ಹುಬ್ಬಳ್ಳಿ:ಮನೆಯ ಮಾಲೀಕನ ಮಗನೇ ಬಾಡಿಗೆದಾರರ ಮನೆ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯ ಮೌಲಾಲಿ ಬ್ಲಾಕ್ ರಾಯ್ಕರ್ ಕಿರೋಸಿನ ಪಂಪ್ ಹತ್ತಿರ ನಡೆದಿದೆ. ಈ ಸಂಬಂಧ ಆರೋಪಿ ಜುನೇದ್ ಅಕ್ಬರ್ ಅಲಿ ಮಲಬಾರ್ (19) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ತಮ್ಮ ಮನೆಯಲ್ಲಿ ಬಾಡಿಗೆ ಇವರು ಅಸ್ಲಂ ಮಹಮ್ಮದ್ ಜಕ್ರಿಯಾ ಮನಿಯಾರ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ.
ಅ.10 ರಂದು ಅಸ್ಲಂ ತಮ್ಮ ಕುಟುಂಬದ ಸಮೇತವಾಗಿ ಅರಿಸಿಕೇರಿ ದರ್ಗಾಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಗೆ ಹಾಕಿದ್ದ ಬೀಗ ಮುರಿದು ಮನೆಯಲ್ಲಿದ್ದ 20 ಗ್ರಾಂ ತೂಕದ ಬಂಗಾರ, 275 ಗ್ರಾಂ ತೂಕದ ಬೆಳ್ಳಿ ಮತ್ತು 10 ಸಾವಿರ ನಗದನ್ನು ದೋಚಿದ್ದ. ಮರುದಿನ ಊರಿಂದ ಬಂದ ಅಸ್ಲಂ ಮನೆಯ ಬೀಗ ಮುರಿದಿದ್ದನ್ನು ಗಮನಿಸಿ ಪರಿಶೀಲಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಅದೇ ದಿನ ಶಹರ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿದ್ದರು.