ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ಯಾವುದೇ ಪವರ್ ಶೇರಿಂಗ್ ಬಗ್ಗೆ ಚರ್ಚೆ ಆಗುತ್ತಿಲ್ಲ, ಅದರ ಅಗತ್ಯವೂ ಇಲ್ಲ: ಪರಮೇಶ್ವರ್ - POWER SHARING

ರಾಜ್ಯ ಕಾಂಗ್ರೆಸ್ ವಲಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಕೆಲವರು ಅನಾವಶ್ಯಕವಾಗಿ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಡಾ. ಜಿ ಪರಮೇಶ್ವರ್​​ ಹೇಳಿದರು.

PARAMESHWARA REACT ON POWER SHARING
ಗೃಹ ಸಚಿವ ಡಾ. ಜಿ ಪರಮೇಶ್ವರ್​​ (ETV Bharat)

By ETV Bharat Karnataka Team

Published : Jan 13, 2025, 3:57 PM IST

ತುಮಕೂರು:ರಾಜ್ಯ ಕಾಂಗ್ರೆಸ್​​ನಲ್ಲಿ ಯಾವುದೇ ರೀತಿಯ ಪವರ್ ಶೇರಿಂಗ್ ಬಗ್ಗೆ ಚರ್ಚೆ ಆಗುತ್ತಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಹೇಳಿದರು.

ತುಮಕೂರಿನಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲವರು ಅನಾವಶ್ಯಕವಾಗಿ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತು. ಯಾವುದೇ ರೀತಿಯ ಚರ್ಚೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಲ್​​ಪಿ ಸಭೆ ಕುರಿತು ಪ್ರತಿಕ್ರಿಯಿಸಿ, ಅಧಿವೇಶನದ ಸಂದರ್ಭದಲ್ಲಿ ಸಿಎಲ್​​ಪಿ ಸಭೆ ನಡೆಯಲಿದೆ. ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದು, ಅದನ್ನು ಚರ್ಚೆ ಮಾಡಲು ಸಭೆ ಕರೆದಿದ್ದಾರೆ. ಜಾತಿ ಜನಗಣತಿ ವರದಿ ಬಂದಿದ್ದು, ಅದನ್ನು ಮಂಡಿಸುವ ಬಗ್ಗೆಯೂ ಚರ್ಚಿಸಬಹುದು. ಆದರೆ, ಇನ್ನೂ ಸಭೆಯ ಅಜೆಂಡಾ ಬಂದಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಧೀರ್ ಸಿಂಗ್ ಸುರ್ಜೆವಾಲಾ ಬಂದಿದ್ದಾರೆ. ಸಭೆಗೆ ನಾನು ಕೂಡ ಹೋಗುವೆ. ಎಲ್ಲ ಶಾಸಕರು ಸಭೆಗೆ ಬರಲಿದ್ದಾರೆ ಎಂದರು.

ಗೃಹ ಸಚಿವ ಡಾ. ಜಿ ಪರಮೇಶ್ವರ್​​ (ETV Bharat)

ಡಿನ್ನರ್ ಸಭೆ ಬಗ್ಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಡಿನ್ನರ್ ಸಭೆ ಮುಂದೂಡಿದ್ದೇವೆ. ಸುರ್ಜೆವಾಲಾ ಅವರನ್ನು ಸಹ ಡಿನ್ನರ್ ಸಭೆಗೆ ಕರೆದಿದ್ದೇವೆ. ಹೈಕಮಾಂಡ್​​ಗೆ ತೊಂದರೆ ಆಗದಂತೆ ಡಿನ್ನರ್ ಸಭೆ ಮಾಡುತ್ತೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡಿರುವ ಕುರಿತು ಚರ್ಚೆ ಮಾಡಲು ಮತ್ತು ನಾಗಮೋಹನದಾಸ್ ವರದಿಯ ಬಗ್ಗೆ ಡಿನ್ನರ್ ಸಭೆಯಲ್ಲಿ ಮಾತನಾಡಲಾಗುವುದು ಎಂದು ಪರಮೇಶ್ವರ್​​ ಹೇಳಿದರು.

ಸಿರಿಧಾನ್ಯದ ಹಬ್ಬಕ್ಕೆ ಚಾಲನೆ:ಇದಕ್ಕೂ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಹಬ್ಬಕ್ಕೆ ಗೃಹ ಸಚಿವರು ಚಾಲನೆ ನೀಡಿದರು. ಚಾಲನೆ ನೀಡಲು ಎತ್ತಿನಗಾಡಿಯಲ್ಲಿ ಬಂದ ಸಚಿವ ಪರಮೇಶ್ವರ್ ಅವರೊಂದಿಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ ಕೂಡ ಹಾಜರಿದ್ದರು.

ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರಿಗೆ ಈ ಕಲಾ ಹಾಗೂ ಆಕರ ಆಹಾರದ ಮಹತ್ವ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಿರಿಧಾನ್ಯ ಹಬ್ಬದಲ್ಲಿ ಸಾಮೆ, ಬರಗು, ನವಣೆ, ಹಾರಕ, ಕೊರಲೆ ಸೇರಿದಂತೆ ಅನೇಕ ಸಿರಿಧಾನ್ಯಗಳನ್ನು ಪ್ರದರ್ಶಿಸಲಾಗಿತ್ತು.

ಇದನ್ನೂ ಓದಿ:ಸಿಎಂ ಕುರ್ಚಿ ಖಾಲಿ ಇಲ್ಲ, ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ: ಸಚಿವ ಹೆಚ್​.ಸಿ. ಮಹದೇವಪ್ಪ - H C MAHADEVAPPA

ABOUT THE AUTHOR

...view details