ತುಮಕೂರು:ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಚಿಕ್ಕನಾಯಕನಹಳ್ಳಿಯಲ್ಲಿ ಮಾಧುಸ್ವಾಮಿ ಬೆಂಬಲಿಗ ಅಭ್ಯರ್ಥಿ ಭರ್ಜರಿ ಜಯ ಗಳಿಸಿದ್ದಾರೆ.
82 ಮತ ಪಡೆದು ಬುಳ್ಳೇನಹಳ್ಳಿ ಪ್ರಕಾಶ್ ಗೆದ್ದಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಪತ್ನಿ ಭಾರತಿ ಶ್ರೀನಿವಾಸ್ 68 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ತುಮುಲ್ ಚುನಾವಣೆ ಫಲಿತಾಂಶ ಪ್ರಕಟ (ETV Bharat) ತಿಪಟೂರಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ಪ್ರಕಾಶ್ ಜಯ ಗಳಿಸಿದ್ದಾರೆ. ತುಮಕೂರು ತಾಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಂಜೇಗೌಡ ಜಯ ಸಾಧಿಸಿದ್ದಾರೆ.
ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿ.ಸಿದ್ದಗಂಗಯ್ಯ ಗೆಲುವು ಸಾಧಿಸಿದ್ದರೆ, ತುರುವೇಕೆರೆ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಮಹಾಲಿಂಗಯ್ಯ ಭರ್ಜರಿ ಗೆಲುವು ಗಳಿಸಿದ್ದಾರೆ.
ಮಧುಗಿರಿಯಲ್ಲಿ ಕೊನೆಗೂ ಕೆ.ಎನ್.ರಾಜಣ್ಣ ಬೆಂಬಲಿಗನಿಗೆ ಜಯವಾಗಿದೆ. 61 ಮತಗಳನ್ನು ಪಡೆದು ನಾಗೇಶ್ ಬಾಬು ಗೆಲುವು ಸಾಧಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ಎಂದಿನಂತೆ ಎಸ್.ಆರ್.ಗೌಡ ಗೆಲುವು ಪಡೆದಿದ್ದರೆ, ಕುಣಿಗಲ್ನಲ್ಲಿ ಎಂದಿನಂತೆ ಡಿ.ಕೃಷ್ಣಕುಮಾರ್ಗೆ ಭರ್ಜರಿ ಗೆಲುವು ಸಿಕ್ಕಿದೆ.
126 ಮತಗಳನ್ನು ತೆಗೆದುಕೊಂಡು ಡಿ.ಕೃಷ್ಣಕುಮಾರ್ ಗೆಲುವು ಸಾಧಿಸಿದ್ದರೆ, ಪಾವಗಡದಲ್ಲಿ ಒಂದು ಮತದಿಂದ ಚಂದ್ರಶೇಖರ್ ರೆಡ್ಡಿ ಗೆಲುವು ಪಡೆದಿದ್ದಾರೆ.
ನವೆಂಬರ್ 10ರಂದು 10 ತಾಲೂಕು ಸೇರಿದಂತೆ 10 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇದರಲ್ಲಿ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1,119 ಮತಗಳ ಪೈಕಿ 1,188 ಮತಗಳು ಚಲಾವಣೆಗೊಂಡಿದ್ದವು.
ಇದನ್ನೂ ಓದಿ:ಸಂಕ್ರಾಂತಿ ನಂತರ ನಂದಿನಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಸುಳಿವು ನೀಡಿದ ಕೆಎಂಎಫ್ ಅಧ್ಯಕ್ಷರು - KMF MILK RATE