ಬೆಂಗಳೂರು:ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧಿಸಲ್ಪಟ್ಟಿರುವ ಪ್ರಜ್ವಲ್ ರೇವಣ್ಣರ ವಿರುದ್ಧ ಮೀಡಿಯಾ ಟ್ರಯಲ್ ಹಾಗೂ ತಮ್ಮ ವಿರುದ್ಧ ಅಪಪ್ರಚಾರ ನಡೆಸದಂತೆ ಅವರ ಪರ ವಕೀಲ ಅರುಣ್.ಜಿ ಮನವಿ ಮಾಡಿದ್ದಾರೆ. ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ ಭೇಟಿಯಾದ ಬಳಿಕ ಅವರು ಮಾತನಾಡಿದರು.
ಪ್ರಜ್ವಲ್ ರೇವಣ್ಣ ವಿರುದ್ಧ ಅಪಪ್ರಚಾರ, ಮೀಡಿಯಾ ಟ್ರಯಲ್ ಬೇಡ: ವಕೀಲ ಅರುಣ್.ಜಿ - Prajwal Revanna Case - PRAJWAL REVANNA CASE
ಪ್ರಜ್ವಲ್ ರೇವಣ್ಣ ವಿರುದ್ಧ ಅಪಪ್ರಚಾರ ಆಗುತ್ತಿದ್ದು, ಮೀಡಿಯಾ ಟ್ರಯಲ್ ಬೇಡ ಎಂದು ವಕೀಲ ಅರುಣ್.ಜಿ ಮನವಿ ಮಾಡಿದ್ದಾರೆ.
Published : May 31, 2024, 1:58 PM IST
|Updated : May 31, 2024, 3:18 PM IST
ನಾನೊಬ್ಬ ವಕೀಲನಾಗಿ ನನ್ನ ಕೆಲಸವನ್ನು ನ್ಯಾಯಾಲಯದಲ್ಲಿ ಮಾಡುತ್ತಿದ್ದೇನೆ. ಮಾಧ್ಯಮದವರೂ ತಮ್ಮ ಕೆಲಸ ಮಾಡಲಿ. ಅದರೆ ಪ್ರಜ್ವಲ್ ಬಗ್ಗೆ ನೆಗೆಟಿವ್ ವಿಚಾರಗಳನ್ನು ವರದಿ ಮಾಡುವುದು ಬೇಡ. ಎಸ್ಐಟಿ ಮುಂದೆ ಶರಣಾಗಿರುವ ಪ್ರಜ್ವಲ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ. ನ್ಯಾಯಾಲಯದ ಪ್ರಕ್ರಿಯೆಗಳನ್ನು ತಿಳಿಸಿದ್ದೇನೆ. ಜಾಮೀನು ಅರ್ಜಿಯ ವಿಚಾರಣೆ ಇಷ್ಟರಲ್ಲೇ ಶುರುವಾಗಲಿದೆ ಎಂದು ತಿಳಿಸಿದರು.