ಕರ್ನಾಟಕ

karnataka

ETV Bharat / state

'ಸಂತೆಕಟ್ಟೆಯ ಹೊಂಡ ಬಾವೆ ಕೆತ್ತಿದ ಬೊಂಡ': ರಸ್ತೆ ಅವ್ಯವಸ್ಥೆಗೆ ಕನ್ನಡಿ ಹಿಡಿದ ತುಳು ಹಾಡು - ಸಖತ್​ ವೈರಲ್​ - Udupi Santhekatte song

ಉಡುಪಿಯ ಸಂತೆಕಟ್ಟೆಯ ಅಂಡರ್​​ಪಾಸ್​ ಕಾಮಗಾರಿಯಿಂದ ಇದುವರೆಗೆ ಬಹಳ ಅಪಘಾತದ ನಡೆದಿದ್ದು, ಸಾರ್ವಜನಿಕರು ಬಳಲಿ ಬೆಂಡಾಗಿದ್ದಾರೆ. ರಸ್ತೆ ಅವ್ಯವಸ್ಥೆ ಮುಕ್ತಿಗೆ ಕೊನೆಯದಾಗಿ ಹಾಡಿನ ಮೊರೆ ಹೋಗಿದ್ದಾರೆ.

ಸಂತೆಕಟ್ಟೆ ರಸ್ತೆ
ಸಂತೆಕಟ್ಟೆ ರಸ್ತೆ ಕಾಮಾಗಾರಿ ಸ್ಥಿತಿಯಲ್ಲಿ (Madan Manipal)

By ETV Bharat Karnataka Team

Published : Sep 23, 2024, 8:08 PM IST

ಉಡುಪಿ:ಸಂತೆಕಟ್ಟೆ ರಸ್ತೆಯಲ್ಲಿ ದಿನನಿತ್ಯ ಅನೇಕರು ಸಂಚರಿಸುತ್ತಲೇ ಇರುತ್ತಾರೆ. ಇಲ್ಲಿ ಸಂಚರಿಸುವವರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ನಿರ್ಮಿಸುವವರಿಗೂ ಮತ್ತು ಜಿಲ್ಲಾಡಳಿತಕ್ಕೂ ಇದೊಂದು ಸವಾಲಾಗಿಯೇ ಉಳಿದಿದೆ. ಇದರ ಬಗ್ಗೆ ಒಂದು ವರದಿ ಇಲ್ಲಿದೆ.

ಸಂತೆಕಟ್ಟೆಯ ಅಂಡರ್​​ಪಾಸ್​ ಕಾಮಗಾರಿಯ ಅವ್ಯವಸ್ಥೆಯಿಂದ ವಾಹನ ಸವಾರರು ನಿತ್ಯ ಪರದಾಟವನ್ನು ನಡೆಸುತ್ತಿದ್ದಾರೆ. ಕಾಮಗಾರಿ ಆರಂಭವಾಗಿ ವರ್ಷಗಳೆ ಆಗಿದೆ. ಕಾಮಗಾರಿ ಮಾತ್ರ ಸಂಪೂರ್ಣವಾಗದೇ ನಿತ್ಯವು ವಾಹನ ಸವಾರರಿಗೂ ಇಲ್ಲಿ ಸಂಚರಿಸುವುದು ಬಹಳ ಕ್ಲಿಷ್ಟಕರವಾಗಿ ಬಿಟ್ಟಿದೆ.

ರಸ್ತೆ ಕಾಮಗಾರಿ ಬೇಗ ಮುಗಿಸುವಂತೆ ಜಿಲ್ಲಾಧಿಕಾರಿ, ಸಂಸದರು ಟೆಂಡರುದಾರರಿಗೆ ಸೂಚನೆ:ಸಂತೆಕಟ್ಟೆ ಅಂಡರ್ ಪಾಸ್​ ಕಾಮಗಾರಿ ಅವ್ಯವಸ್ಥೆಯಿಂದಾಗಿ ಅಪಘಾತಗಳು ಸಂಭವಿಸಿರುವುದಕ್ಕೆ ಲೆಕ್ಕವೇ ಇಲ್ಲ. ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಜಿಲ್ಲಾಧಿಕಾರಿ, ಸಂಸದರು ಟೆಂಡರುದಾರರಿಗೆ ಸೂಚನೆಯನ್ನು ನೀಡಿದ್ದು, ಮಾತ್ರವಲ್ಲ ಹೆಚ್ಚಿನ ಕೆಲಸಗಾರರನ್ನು ಹಾಕಿಸಿ ಆದಷ್ಟು ಬೇಗ ರಸ್ತೆ ಕಾಮಗಾರಿಯನ್ನು ಮುಗಿಸುವಂತೆ ಮಾರ್ಗದರ್ಶನ ನೀಡಿದ್ದಾರೆ.

ಸಂತೆಕಟ್ಟೆ ರಸ್ತೆಯ ಕುರಿತು ಹಾಡು ರಚನೆ: ಇದೀಗ ಅದೇ ರಸ್ತೆಯ ಕುರಿತು ಒಂದು ಸುಂದರ ತುಳು ಪದ್ಯ ರಚನೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಕಟಪಾಡಿ ನಿವಾಸಿ ಮದನ್ ಮಣಿಪಾಲ್ ಎಂಬವರು ಈ ಹಿಂದೆ ಕಟಪಾಡಿ ಶಿರ್ವ ರಸ್ತೆ ಅವ್ಯವಸ್ಥೆ ಬಗ್ಗೆ ಹಾಡು ರಚಿಸಿದ್ದು, ಅದು ಭಾರಿ ವೈರಲ್ ಆಗಿತ್ತು. ಬಳಿಕ ಆ ರಸ್ತೆ ರಿಪೇರಿಯನ್ನೂ ಕಂಡಿತ್ತು. ನಂತರದ ದಿನಗಳಲ್ಲಿ ಸಾರ್ವಜನಿಕರು ಉಡುಪಿಯ ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಕುರಿತು ಹಾಡು ರಚನೆ ಮಾಡುವಂತೆ ವಿನಂತಿ ಮಾಡುತ್ತಲೇ ಇದ್ದರು. ಇದೀಗ ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಕುರಿತು ತಾವೇ ಹಾಡು ರಚಿಸಿ ಹಾಡಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಹಾಡು ರಚನೆಯ ಮುಖ್ಯ ಉದ್ದೇಶ:ಸಂತೆಕಟ್ಟೆ ಅಂಡರ್​ ಪಾಸ್​ ಕಾಮಗಾರಿ ಅವ್ಯವಸ್ಥೆಯ ರಸ್ತೆಯ ದೆಸೆಯಿಂದಾಗಿ ಅಪಘಾತಗಳು ನಡೆದ ಪ್ರಕರಣ ಅನೇಕ. ಹೀಗಾಗಿ ಅಪಘಾತಕ್ಕೆ ಈಡಾದವರು ಮದನ್ ಅವರಿಗೆ ಫೋಟೋ ಕಳಿಸಿಕೊಡುತ್ತಿದ್ದರು. ಮಾತ್ರವಲ್ಲ ಒಮ್ಮೆ ಮದನ್ ಅವರ ಕಣ್ಣೆದುರೇ ಇಲ್ಲಿ ಅಪಘಾತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಂದರ ಹಾಡು ಬರೆದು, ಹಾಡಿದ್ದಾರೆ. "ಇದು ಯಾರನ್ನೂ ಕೆಣಕುವ ಉದ್ದೇಶದಿಂದ ಹಾಡಿದ್ದಲ್ಲ. ಹಾಡಿನ ಕಾರಣಕ್ಕಾದರೂ ಈ ರಸ್ತೆಗೆ ಮುಕ್ತಿ ಸಿಗಲಿ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಪಘಾತಕ್ಕೀಡಾದವರ ಆಪತ್ಬಾಂಧವ 'ಆಪತ್ಕಾಲಯಾನ ಸೇವೆ': ನೂತನ ಆಂಬ್ಯುಲೆನ್ಸ್​ಗಳ ಸೇವೆ ಹೇಗಿರಲಿದೆ? - Apatkalayana Ambulance

ABOUT THE AUTHOR

...view details