ಉಡುಪಿ:ಉಡುಪಿಯಲ್ಲಿ ಸಂಚಲನ ಮೂಡಿಸಿದ್ದ ಗ್ಯಾಂಗ್ ವಾರ್ ಪ್ರಕರಣ ನಡೆಸಿದ್ದ ಗರುಡ ಗ್ಯಾಂಗ್ ಸದಸ್ಯನಿಗೆ ಹಣಕಾಸು ಮತ್ತು ಆಶ್ರಯ ನೀಡಿದ್ದ ಆರೋಪದ ಮೇಲೆ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಸಫರಾ (35) ಬಂಧಿತ ಯುವತಿ.
ಉಡುಪಿಯಲ್ಲಿ ಎರಡು ತಿಂಗಳ ಹಿಂದೆ ಗರುಡ ಗ್ಯಾಂಗ್ನ ಸದಸ್ಯರು ಹೆದ್ದಾರಿಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ ಮೆರೆದಿದ್ದರು. ಈ ತಂಡವು ಯುವಕನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿತ್ತು. ಗ್ಯಾಂಗ್ ವಾರ್ ಆರೋಪಿಗಳಲ್ಲೋರ್ವ ಇಸಾಕ್ ಎಂಬಾತನಿಗೆ ಈ ಸಫರಾ ಆರ್ಥಿಕ ಸಹಾಯ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿತ್ತು.