ಹುಬ್ಬಳ್ಳಿ:ಕುಳಿತಲ್ಲಿಯೇ ಕೈತುಂಬಾ ಹಣ ಗಳಿಸಬಹುದು ಎಂದು ನಂಬಿಸಿದ ಸೈಬರ್ ವಂಚಕರು ನಗರದ ಅಕ್ಷಯ ಕಾಲೊನಿ ನಿವಾಸಿಯೊಬ್ಬರಿಗೆ 16.87 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಸುಧೀರ್ ಇಜಾರಿ ಹಣ ಕಳೆದುಕೊಂಡವರು.
ವಂಚನೆ ನಡೆಯುವುದು ಹೀಗೆ: ಸುಧೀರ್ ಅವರನ್ನು ಆನ್‌ಲೈನ್ ಮೂಲಕ ಪರಿಚಯಿಸಿಕೊಂಡ ವಂಚಕರು, ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರಿಸಿಕೊಂಡು ಪ್ರೇಕ್ಷಣೀಯ ಸ್ಥಳ, ಹೋಟೆಲ್ ಹಾಗೂ ಕಾಲೇಜುಗಳಿಗೆ ರೇಟಿಂಗ್ ಹಾಗೂ ರಿವ್ಯೂ ನೀಡುತ್ತಾ ಕುಳಿತಲ್ಲೇ ಹಣ ಗಳಿಸಬಹುದು ಎಂದು ನಂಬಿಸಿದ್ದಾರೆ. ನಂಬಿಕೆ ಬರಲಿ ಎಂಬ ಕಾರಣಕ್ಕೆ ಆರಂಭದಲ್ಲಿ 1,550 ರೂ. ಲಾಭ ನೀಡಿದ್ದಾರೆ. ಬಳಿಕ ಕಂಪನಿಯ ಖಾಯಂ ನೌಕರನಾಗಬೇಕಾದರೆ ಹೆಚ್ಚಿನ ಟಾಸ್ಕ್ ಮುಗಿಸಬೇಕು. ಇದಕ್ಕಾಗಿ ನಮ್ಮಲ್ಲಿ ಹಣ ಹೂಡಿಕೆ ಮಾಡಬೇಕು ಎಂದು ಹೇಳಿ ಲಕ್ಷಾಂತರ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ.