ಮೈಸೂರು:ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾನು ಅಭ್ಯರ್ಥಿಯಾಗಿದ್ದೇನೆ. ಈಗ ತಾನೇ ನಾಮಪತ್ರ ಸಲ್ಲಿಸಿದ್ದೇನೆ. ಶಿಕ್ಷಕರ ಸಮಸ್ಯೆಗಳು ಬಹಳ ಅಗಾಧವಾಗಿವೆ. ಈ ವರೆಗೂ ಅವರ ಸಮಸ್ಯೆ ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಆಗಿಲ್ಲ. ನಾನು ಶಿಕ್ಷಕರ ಬಗ್ಗೆ ಬಹಳ ತೀವ್ರವಾಗಿ, ಅವರ ಸಮಸ್ಯೆ ಬಗ್ಗೆ ಇಡೀ ಕರ್ನಾಟಕ ರಾಜ್ಯದ ಉದ್ದಕ್ಕೂ ಹೋರಾಟ ಮಾಡಬೇಕು ಎನ್ನುವುದು ನನ್ನ ಚಿಂತನೆ ಇದೆ ಎಂದು ತಿಳಿಸಿದರು.
ಶಿಕ್ಷಕರನ್ನು ಸರ್ಕಾರ ತುಂಬಾ ಹೀನಾಯವಾಗಿ ನಡೆಸುತ್ತಾ ಇರುವುದು ಕಾಣುತ್ತಾ ಇದೆ. ಹೆಜ್ಜೆ ಹೆಜ್ಜೆಗೂ ಶಿಕ್ಷಕರು ಅನುಭವಿಸುತ್ತಿರುವಂತಹ ನೋವುಗಳು ಬಹಳ. ಇವತ್ತು ಅವರ ಬಗ್ಗೆ ಪರಿಣಾಮಕಾರಿ ಹೋರಾಟ ಮಾಡಬೇಕು. ಅಂದರೆ ಅದು ವಾಟಾಳ್ ನಾಗರಾಜ್ ಅವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ನನಗೆ ಮೊದಲ ಪ್ರಾಶಸ್ತ್ಯ ಮತ ನೀಡಿ:ವಿಧಾನ ಪರಿಷತ್ನಲ್ಲಿ ಶಿಕ್ಷಕರು ಕಂಡಯರಿದಂತ ಹೋರಾಟವನ್ನು ನೋಡಬಹುದು. ಶಿಕ್ಷಕರ ಪರವಾಗಿ ಇಡೀ ರಾಜ್ಯ ಅದ್ಬುತವಾದ ಹೋರಾಟ ಮಾಡಬೇಕು ಎನ್ನುವುದು ನನ್ನ ಚಿಂತನೆ. ವಿಧಾನ ಪರಿಷತ್ ಮೇಲ್ಮನೆ ಅದರ ಹೆಸರೇ ಮೇಲ್ಮನೆ. ಮೇಲ್ಮನೆಗೆ ಎಷ್ಟೇ ಎತ್ತರಾದವರೂ ಹೋಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.