ಹುಬ್ಬಳ್ಳಿ:ಶ್ರೀ ರಾಮ ಸೇನೆಯ ಪ್ರಮುಖ ಮುಖಂಡರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ.
ಶ್ರೀರಾಮ ಸೇನೆ ಪ್ರಮುಖರ ಸಾಮಾಜಿಕ ಮಾಧ್ಯಮ ಖಾತೆಗಳು ಬ್ಲಾಕ್: ಹು - ಧಾ ಪೊಲೀಸ್ ಕಮಿಷನರ್ಗೆ ಮುತಾಲಿಕ್ ದೂರು - Social media block - SOCIAL MEDIA BLOCK
ಶ್ರೀ ರಾಮ ಸೇನೆಯ ಪ್ರಮುಖ ಮುಖಂಡರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ.
Published : Jul 19, 2024, 9:41 PM IST
|Updated : Jul 19, 2024, 10:32 PM IST
ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಕಳೆದ 15 ದಿನಗಳಿಂದ ನನ್ನ ಸೇರಿ ಶ್ರೀರಾಮ್ ಸೇನೆಯ 20ಕ್ಕೂ ಹೆಚ್ಚು ಪ್ರಮುಖರ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಗಳನ್ನು ಬ್ಲಾಕ್ ಮಾಡಿದ್ದಾರೆ. ಲವ್ ಜಿಹಾದ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹೆಲ್ಪ್ ಲೈನ್, ತ್ರಿಶೂಲ್ ದೀಕ್ಷೆ ಮಾಡಿದ್ದಕ್ಕೆ ರಾಜ್ಯಾದ್ಯಂತ ಪ್ರಚಾರ ಸಿಕ್ತು. ಇದರಿಂದ ಒಂದು ಸಮುದಾಯದವರು ಕೆರಳಿ, ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಲಾಕ್ ಮಾಡಿಸಿದ್ದಾರೆ ಎಂಬ ಸುದ್ದಿ ಇದೆ. ವಿಶೇಷವಾಗಿ ಭಟ್ಕಳ, ಮಂಗಳೂರು ಮತ್ತು ವಿದೇಶದಲ್ಲಿರುವ ಕೆಲವ ಪಾತ್ರ ಇದೆ ಎಂಬ ಅಂಶ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ಗೆ ದೂರು ಕೊಟ್ಟಿದ್ದೇವೆ. ಕೊಡಲೇ ತನಿಖೆ ನಡೆಸಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂಬ ವಿನಂತಿ ಮಾಡಿದ್ದೇವೆ ಎಂದರು.