Royal Enfield Classic 350 Launch:ರೆಟ್ರೋ-ಮಾಡರ್ನ್ ಬೈಕ್ ತಯಾರಕ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ. ಈಗ ರಾಯಲ್ ಎನ್‌ಫೀಲ್ಡ್ ತನ್ನ 2024 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾಡೆಲ್ ಅನ್ನು ಭಾರತದಲ್ಲಿ ಭಾನುವಾರ ಅಂದರೆ ಸೆಪ್ಟೆಂಬರ್ 1 ರಿಂದ ಬಿಡುಗಡೆ ಆಗಿದೆ. ಈ ಹೊಸ ಮೋಟಾರ್‌ಸೈಕಲ್‌ನ ಬುಕ್ಕಿಂಗ್ ಕೂಡ ಆರಂಭವಾಗಿದೆ.
ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನ ಅಪ್ಡೇಟ್ ಮಾದರಿಯನ್ನು ಆಗಸ್ಟ್ 12 ರಂದು ಅನಾವರಣಗೊಳಿಸಿರುವುದು ಗಮನಾರ್ಹ. ಆದರೆ ಅದರ ಬೆಲೆ ಭಾನುವಾರದಿಂದ ಬಹಿರಂಗಗೊಂಡಿದೆ. ಕ್ಲಾಸಿಕ್ 350ನ 2024 ಮಾದರಿಯು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೆ ಅದರಲ್ಲಿ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂಬುದು ಗಮನಾರ್ಹ.
ಬದಲಾವಣೆಗಳೇನು?:ಬಲ್ಬ್ ಟೈಪ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಗರ್ ಲ್ಯಾಂಪ್‌ಗಳ ಬದಲಿಗೆ ಈಗ ಎಲ್‌ಇಡಿ ಯೂನಿಟ್ ಬಳಸಲಾಗಿದ್ದು, ಹೊಂದಾಣಿಕೆ ಮಾಡಬಹುದಾದ ಕ್ಲಚ್ ಮತ್ತು ಬ್ರೇಕ್ ಲಿವರ್‌ಗಳನ್ನು ಸಹ ಸೇರಿಸಲಾಗಿದೆ. ಎಲ್ಇಡಿ ಟರ್ನ್ ಇಂಡಿಕೇಟರ್ ಅದರ ಟಾಪ್-ಸ್ಪೆಕ್ ರೂಪಾಂತರದಲ್ಲಿ ಕಂಡುಬರುತ್ತವೆ. ಆದರೆ ಬಲ್ಬ್ ಇಂಡಿಕೇಟರ್ಗಳನ್ನು ಕಡಿಮೆ ಟ್ರಿಮ್‌ಗಳಲ್ಲಿ ಬಳಸಲಾಗಿದೆ.
ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ರ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದರೆ ಈಗ ಅದರ ಸಣ್ಣ ಎಲ್ಸಿಡಿ ಡಿಸ್ಪ್ಲೇಯಲ್ಲಿ ಗೇರ್ ಪೊಜಿಷನ್ ಇಂಡಿಕೇಟರ್ ಸೇರಿಸಿದೆ. ಇದಲ್ಲದೆ ಬೈಕ್‌ಗೆ ಸೇರಿಸಲಾದ ಹೊಸ ವೈಶಿಷ್ಟ್ಯಗಳ ಪಟ್ಟಿಯಲ್ಲಿ USB-C ಚಾರ್ಜಿಂಗ್ ಪೋರ್ಟ್ ಅನ್ನು ಸಹ ಅಳವಡಿಸಲಾಗಿದೆ.