ಹುಬ್ಬಳ್ಳಿ:ಕೆರೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ. ದೇವರಗುಡಿಹಾಳ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ. ಗದಗದ ದೀಪಕ್ ರೋಣದ(21) ಮತ್ತು ವಿದ್ಯಾನಗರ ಲೋಕಪ್ಪನಹಕ್ಕಲ ನಿವಾಸಿ ಮೈಲಾರಿ (24) ಮೃತರು.
ಏಳು ಮಂದಿ ಸ್ನೇಹಿತರು ದೇವರಗುಡಿಹಾಳ ಕರೆಗೆ ಈಜಲು ತೆರಳಿದ್ದರು. ಮೊದಲು ನವೀನ್ ಮೇಲಗೊಪ್ಪ, ಮುಜಾಮಿಲ್, ಅಕ್ಷಯ್, ರಜತ್, ಇಸಾಕ್ ಕೆರೆಗಿಳಿದು ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಆದರೆ ದೀಪಕ್ ಮತ್ತು ಮೈಲಾರಿ ಈಜುತ್ತಾ ಕೆರೆ ಮಧ್ಯೆ ಹೋಗಿ ವಾಪಸ್ ಬರುವಾಗ ಮುಳುಗಿದ್ದಾರೆ. ತಕ್ಷಣ ದಡಕ್ಕೆ ಬಂದಿದ್ದ ಸ್ನೇಹಿತರು ಅವರಿಗೆ ಹಗ್ಗ ನೀಡಲು ಮುಂದಾದರೂ ಪ್ರಯೋಜನವಾಗಿಲ್ಲ.