ಕರ್ನಾಟಕ

karnataka

ETV Bharat / state

ರಾಮನಗರ: ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ ತಗುಲಿ ಮೂವರು ಸಜೀವ ದಹನ, ಐವರಿಗೆ ಗಾಯ - ರಾಮನಗರ

ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ ತಗುಲಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ
ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ

By ETV Bharat Karnataka Team

Published : Feb 18, 2024, 7:40 PM IST

Updated : Feb 18, 2024, 9:00 PM IST

ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ

ರಾಮನಗರ:ಸುಗಂಧ ದ್ರವ್ಯ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಯ ಕುಂಬಳಗೋಡು ಬಳಿಯ ರಾಮಸಂದ್ರ ಗ್ರಾಮದಲ್ಲಿ ಇಂದು ನಡೆದಿದೆ. ಪರ್ಫ್ಯೂಮ್​ ಫಿಲ್ಲಿಂಗ್​ ವೇಳೆ ಏಕಾಏಕಿ ಸ್ಫೋಟ ಸಂಭವಿಸಿ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ವೇಳೆ 8 ಜನ ಕಾರ್ಮಿಕರು ಗೋದಾಮಿನಲ್ಲಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ 5 ಜನ ಹೊರಗೆ ಓಡಿ ಬಂದಿದ್ದಾರೆ. ಇನ್ನುಳಿದ ಮೂವರು ಗೋದಾಮಿನಿಂದ ಹೊರಬರಲಾಗದೇ ಸಜೀವ ದಹನವಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಮೃತ ದೇಹಗಳನ್ನು ಹೊರಗೆ ತೆಗೆದಿದ್ದಾರೆ. ಕುಂಬಳಗೋಡು ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವನ್ನಪ್ಪಿರುವ ಮೂವರು ಕಾರ್ಮಿಕರ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ. ಸದ್ಯ ಮೂವರ ಮೃತ ದೇಹವನ್ನ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಘಟನೆಯಲ್ಲಿ ಗಾಯಗೊಂಡಿರುವ ಐವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಗೋದಾಮು ಚಿಕ್ಕಬಸ್ತಿ ಮೂಲದ ವಿಠ್ಠಲ್ ಎಂಬುವವರಿಗೆ ಸೇರಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ; 10 ಮಂದಿ ಸಾವು

Last Updated : Feb 18, 2024, 9:00 PM IST

ABOUT THE AUTHOR

...view details