ಕರ್ನಾಟಕ

karnataka

ಅಮೆಜಾನ್​ ಕಿಕ್​ಸ್ಟಾರ್ಟ್​ ಡೀಲ್​ ರಿವಿಲ್: ಸ್ಮಾರ್ಟ್​ಫೋನ್​ಗಳ ಮೇಲೆ ಆಫರ್​ಗಳ ಸುರಿಮಳೆ! - Amazon Offers On Smartphones

By ETV Bharat Tech Team

Published : 4 hours ago

Amazon Announces Offers On Smartphones: ಸ್ಮಾರ್ಟ್‌ಫೋನ್‌ಪ್ರಿಯರಿಗೆ ಅಮೆಜಾನ್ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. ತನ್ನ ಅತಿದೊಡ್ಡ ಶಾಪಿಂಗ್ ಈವೆಂಟ್‌ಗಳಲ್ಲಿ ಒಂದಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಾರಂಭವಾಗುವ ಕೆಲವೇ ದಿನಗಳಿಗೆ ಮೊದಲು ಡೀಲ್‌ಗಳನ್ನು ಬಹಿರಂಗಪಡಿಸಿದೆ.

AMAZON ANNOUNCES OFFERS ON MOBILES  AMAZON OFFERS ON MOBILES 2024  AMAZON GREAT INDIAN FESTIVAL OFFERS  AMAZON ANNOUNCES DEALS ON MOBILES
ಅಮೆಜಾನ್​ ಕಿಕ್​ಸ್ಟಾರ್ಟ್​ ಡೀಲ್​ ರಿವಿಲ್​ (Amazon)

Amazon Announces Offers On Smartphones: ಪ್ರಮುಖ ಜಾಗತಿಕ ಇ-ಕಾಮರ್ಸ್ ಕಂಪನಿ ಅಮೆಜಾನ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಆಫರ್​ಗಳನ್ನು ಹೊರತಂದಿದೆ. ಇತ್ತೀಚೆಗೆ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ದಿನಾಂಕಗಳನ್ನು ಹಬ್ಬದ ಸೀಸನ್ ಪ್ರಾರಂಭವಾಗುವ ಸಮಯದಲ್ಲಿ ಘೋಷಿಸಿತ್ತು. ಈ ಸೇಲ್ ಸೆಪ್ಟೆಂಬರ್ 27ರಂದು ನಡೆಯಲಿದ್ದು, ಪ್ರೈಮ್ ಸದಸ್ಯರಿಗೆ 24 ಗಂಟೆಗಳ ಮುಂಚಿತವಾಗಿ ಸೆಪ್ಟೆಂಬರ್ 26ರಂದು ಲಭ್ಯ. ಇದರ ಭಾಗವಾಗಿ, ಮಾರಾಟ ಪ್ರಾರಂಭವಾಗುವ ಮೊದಲು ಕಿಕ್‌ಸ್ಟಾರ್ಟರ್ ಡೀಲ್‌ಗಳನ್ನು ಘೋಷಿಸಲಾಗಿದೆ. OnePlus, Samsung, Apple, iCoo, Realme, Xiaomi, Lava ಮತ್ತು Techno ಮೊಬೈಲ್‌ಗಳ ಮೇಲಿನ ಕೊಡುಗೆಗಳನ್ನು Amazon ಬಹಿರಂಗಪಡಿಸಿದೆ.

  • iQOO Z9 Lite 5G: iQOO Z9 Lite 5G ಮೊಬೈಲ್ ಅನ್ನು ಬ್ಯಾಂಕ್ ಕೊಡುಗೆಗಳೊಂದಿಗೆ 9,499 ರೂ.ಗೆ ಖರೀದಿಸಬಹುದು. ನೋ ಕಾಸ್ಟ್​ EMI ಸೌಲಭ್ಯವೂ ಲಭ್ಯ. MediaTek Dimension 6,300 5G ಪ್ರೊಸೆಸರ್, 50MP AI ಕ್ಯಾಮೆರಾ ಮತ್ತು IP64 ರೇಟಿಂಗ್ ಅನ್ನು ಈ ಸ್ಮಾರ್ಟ್‌ಫೋನ್​ ಹೊಂದಿದೆ.
  • iQOO Z9 5G:ಕರ್ವ್‌ಡ್​ ಸ್ಕ್ರೀನ್​ ವಿಭಾಗದಲ್ಲಿ ತರಲಾದ iQOO Z9 5G ಮೊಬೈಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. 1,800 nits ಡಿಸ್​ಪ್ಲೇ, ಡ್ಯುಯಲ್ ಸ್ಟೀರಿಯೋ ಸ್ಪೀಕರ್, Sony IMX882 ಕ್ಯಾಮೆರಾ ಇದರಲ್ಲಿದೆ. ಬೆಲೆ 15,999 ರೂ.
  • iQOO Z7 Pro 5G:iQOO Z7 Pro 5G ಮೊಬೈಲ್ ಅನ್ನು 19,749 ರೂ.ಗೆ ಖರೀದಿಸಬಹುದು. ಇದು 3D ಕರ್ವ್‌ಡ್​ 120Hz AMOLED ಡಿಸ್​ಪ್ಲೇ, ಮೀಡಿಯಾ ಟೆಕ್ ಡೈಮೆನ್ಶನ್ 7,200 5G ಪ್ರೊಸೆಸರ್​ ಜೊತೆ ಬರುತ್ತದೆ.
  • Lava Blaze 3 5G:Lava Blaze 3 5G ಸ್ಮಾರ್ಟ್‌ಫೋನ್ 9,899 ರೂ.ಗೆ ಲಭ್ಯ. 50MP + 2MP AI ಕ್ಯಾಮೆರಾ, 90Hz ರಿಫ್ರೆಶ್ ರೇಟ್ ಮತ್ತು MediaTek D6300 ಪ್ರೊಸೆಸರ್‌ ಹೊಂದಿದೆ.
  • OnePlus 11R 5G: Qualcomm Snapdragon 8+ Gen1 ಪ್ರೊಸೆಸರ್‌ನಿಂದ ನಡೆಸಲ್ಪಡುವ OnePlus 11R 5G 26,749 ರೂ.ಗೆ ಲಭ್ಯ. 100W SuperWook ಚಾರ್ಜಿಂಗ್, 120Hz ಫ್ಲೂಯಿಡ್ ಡಿಸ್​​ಪ್ಲೇ ಸೇರಿದಂತೆ ಇತರೆ ವೈಶಿಷ್ಟ್ಯಗಳು ಇದರಲ್ಲಿವೆ.
  • OnePlus Nord CE 3 5G: OnePlus Nord CE3 5G ಮೊಬೈಲ್ ಅನ್ನು 16,749 ರೂ.ಗೆ ಖರೀದಿಸಬಹುದು. ಈ ಮೊಬೈಲ್ 12GB RAM, 5,000mAh ಬ್ಯಾಟರಿ, 80W SuperWook ಚಾರ್ಜಿಂಗ್ ಮತ್ತು 50MP Sony IMX890ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
  • POCO X6 5G: ಅಮೆಜಾನ್ ಕಿಕ್‌ಸ್ಟಾರ್ಟರ್ ಡೀಲ್‌ನಲ್ಲಿ Poco X6 5G 14,999 ರೂ.ಗೆ ಲಭ್ಯವಿದೆ. ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, 1.5K 120Hz AMOLED ಡಿಸ್​ಪ್ಲೇ, 64MP ಟ್ರಿಪಲ್ ರಿಯರ್ ಕ್ಯಾಮೆರಾ ಜೊತೆಗೆ iOS ಪೋರ್ಟ್‌ ಒಳಗೊಂಡಿದೆ.
  • realme Narzo N63: 5000mAh ಬ್ಯಾಟರಿ ಮತ್ತು 45W ಚಾರ್ಜಿಂಗ್ ಹೊಂದಿರುವ Realme Narzo N63 ಮೊಬೈಲ್ ಅನ್ನು 7,155 ರೂ.ಗೆ ಖರೀದಿಸಬಹುದು.
  • Redmi 13C 5G: Redmi 13C 5G ಸ್ಮಾರ್ಟ್​ಫೋನ್​ ಅನ್ನು 9,199 ರೂ.ಗೆ ಖರೀದಿಸಬಹುದು. ಇದರಲ್ಲಿ 50MP AI ಡ್ಯುಯಲ್ ಕ್ಯಾಮೆರಾ, 90Hz ಡಿಸ್​ಪ್ಲೇ ಮತ್ತು 5000mAh ಬ್ಯಾಟರಿ ಇದೆ.
  • Samsung Galaxy S21 FE: 12 MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ Samsung Galaxy S21 FE 25,749 ರೂ.ಗೆ ಮಾರಾಟಕ್ಕಿದೆ.
  • Xiaomi 14: Xiaomi 14 ಮೊಬೈಲ್ ಅನ್ನು 47,999 ರೂ.ಗೆ ಖರೀದಿಸಬಹುದು. Snapdragon 8gen 3 ಪ್ಲಾಟ್‌ಫಾರ್ಮ್, 50MP ಲೈಕಾ ಟ್ರಿಪಲ್ ಲೆನ್ಸ್, 1.5K 120Hz AMOLED ಡಿಸ್​ಪ್ಲೇ ಸೇರಿದಂತೆ ಇತರೆ ವೈಶಿಷ್ಟ್ಯಗಳಿವೆ.

ಇನ್​ಸ್ಟಂಟ್​ ಡಿಸ್ಕೌಂಟ್​:ನೀವು SBI ಕ್ರೆಡಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ EMI ಸೌಲಭ್ಯದೊಂದಿಗೆ ಖರೀದಿ ಮಾಡಿದರೆ ಶೇ 10 ಇನ್​ಸ್ಟಂಟ್​ ಡಿಸ್ಕೌಂಟ್​ ಪಡೆಯುವಿರಿ.

ಇದನ್ನೂ ಓದಿ:ಸ್ಮಾರ್ಟ್​ಫೋನ್​ಗಳ ಮೇಲೆ ಭರಪೂರ ಡಿಸ್ಕೌಂಟ್​ ನೀಡಿದ ಫ್ಲಿಪ್​ಕಾರ್ಟ್​ - Flipkart Big Billion Days Sale

ABOUT THE AUTHOR

...view details