ಕರ್ನಾಟಕ

karnataka

ETV Bharat / state

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮತ್ತೆ ರಾಯಲ್ ಕುಟುಂಬದ ಸ್ಪರ್ಧೆ - Yaduveer Krishnadatta Wadiyar

ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್​ಗೆ ಬಿಜೆಪಿಯಿಂದ ಟಿಕೆಟ್​ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮತ್ತೇ ರಾaಯಲ್ ಕುಟುಂಬದ ಸ್ಪರ್ಧೆ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮತ್ತೇ ರಾaಯಲ್ ಕುಟುಂಬದ ಸ್ಪರ್ಧೆ

By ETV Bharat Karnataka Team

Published : Mar 13, 2024, 10:36 PM IST

ಮೈಸೂರು: ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದ್ದು, ಈ ಬಾರಿ ಮೈಸೂರು - ಕೊಡಗು ಕ್ಷೇತ್ರದ ಸ್ಫರ್ಧೆಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರಿಗೆ ಟಿಕೆಟ್​ ಘೋಷಣೆ ಮಾಡಲಾಗಿದೆ. ಈ ಮೂಲಕ ಮತ್ತೆ ರಾಜವಂಶಸ್ಥರ ಎರಡನೇ ಕುಡಿ ರಾಜಕೀಯಕ್ಕೆ ಪ್ರವೇಶ ಮಾಡಿದೆ.

ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್

ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಅವರ ಹೆಸರು ಪ್ರಕಟವಾಗುತ್ತಿದ್ದಂತೆ ಸಂತೋಷ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ರಾಜಪರಂಪರೆ ಇಲ್ಲ, ಜನಸೇವೆಯನ್ನ ಜನತಾ ಪ್ರತಿನಿಧಿಯಾಗಿ ಮಾಡಬೇಕು, ಅದಕ್ಕೆ ಒಂದು ಅವಕಾಶ ಸಿಕ್ಕಿದೆ ಎಂದು ಈ ಟಿವಿ ಭಾರತದೊಂದಿಗೆ ಮೊದಲ ದೂರವಾಣಿ ಮೂಲಕ ತಿಳಿಸಿದರು.

ರಾಜಕೀಯಕ್ಕೆ ಧುಮುಕಿದ ರಾಯಲ್ ಫ್ಯಾಮಿಲಿಯ ಎರಡನೇ ಕುಡಿ:ಹಿಂದೆ ನಾಲ್ಕು ಬಾರಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಕಾಂಗ್ರೆಸ್​ನಿಂದ ಸಂಸದರಾಗಿ ಆಯ್ಕೆಯಾಗಿದ್ದು, ಒಟ್ಟು ಆರು ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅವರು ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಜೊತೆಗೆ 1991ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದರು. ಇದೀಗ ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಬಿಜೆಪಿಯಿಂದಲೇ ರಾಜಕೀಯ ಪ್ರವೇಶ ಪಡೆದಿದ್ದಾರೆ.

ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್

ಟಿಕೆಟ್​ ಕೊಡಿಸುವಲ್ಲಿ ಮಾವನ ಪಾತ್ರ: ಯದುವೀರ್ ಅವರ ಹೆಂಡತಿ ತ್ರಿಷಿಕಾ ಒಡೆಯರ್ ತಂದೆ ಹರ್ಷವರ್ಧನ ಸಿಂಗ್ ರಾಜಸ್ಥಾನದ ದುಂಗಾರಪುರದ ಸಂಸ್ಥಾನದವರಾಗಿದ್ದು, ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. 2022ರ ವರೆಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ ಬಿಜೆಪಿ ಅವರನ್ನ ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡಲು ಪ್ರಯತ್ನಿಸಿದಾಗ ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಹರ್ಷವರ್ಧನ್ ಸಿಂಗ್ ಬಿಜೆಪಿಯ ಪ್ರಮುಖ ನಾಯಕರ ಜೊತೆ ಈಗಲೂ ಆತ್ಮೀಯ ಸಂಬಂಧ ಹೊಂದಿದ್ದು, ಈ ಹಿನ್ನೆಲೆ ಬಿಜೆಪಿಯಿಂದ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಧುವೀರ್​ ಯಶಸ್ವಿ ಆಗಿದ್ದಾರೆ ಎನ್ನಲಾಗುತ್ತಿದೆ.

ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್

ಇದನ್ನೂ ಓದಿ:ಒಂಬತ್ತು ಸಂಸದರಿಗೆ ಕೈತಪ್ಪಿದ ಟಿಕೆಟ್: ಯಾರು ಔಟ್? ಯಾರು ಇನ್, ಇಲ್ಲಿದೆ ಫುಲ್ ಡಿಟೇಲ್ಸ್

ABOUT THE AUTHOR

...view details