ಕರ್ನಾಟಕ

karnataka

ETV Bharat / state

ಸಹೋದರನ ಪುತ್ರಿ ರಕ್ಷಿಸಿ ಸಮುದ್ರದ ಅಲೆಗೆ ಕೊಚ್ಚಿ ಹೋದ ಚಿಕ್ಕಪ್ಪ - A MAN DIED BY SEA WAVES

ಕುಟಂಬಸ್ಥರೊಂದಿಗೆ ಸೋಮೇಶ್ವರದ ಉಚ್ಚಿಲ ಪೆರಿಬೈಲು ಬೀಚ್​ಗೆ ಬಂದು ಆಟವಾಡುತ್ತಿದ್ದ ಸಂದರ್ಭ ಸಮುದ್ರ ಪಾಲಾಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಲು ಹೋಗಿ ಚಿಕ್ಕಪ್ಪ ಸಾವನ್ನಪ್ಪಿರುವ ಘಟನೆ ನಡೆದಿದೆ.

UCHCHILA PERIBAILU BEACH  DAKSHINA KANNADA  MANGALURU  ಚಿಕ್ಕಪ್ಪ ಸಾವು
ಸಹೋದರನ ಪುತ್ರಿಯನ್ನು ರಕ್ಷಿಸಿ ಸಮುದ್ರದ ಅಲೆಗೆ ಕೊಚ್ಚಿ ಹೋದ ಚಿಕ್ಕಪ್ಪ (ETV Bharat)

By ETV Bharat Karnataka Team

Published : Dec 30, 2024, 2:19 PM IST

ಮಂಗಳೂರು:ಸಮುದ್ರ ಪಾಲಾಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಿ ದಡಕ್ಕೆ ಕರೆತಂದ ವ್ಯಕ್ತಿಯೊಬ್ಬರು ದೈತ್ಯ ಅಲೆಯ ಹೊಡೆತದಿಂದ ಮೃತಪಟ್ಟ ಘಟನೆ ಸೋಮೇಶ್ವರ ಉಚ್ಚಿಲದ ಪೆರಿಬೈಲು ಎಂಬಲ್ಲಿ ನಿನ್ನೆಯ ಭಾನುವಾರ ನಡೆದಿದೆ.

ಬೆಂಗಳೂರಿನ ಶಿವಾಜಿ ನಗರದ ಶಿವಾಜಿ ರೋಡ್​ ನಿವಾಸಿ ಕೆ.ಎಂ.ಸಜ್ಜದ್ ಅಲಿ (45)ಮೃತಪಟ್ಟ ವ್ಯಕ್ತಿ. ಸಜ್ಜದ್‌‌ ಅವರು ಮಂಗಳೂರಿನ ಅಡ್ಯಾ‌ರ್ ಗಾರ್ಡನ್‌ನಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭಕ್ಕೆ ಬಂದಿದ್ದರು. ಮದುವೆ ಮುಗಿಸಿ ಸಜ್ಜದ್ ಅವರ ಪತ್ನಿ ಅಲಿಮಾ ರಶೀದಾ ಮಂಗಳೂರಿನ ಪಡೀಲಿನಲ್ಲಿರುವ ತಾಯಿ ಮನೆಗೆ ತೆರಳಿದ್ದರು. ಭಾನುವಾರ ಸಜ್ಜದ್‌ ಅಲಿರವರು ಒಟ್ಟು 11 ಮಂದಿ ಕುಟಂಬಸ್ಥರೊಂದಿಗೆ ಸೋಮೇಶ್ವರದ ಉಚ್ಚಿಲ ಪೆರಿಬೈಲು ಬೀಚಿಗೆ ಬಂದಿದ್ದರು.

ಬೀಚ್‌ನಲ್ಲಿ ನೀರಾಟವಾಡುತ್ತಿದ್ದಾಗ ಸಜ್ಜದ್ ಅವರ ಸಹೋದರನ ಪುತ್ರಿ ಉಮೈ ಆಸಿಯಾ ಎಂಬಾಕೆ ಸಮುದ್ರದ ಅಲೆಯಲ್ಲಿ ಕೊಚ್ಚಿಕೊಂಡು ಸ್ವಲ್ಪ ದೂರಕ್ಕೆ ಹೋಗಿ, ಪ್ರಾಣ ರಕ್ಷಣೆಗೆ ಬೊಬ್ಬಿಟ್ಟಿದ್ದಾಳೆ. ತಕ್ಷಣ ಸಜ್ಜದ್‌ ಅಲಿಯವರು ಸಮುದ್ರಕ್ಕೆ ಧುಮುಕಿ ಆಸಿಯಾಳನ್ನು ಎಳೆದು ತಂದು ದಡಕ್ಕೆ ಹಾಕಿದ್ದಾರೆ. ಅದೇ ಸಂದರ್ಭ ತೀರಕ್ಕೆ ಅಪ್ಪಳಿಸಿದ ದೈತ್ಯಾಕಾರದ ಮತ್ತೊಂದು ಅಲೆಯೊಂದು ಸಜ್ಜದ್ ಅವರನ್ನು ಸಮುದ್ರದತ್ತ ಎಳೆದೊಯ್ದಿದೆ. ಅದರ ಬೆನ್ನಲ್ಲೇ ಮತ್ತೆ ಬಂದ ಸಮುದ್ರದ ಅಲೆಯಲ್ಲಿ ಸಜ್ಜದ್ ನೇರವಾಗಿ ತೀರಕ್ಕೆ ಬಂದು ಬಿದ್ದಿದ್ದಾರೆ.

ಅಲೆಯಲ್ಲಿ ಬಂದು ದಡಕ್ಕೆ ಅಪ್ಪಳಿಸಿದ ರೀತಿ ಬಿದ್ದಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ದಾಬಸ್ ಪೇಟೆ ಬಳಿ ಸರಣಿ ಅಪಘಾತ: ಓರ್ವ ಸಾವು, ಹಲವರಿಗೆ ಗಾಯ

ABOUT THE AUTHOR

...view details