ಮೈಸೂರು: ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಹೊಳೆನರಸೀಪುರಕ್ಕಿಂತ ಒಂದು ಮತ ಹೆಚ್ಚು ಲೀಡ್ ಬರುತ್ತದೆ ಎಂದು ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಮ್ ಗೌಡ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಯುಗಾದಿ ಹಬ್ಬದ ನಂತರ ಪ್ರಚಾರ ಕಾರ್ಯ ಆರಂಭಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ನಮ್ಮ ಯಾವ ಬೆಂಬಲಿಗರೂ ಕಾಂಗ್ರೆಸ್ಗೆ ಹೋಗಿಲ್ಲ, ಹೋಗುವುದೂ ಇಲ್ಲ. ಈಗ ಹೋಗುವವರು ಯಾವ ಬೂತ್ ಅಧ್ಯಕ್ಷರೂ ಅಲ್ಲ. ಯಾರೋ ಟೀ ಕೊಡಿಸಿದ ಕೂಡಲೇ, ಪ್ರಚಾರ ಪತ್ರ ಕೊಟ್ಟ ಕೂಡಲೇ, ಅವರು ಕಾಂಗ್ರೆಸ್ ಆಗುವುದಿಲ್ಲ ಎಂದರು.