ಚಾಮರಾಜನಗರ/ವಯನಾಡು: ಕೇರಳದ ವಯನಾಡು ಭೂ ಕುಸಿತ ದುರಂತದಲ್ಲಿ ರಾಜ್ಯದಿಂದ ಆರೋಗ್ಯ ನೆರವು ಸಿಕ್ಕಿದ್ದು, ಚಾಮರಾಜನಗರ ಮತ್ತು ಮೈಸೂರು ವೈದ್ಯರು ಕೇರಳದಲ್ಲಿ ತುರ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸೇವೆಗಾಗಿ ರಾಜ್ಯದಿಂದ 13 ಮಂದಿ ವೈದ್ಯರ ತಂಡವನ್ನು ನಿಯೋಜನೆ ಮಾಡಲಾಗಿದ್ದು, ಬುಧವಾರದಿಂದಲೇ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ.
ಗುಂಡ್ಲುಪೇಟೆ ಟಿಹೆಚ್‍ಒ ಡಾ. ಅಲೀಂ ಪಾಷಾ ನೇತೃತ್ವದಲ್ಲಿ ಚಾಮರಾಜನಗರದಿಂದ ಡಾ. ಮಹೇಶ್, ಡಾ. ತ್ರಿವೇಣಿ, ಡಾ. ಶ್ರೀಧರ್, ಡಾ. ಟೀನಾ, ಡಾ. ರಾಜು, ಡಾ. ಸಂದೀಪ್, ಮಹದೇವಸ್ವಾಮಿ, ಬಸವೇಗೌಡ ಹಾಗೂ ಮೈಸೂರು ಜಿಲ್ಲೆಯಿಂದ ಡಾ. ನಾಗೇಶ್ವರರಾವ್, ಡಾ. ಶ್ರೀನಿವಾಸ್, ಡಾ. ಶೇಷಾದ್ರಿ, ಉಮೇಶ್ ಬಾಬು ಸೇರಿದಂತೆ ಒಟ್ಟು 13 ಮಂದಿಯನ್ನು ಮೈಸೂರು ವಿಭಾಗೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ನಿರ್ದೇಶಕರು ತುರ್ತು ಸೇವೆಗೆ ನಿಯೋಜಿಸಿದ್ದಾರೆ.