನ 18.2 ಅಪ್ಡೇಟ್ನಲ್ಲಿ ಸಿರಿ, ಜೆನ್ಮೋಜಿ, ವಿಜುವಲ್ ಇಂಟೆಲಿಜೆನ್ಸ್, ಇಮೇಜ್ ಪ್ಲೇಗ್ರೌಂಡ್, ಅಡ್ವಾನ್ಸ್ಡ್ ರೈಟಿಂಗ್ ಟೂಲ್ಸ್ ಮತ್ತು ಚಾಟ್ಜಿಪಿಟಿ ಇಂಟಿಗ್ರೇಶನ್ ಸೇರಿದಂತೆ ಹಲವು AI ವೈಶಿಷ್ಟ್ಯಗಳು ಸೇರಿವೆ.
ಅಪ್ಡೇಟ್ ಮಾಡುವುದು ಹೇಗೆ?: iOS 18.2 ಅಪ್ಡೇಟ್ ಬಿಡುಗಡೆಯ ನಂತರ ಡೌನ್ಲೋಡ್ ಮಾಡಲು ಅವಕಾಶವಿರುತ್ತದೆ. iOS 18.2 ಅಪ್ಡೇಟ್ಗಾಗಿ ನಿಮ್ಮ iPhone ನಲ್ಲಿ 'Settings' ಅಪ್ಲಿಕೇಶನ್ಗೆ ಹೋಗಿ.. ನಂತರ 'General' ಆಯ್ದುಕೊಳ್ಳಿ ಮತ್ತು 'Software Update' ಮೇಲೆ ಕ್ಲಿಕ್ ಮಾಡಿ. ಈಗ 'ಡೌನ್ಲೋಡ್ ಮತ್ತು ಇನ್ಸ್ಟಾಲ್' ಆಯ್ಕೆಯನ್ನು ಹಾರಿಸಿಕೊಳ್ಳಿ. ಆಗ ಅದು ಸುಲಭವಾಗಿ ಐಒಎಸ್ 18.2 ಅಪ್ಡೇಟ್ ಡೌನ್ಲೋಡ್ ಆಗುತ್ತದೆ.
ಸಿರಿ ಜೊತೆ ChatGPT ಇಂಟಿಗ್ರೇಶನ್:ಆಪಲ್ ಎಐ ವಾಯ್ಸ್ ಅಸಿಸ್ಟಂಟ್ ChatGPT ಇಂಟಿಗ್ರೇಶನ್ನೊಂದಿಗೆ iOS 18.2 ಅಪ್ಡೇಟ್ ಮಾಡುವುದರಿಂದ ಎಐ ಜೊತೆಗೆ ಸಿರಿ ಸಜ ಸೂಪರ್ಚಾರ್ಜ್ ಆಗುತ್ತದೆ (ಆಪಲ್ ಇಂಟೆಲಿಜೆನ್ಸ್). ಸಿರಿ ಬಳಕೆದಾರರು ಕೇಳಿದ ಪ್ರಶ್ನೆಗಳು ಅಥವಾ ರಿಕ್ವೆಸ್ಟ್ಗಳನ್ನು ChatGPT ಗೆ ಲಿಂಕ್ ಮಾಡುತ್ತದೆ. ಆದರೆ ಇದು ಬಳಕೆದಾರರ ರಿಕ್ವೆಸ್ಟ್ಗಳ IP ವಿಳಾಸವನ್ನು ಮರೆಮಾಡುತ್ತದೆ. ಇದರರ್ಥ OpenAI ಬಳಕೆದಾರರು ಕೇಳುವದನ್ನು ಸಂಗ್ರಹಿಸುವುದಿಲ್ಲ. ಹೊಸ ಸಿರಿ ವೈಶಿಷ್ಟ್ಯಗಳನ್ನು ಬಳಸಲು ಆಪಲ್ ಬಳಕೆದಾರರು ತಮ್ಮ ChatGPT ಖಾತೆಗೆ ಸೈನ್ ಇನ್ ಮಾಡುವ ಅಗತ್ಯವಿಲ್ಲ. ಹೀಗಾಗಿ ಇದು ಬಳಕೆದಾರರ ವೈಯಕ್ತಿಕ ಗೌಪ್ಯತೆಗೆ ಸಂಪೂರ್ಣ ಭದ್ರತೆ ಒದಗಿಸುತ್ತದೆ.