ಕರ್ನಾಟಕ

karnataka

ETV Bharat / state

ಶಿವಮೊಗ್ಗ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ - National health abhiyan jobs

ಶಿವಮೊಗ್ಗದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆ.8 ರಂದು ನೇರ ಸಂದರ್ಶನ ನಡೆಯಲಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ (Etv Bharat)

By ETV Bharat Karnataka Team

Published : Aug 3, 2024, 8:13 PM IST

ಶಿವಮೊಗ್ಗ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ನೇರ ಸಂದರ್ಶನಕ್ಕಾಗಿ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್.ಪಿ.ಸಿ.ಡಿ.ಸಿಎಸ್, ಎನ್.ಪಿ.ಹೆಚ್.ಸಿ.ಇ. ಮತ್ತು ಸಿ.ಪಿ.ಹೆಚ್.ಸಿ-ಯು.ಹೆಚ್.ಸಿ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಎಂಬಿಬಿಎಸ್ ವೈದ್ಯರು-9, ತಜ್ಞವೈದ್ಯರು (ಎಂ.ಡಿ. ಇಂಟರ್ನಲ್ ಮೆಡಿಸಿನ್)-01 ಮತ್ತು ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಸಂಯೋಜಕರ-01 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಮೇರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಯಾ ಹುದ್ದೆಗೆ ಅರ್ಹರು ಅರ್ಜಿ ಸಲ್ಲಿಸಬಹುದು.

ಎನ್.ಸಿ.ಡಿ. ಕ್ಲಿನಿಕ್ ಜಿಲ್ಲೆಯ ತಾ.ಅ./ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ಎಂ.ಬಿ.ಬಿ.ಎಸ್. ವೈದ್ಯರ ಹುದ್ದೆಗೆ ವಿದ್ಯಾರ್ಹತೆ ಎಂಬಿಬಿಎಸ್ ಆಗಿದ್ದು, 2 ವರ್ಷ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವಿರಬೇಕು. ಗರಿಷ್ಠ ವಯಸ್ಸು 50 ವರ್ಷ, ಮಾಸಿಕ ಸಂಭಾವನೆ 46894 ರೂ. ಇರಲಿದೆ.

ಎನ್.ಸಿ.ಡಿ. ಕ್ಲಿನಿಕ್ ಜಿಲ್ಲಾ ಆಸ್ಪತ್ರೆ, ಶಿಕಾರಿಪುರದಲ್ಲಿ ಖಾಲಿಯಿರುವ ತಜ್ಞವೈದ್ಯರು (ಎಂ.ಡಿ. ಇಂಟರ್ನಲ್ ಮೆಡಿಸಿನ್) ಹುದ್ದೆಗೆ ಎಂಬಿಬಿಎಸ್ - ಎಂ.ಡಿ. (ಇಂಟರ್ನಲ್ ಮೆಡಿಸಿನ್) ವಿದ್ಯಾರ್ಹತೆ ಹೊಂದಿದ್ದು ಸ್ಪೆಷಲಿಸ್ಟ್ ಹುದ್ದೆಯಲ್ಲಿ 2 ವರ್ಷ ಕಾರ್ಯನಿರ್ವಹಿಸಿದ ಅನುಭವವಿರಬೇಕು. ಗರಿಷ್ಠ ವಯಸ್ಸು 50 ವರ್ಷ, ಮಾಸಿಕ ಸಂಭಾವನೆ 46894 ರೂ. ಆಗಿದೆ. (ತಜ್ಞ ವೈದ್ಯರು ಲಭ್ಯವಿಲ್ಲದಿದ್ದಲ್ಲಿ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು)

ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯಲ್ಲಿ ಖಾಲಿಯಿರುವ ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಸಂಯೋಜಕರ ಹುದ್ದೆಗೆ ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಹೆಚ್ಎಂಎಸ್, ಬಿಬೈಎನ್​ಎಸ್, ಎಂಎಸ್​ಸಿ, ನರ್ಸಿಂಗ್, ಎಂಎಸ್​ಸಿ, ಲೈಫ್ ಸೈನ್ಸ್, ಬಿಎಸ್​ಸಿ, ನರ್ಸಿಂಗ್​ನೊಂದಿಗೆ ಎಂಪಿಹೆಚ್, ಎಂಬಿಎ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯಸ್ಸು 40 ವರ್ಷ, ಮಾಸಿಕ ಸಂಭಾವನೆ 30,000 ರೂ. ಇರುತ್ತದೆ.

ಆಸಕ್ತರು ಆಗಸ್ಟ್ 08 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 4.00 ರ ವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಘಟಕ, ಮೆಗ್ಗಾನ್ ಆಸ್ಪತ್ರೆ ಆವರಣ, ತುಂಗಾ ವಿದ್ಯಾರ್ಥಿನಿಯರ ವಸತಿ ನಿಲಯದ ಎದುರು, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ದಾಖಲೆಗಳ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಭಾಗವಹಿಸುವಂತೆ ಎನ್.ಸಿ.ಡಿ. ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದೆ.

ವೈದ್ಯರಿಗೆ ವಿಶೇಷ ಸೂಚನೆ: ಪ್ರತಿ ತಿಂಗಳ 1, 10 ಮತ್ತು 20ನೇ ತಾರೀಖಿನಿಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ (ರಜೆ ಇರುವ ದಿನವಿದ್ದರೆ ನಂತರದ ದಿನದಲ್ಲಿ) ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-220685 ನ್ನು ಸಂಪರ್ಕಿಸುವುದು.

ಇದನ್ನೂ ಓದಿ:1940 ಗ್ರಾಮೀಣ ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎರಡೇ ದಿನ ಬಾಕಿ - Karnataka Postal Circle Recruitment

ABOUT THE AUTHOR

...view details