ಕರ್ನಾಟಕ

karnataka

ETV Bharat / state

ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನ: ಮಹಿಳಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬದುಕುಳಿದ ಯುವಕ - Bengaluru Metro - BENGALURU METRO

ಬೆಂಗಳೂರಲ್ಲಿ ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಮಹಿಳಾ ಸಿಬ್ಬಂದಿ ರಕ್ಷಿಸಿದ್ದಾರೆ.

ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನ
ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನ (ಸಾಂದರ್ಭಿಕ ಚಿತ್ರ)

By ETV Bharat Karnataka Team

Published : Sep 17, 2024, 7:39 PM IST

ಬೆಂಗಳೂರು: ಸಾಲಬಾಧೆ ತಾಳಲಾರದೆ ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಮೆಟ್ರೋ ಮಹಿಳಾ ಭದ್ರತಾ ಸಿಬ್ಬಂದಿ ರಕ್ಷಿಸಿದ್ದಾರೆ. ನಗರದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಬಿಹಾರ ಮೂಲದ 30 ವರ್ಷದ ಯುವಕ ಆತ್ಮಹತ್ಯೆಗೆ ಯತ್ನಿಸಿದವ. ಮೆಟ್ರೋ ಹಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೆಟ್ರೋ ಮಹಿಳಾ ಸಿಬ್ಬಂದಿ ರಶ್ಮಿ ಎಂಬುವರು ಕೂಡಲೇ ಅಲ್ಲಿ ಅಳವಡಿಸಿದ್ದ ಎರ್ಮಜೆನ್ಸಿ ಟ್ರಿಪ್ ಸಿಸ್ಟಂ (ಇಟಿಎಸ್) ಗಾಜು ಒಡೆದು ತಕ್ಷಣವೇ ಮೆಟ್ರೋ ರೈಲಿನ ಪವರ್ ಆಫ್ ಮಾಡಿದ್ದಾರೆ.

ಬಳಿಕ ಯುವಕನನ್ನು ಮೆಟ್ರೋ ಸಿಬ್ಬಂದಿ ರಕ್ಷಿಸಿ ಕರೆತಂದು ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಬಳಿಕ ಜ್ಞಾನಭಾರತಿ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಪದವೀಧರನಾಗಿರುವ ಯುವಕ, ಕೆಂಗೇರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದಾನೆ. ಎಸ್ಪಿ ರಸ್ತೆಯ ಎಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ. ಅವಿವಾಹಿತನಾಗಿರುವ ಜೈನ್, 3 ಲಕ್ಷದವರೆಗೆ ಕೈ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲಾಗದೆ ಪರದಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಜ್ಞಾನಭಾರತಿ ಮೆಟ್ರೋ ನಿಲ್ದಾಣಕ್ಕೆ ಬಂದು ನೇರವಾಗಿ ಹಳಿಗೆ ಇಳಿದಿದ್ದ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ರಶ್ಮಿ, ಕೂಡಲೇ ಇಟಿಎಸ್ ಸಿಸ್ಟಂಗೆ ಅಳವಡಿಸಿದ್ದ ಗಾಜನ್ನು ಕೈಯಿಂದ ಒಡೆದು ಪವರ್ ಆಫ್ ಮಾಡಿದ್ದಾರೆ. ಕ್ಷಣಾರ್ಧದಲ್ಲಿ ಮೆಟ್ರೊ ರೈಲಿನ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ರಕ್ಷಣೆ ಮಾಡುವ ಭರದಲ್ಲಿ ರಶ್ಮಿ ಕೈಗೆ ಗಾಯವಾಗಿದೆ. ಮಹಿಳಾ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಮದುವೆಯಾಗಿ ಏಳೇ ತಿಂಗಳಿಗೆ ತವರು ಮನೆಗೆ ಬಂದು ಆತ್ಮಹತ್ಯೆಗೆ ಶರಣಾದ ಗೃಹಿಣಿ - Woman Commits Suicide

ABOUT THE AUTHOR

...view details