ಬೆಂಗಳೂರು:ಹೋಟೆಲ್‌ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಸಿ ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಬಂದಿದೆ. 'ನಗರದ ಹೆಚ್ಎಂಟಿ ಮೈದಾನದ ಸಮೀಪದ ಕದಂಬ ಗಾರ್ಡೇನಿಯಾ ಹೋಟೆಲ್‌ನಲ್ಲಿ ಬಾಂಬ್ ಇರಿಸಿದ್ದು, ಸ್ಫೋಟಿಸಲಿದ್ದೇನೆ' ಎಂದು ಪತ್ರದಲ್ಲಿ ಬರೆಯಲಾಗಿದೆ.
ಬೆಳಿಗ್ಗೆ 11:50ಕ್ಕೆ ಠಾಣೆ ತಲುಪಿರುವ ಪತ್ರದಲ್ಲಿ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಲಾಗಿದೆ. 'ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಿರುವುದು ನಾನೇ. ಅದೇ ರೀತಿಯಲ್ಲಿ ಈ ಹೋಟೆಲ್‌ನಲ್ಲೂ ಬಾಂಬ್ ಸ್ಪೋಟಿಸುತ್ತಿದ್ದೇನೆ" ಎಂದು ಬೆದರಿಕೆ ಹಾಕಲಾಗಿದೆ.