ಬೆಂಗಳೂರು: ಆ್ಯಪ್ ಆಧರಿತ ಇ-ಟ್ಯಾಕ್ಸಿ, ಫುಡ್ ಡೆಲಿವರಿ ಮತ್ತಿತರ ಕಂಪನಿಗಳ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿರುವುದರ ಕುರಿತು ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಪೊಲೀಸರು 2,670 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ನಗರದಾದ್ಯಂತ ಸಂಚಾರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಸಂಚಾರ ಉಲ್ಲಂಘನೆಗಳಿಗೆ ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇ-ಕಾಮರ್ಸ್ ಸರ್ವಿಸ್ ಪ್ರತಿನಿಧಿಗಳಿಂದ ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ ₹13.78 ಲಕ್ಷ ದಂಡ ಸಂಗ್ರಹ
ಶನಿವಾರ ಒಂದೇ ದಿನದಲ್ಲಿ 2,670 ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪೊಲೀಸರು ಒಟ್ಟು 13.78 ಲಕ್ಷ ದಂಡ ಸಂಗ್ರಹಿಸಿದ್ದಾರೆ.
ಸಾಂದರ್ಭಿಕ ಚಿತ್ರ (ETV Bharat)
Published : Nov 10, 2024, 12:53 PM IST
ಸಂಚಾರ ನಿಯಮ ಉಲ್ಲಂಘನೆ ವಿವರ
ಪ್ರಕರಣ | ಸಂಖ್ಯೆ | ದಂಡ |
ಹೆಲ್ಮೆಟ್ ರಹಿತ ಚಾಲನೆ | 781 | 3.90 ಲಕ್ಷ ರೂ. |
ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ | 26 | 39 ಸಾವಿರ ರೂ. |
ಸಿಗ್ನಲ್ ಜಂಪ್ | 45 | 22,500 ರೂ. |
ನೋ ಎಂಟ್ರಿ | 404 | 2.03 ಲಕ್ಷ ರೂ. |
ತ್ರಿಪಲ್ ರೈಡಿಂಗ್ | 52 | 26 ಸಾವಿರ ರೂ. |
ನೋ ಪಾರ್ಕಿಂಗ್ | 105 | 52,500 ರೂ. |
ದೋಷಪೂರಿತ ನಂಬರ್ ಫಲಕ | 119 | 60,500 ರೂ. |
ಒನ್ ವೇ ರೈಡಿಂಗ್ | 319 | 1.60 ಲಕ್ಷ ರೂ. |
ಹೆಲ್ಮೆಟ್ ರಹಿತ ಹಿಂಬದಿ ಸವಾರ | 643 | 3.21 ಲಕ್ಷ ರೂ. |
ಫುಟ್‌ಪಾತ್ ಪಾರ್ಕಿಂಗ್ | 34 | 17 ಸಾವಿರ ರೂ. |
ಫುಟ್‌ಪಾತ್ ರೈಡಿಂಗ್ | 44 | 22 ಸಾವಿರ ರೂ. |
ನಂಬರ್ ಫಲಕ ರಹಿತ ವಾಹನ ಚಾಲನೆ | 25 | 12,500 ರೂ. |
ಇತರೆ ಉಲ್ಲಂಘನೆಗಳು | 73 | 51,500 ರೂ. |
ಇದನ್ನೂ ಓದಿ:ಟ್ರಾಫಿಕ್ ನಿಯಮ ಉಲ್ಲಂಘನೆ ಕಣ್ಗಾವಲಿಗೆ ಎಐ ತಂತ್ರಜ್ಞಾನ ಬಳಕೆ; ನಿತಿನ್ ಗಡ್ಕರಿ