ಬೆಂಗಳೂರು: ಸ್ಕೂಟರ್‌ಗೆ ಬಿಎಂಟಿಸಿ ಬಸ್ ಗುದ್ದಿ ಮಹಿಳೆ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಕೆಂಗೇರಿಯ ಉಲ್ಲಾಳ ಸಮೀಪದ 100 ಅಡಿ ರಸ್ತೆಯಲ್ಲಿ ನಡೆಯಿತು. ಸೊನ್ನೇನಹಳ್ಳಿಯ ಮಾರುತಿ ನಗರದ ನಿವಾಸಿ ಮೋನಿಕಾ (25) ಮೃತಪಟ್ಟಿದ್ದಾರೆ.
ಉಲ್ಲಾಳ ಸಮೀಪದ ರಿಂಗ್ ರಸ್ತೆಯಲ್ಲಿರುವ ಶೋರೂಂವೊಂದರ ಹೆಚ್.ಆರ್.(ಮಾನವ ಸಂಪನ್ಮೂಲ ಅಧಿಕಾರಿ) ಆಗಿದ್ದ ಮೋನಿಕಾ, ಎಂದಿನಂತೆ ಬೆಳಿಗ್ಗೆ ತಮ್ಮ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸ್ಕೂಟರ್‌ಗೆ ಮುಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದ ಮೋನಿಕಾ ಮೈಮೇಲೆ ಹಿಂಬದಿಯಿಂದ ಬರುತ್ತಿದ್ದ ಕಾರು ಹರಿದಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.