ಬಂಟ್ವಾಳ (ದಕ್ಷಿಣ ಕನ್ನಡ): ಬಂಟ್ವಾಳ ಹೊರವಲಯದ ನಾವೂರು ಎಂಬಲ್ಲಿ ಭಾನುವಾರ ಸಂಜೆ ನೇತ್ರಾವತಿ ನದಿಗೆ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲಾಗಿದ್ದಾರೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಹಾಗೂ ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ (14 ) ನೀರುಪಾಲಾಗಿರುವ ಬಾಲಕಿಯರು.
ಉರಿಬಿಸಿಲು, ಸೆಕೆ ಹಿನ್ನೆಲೆಯಲ್ಲಿ ಜನರು ನದಿ ದಂಡೆಯಲ್ಲಿ ಕುಳಿತುಕೊಳ್ಳುವುದು, ಸಮುದ್ರದಂಡೆಯಲ್ಲಿ ವಿಹರಿಸುವುದು ಸಾಮಾನ್ಯವಾಗಿದೆ. ಅದರಂತೆ ಉಳ್ಳಾಲದಿಂದ ನಾವೂರಿಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಕುಟುಂಬದ ಸದಸ್ಯರು ನೇತ್ರಾವತಿ ನದಿ ದಂಡೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭ ನದಿಯ ಪಕ್ಕದಲ್ಲೇ ಆಟವಾಡುತ್ತಿದ್ದ ಮಕ್ಕಳು ನದಿಗೆ ಇಳಿದು, ಆಳ ತಿಳಿಯಲಾರದಾಗಿದ್ದಾರೆ. ನೋಡನೋಡುತ್ತಿದ್ದಂತೆ ನದಿಯಲ್ಲಿ ಮುಳುಗಿ ಅವರು ನೀರುಪಾಲಾಗಿದ್ದಾರೆ.