ಕರ್ನಾಟಕ

karnataka

ETV Bharat / state

ಮುಸುಕು ವೇಷ ಧರಿಸಿ ಪಿಸ್ತೂಲ್ ಇಟ್ಟುಕೊಂಡು ದರೋಡೆ ಮಾಡುತ್ತಿದ್ದ ಇಬ್ಬರು ದರೋಡೆಕೋರರ ಬಂಧನ

ಮುಸುಕು ವೇಷ ಧರಿಸಿ ಪಿಸ್ತೂಲ್ ಇಟ್ಟುಕೊಂಡು ದರೋಡೆ ಮಾಡುತ್ತಿದ್ದ ಉತ್ತರಪ್ರದೇಶ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ.

ROBBERY CASE
ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : Oct 15, 2024, 2:06 PM IST

Updated : Oct 15, 2024, 2:20 PM IST

ಬೆಂಗಳೂರು: ಬೀಗ ಹಾಕಿರುವ ಮನೆಗಳನ್ನ ಗುರಿಯಾಗಿಸಿಕೊಂಡು ಮುಸುಕುಧಾರಿ ವೇಷದಲ್ಲಿ ನುಗ್ಗಿ ದರೋಡೆ ಮಾಡುತ್ತಿದ್ದ ಉತ್ತರಪ್ರದೇಶ ಗ್ಯಾಂಗ್​ವೊಂದನ್ನು ಬಂಧಿಸಿರುವ ಕೊಡಿಗೆಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಂದ 70 ಲಕ್ಷ ಮೌಲ್ಯದ 1 ಕೆ.ಜಿ‌ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಏ. 24ರಂದು ಸಹಕಾರನಗರದ ನಿವಾಸಿಯಾಗಿರುವ ವೈದ್ಯ ಡಾ.ಉಮಾಶಂಕರ್ ಮನೆಗೆ ನುಗ್ಗಿ 40 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ಈ ಸಂಬಂಧ ದೂರು ನೀಡಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, ಮಹಿಳೆ ಸೇರಿ ಮೂವರನ್ನ ಬಂಧಿಸಿದ್ದರು. ಇದೀಗ ಕಳ್ಳತನ ಪ್ರಕರಣವೊಂದರಲ್ಲಿ ಛತ್ತೀಸ್​ಗಢ ಪೊಲೀಸರಿಂದ ಬಂಧಿತರಾಗಿದ್ದ ಜಾಫರ್ ಹಾಗೂ ಇಮ್ರಾನ್ ಎಂಬುವರನ್ನು ಬಾಡಿ ವಾರಂಟ್ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಗರದೆಲ್ಲೆಡೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡ ಚಿನ್ನಾಭರಣ (ETV Bharat)

ಕಳ್ಳತನ ಕೃತ್ಯದಲ್ಲಿ ಸಕ್ರಿಯವಾಗಿದ್ದ ಯುಪಿ ಗ್ಯಾಂಗ್​:ಅಪರಾಧ ಕೃತ್ಯವೆಸಗಲು ಬೆಂಗಳೂರು ಸೇರಿದಂತೆ ದೇಶದ ವಿವಿಧ ಕೃತ್ಯಗಳಲ್ಲಿ ಕೈಚಳಕ ತೋರಿಸಿದ್ದರು. ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡಿಕೊಂಡು ವ್ಯವಸ್ಥಿತ ಸಂಚು ರೂಪಿಸಿ ಮುಸುಕು ವೇಷಧಾರಿಗಳಾಗಿ ಬಂದು ಅಪಾರ ಪ್ರಮಾಣ ನಗ - ನಾಣ್ಯ ದೋಚುತ್ತಿದ್ದರು. ಅಲ್ಲದೆ, ಮನೆ ಮಾಲೀಕರು ಎದುರಾದರೆ ಪಿಸ್ತೂಲ್ ತೋರಿಸಿ ಬೆದರಿಸಿ ಕೃತ್ಯವೆಸಗುತ್ತಿದ್ದರು. ಕೊಡಿಗೆಹಳ್ಳಿಯಲ್ಲಿ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ ದರೋಡೆಕೋರರು ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳಲ್ಲಿ ಶಾಮೀಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಬರಿ ಹಣದಲ್ಲಿ ಗೋವಾದಲ್ಲಿ ಕ್ಯಾಸಿನೊದಲ್ಲಿ ಭಾಗಿ:ದರೋಡೆ ಮಾಡಿದ ಹಣದಲ್ಲಿ ಗೋವಾಕ್ಕೆ ತೆರಳಿ ಕ್ಯಾಸಿನೊ ಜೂಜಾಟವಾಡಿ ಮೋಜು ಮಾಡುತ್ತಿದ್ದರು. ಹಣ ಖಾಲಿಯಾಗುವರೆಗೂ ಮೋಜು - ಮಸ್ತಿ ಮಾಡಿ ಬಳಿಕ ಹಣ ಖಾಲಿಯಾಗುತ್ತಿದ್ದಂತೆ ಮತ್ತೆ ಅಪರಾಧ ಕೃತ್ಯಗಳನ್ನ ಎಸಗುತ್ತಿದ್ದರು. ಇಬ್ಬರು ಆರೋಪಿಗಳ ವಿರುದ್ಧ ಮಹಾರಾಷ್ಟ್ರ, ಆಂಧ್ರ, ಛತ್ತೀಸ್​ಗಢ ಸೇರಿ ವಿವಿಧ ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕಣ್ಣಿಗೆ ಕಾರದ ಪುಡಿ ಎರಚಿ ಸಿನಿಮೀಯ ರೀತಿಯಲ್ಲಿ ದರೋಡೆ: ಹೆಡ್ ಕಾನ್ಸ್​ಟೇಬಲ್​ ಸೇರಿ ಏಳು ಆರೋಪಿಗಳ ಬಂಧನ - Robbery Case

Last Updated : Oct 15, 2024, 2:20 PM IST

ABOUT THE AUTHOR

...view details