ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ: ಬಸವರಾಜ್ ಬೊಮ್ಮಾಯಿ - ರಾಜ್ಯಪಾಲ

ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರ ಬಾಯಿಂದ ಹಸಿ ಸುಳ್ಳನ್ನು ಹೇಳಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದರು. ಇದೇ ವೇಳೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಹೇಳಿದರು.

Former CM Basavaraj Bommai spoke to the media.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Feb 14, 2024, 9:34 PM IST

Updated : Feb 14, 2024, 10:20 PM IST

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮದವರ ಜೊತೆ ಮಾತನಾಡಿದರು.

ಹಾವೇರಿ:ವಿಧಾನಸಭೆ ಅಧಿವೇಶನದಲ್ಲಿ ಹಸಿ ಸುಳ್ಳನ್ನು ರಾಜ್ಯಪಾಲರ ಬಾಯಿಂದ ಹೇಳಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಹಾವೇರಿಯಲ್ಲಿಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಸಾಧನೆಗಳನ್ನು ತಮ್ಮದೆಂದು ಈ ಸರ್ಕಾರ ಬರೆದುಕೊಳ್ಳುವುದನ್ನು ಬಿಟ್ಟರೆ ಈ ಸರ್ಕಾರ ಯಾವ ಸಾಧನೆಗಳನ್ನೂ ಮಾಡಿಲ್ಲ ಎನ್ನುವುದು ಬಹಳ ಸ್ಪಷ್ಟ ಎಂದು ತಿಳಿಸಿದರು.

ಈ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಹಾವೇರಿ, ಬೆಳಗಾವಿ ಘಟನೆಯೇ ಇರಬಹುದು. ಹಲವಾರು ಘಟನೆಗಳು ನೋಡಿದರೆ ಇದು ಗೊತ್ತಾಗುತ್ತದೆ. ಈಗ ಅವರ ಸರ್ಕಾರದ ಮೇಲೆ ಶೇ.40 ಕಮೀಷನ್ ಆರೋಪ ಬಂದಿದೆ. ಈ ಕುರಿತಂತೆ ಈಗ ಮತ್ತು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಚರ್ಚೆಯಾಗುತ್ತದೆ ಎಂದರು.

ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಆರೋಪ ಮತ್ತು ಅವರು ತಮ್ಮ ಹೇಳಿಕೆ ಬದಲಿಸುವುದರ ಹಿಂದೆ ಸರ್ಕಾರದ ಒತ್ತಡ ಇದೆ. ನ್ಯಾಯಾಲಯ ಸಹ ಈ ಕುರಿತಂತೆ ಆದೇಶಿಸಿದೆ. ನಿಮ್ಮ ಕಡೆ ಹಣ ಇಲ್ಲದ್ದಕ್ಕೆ ಈ ರೀತಿ ಕಮೀಷನ್ ಆರೋಪ ಮಾಡುತ್ತಾ ಕುಳಿತಿದ್ದೀರಿ ಎಂದು ಟೀಕಿಸಿದರು.

ಇದನ್ನೂಓದಿ:ಇ-ಸ್ವತ್ತು ಸಮಸ್ಯೆ: ಕಂದಾಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ- ಪ್ರಿಯಾಂಕ್‌ ಖರ್ಗೆ

Last Updated : Feb 14, 2024, 10:20 PM IST

ABOUT THE AUTHOR

...view details