ಕರ್ನಾಟಕ

karnataka

ETV Bharat / state

ದಸರಾ: ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ ಆರಂಭ - SPECIAL TRAIN SERVICE

ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ ಆರಂಭಿಸಲು ನಿರ್ಧರಿಸಿದೆ.

special train service
ನೈಋತ್ಯ ರೈಲ್ವೆ (ETV Bharat)

By ETV Bharat Karnataka Team

Published : Oct 8, 2024, 7:15 PM IST

ಹುಬ್ಬಳ್ಳಿ:ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಅವುಗಳ ಮಾಹಿತಿ ಹೀಗಿದೆ.

1. ರೈಲು ಸಂಖ್ಯೆ 07305/07306 ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು: ರೈಲು ಸಂಖ್ಯೆ 07305 ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್​ಪ್ರೆಸ್ ರೈಲು ಅಕ್ಟೋಬರ್ 10, 2024ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ 11:30 ಗಂಟೆಗೆ ಹೊರಟು, ಅದೇ ದಿನ ಯಶವಂತಪುರ 19:40 ಗಂಟೆಗೆ ತಲುಪಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ರೈಲು ಸಂಖ್ಯೆ 07306 ಯಶವಂತಪುರ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 10, 2024 ರಂದು ಯಶವಂತಪುರದಿಂದ 20:55 ಗಂಟೆಗೆ ಹೊರಟು, ಮರುದಿನ ಬೆಳಗಾವಿಗೆ 08:15 ಗಂಟೆಗೆ ತಲುಪಲಿದೆ. ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

2. ರೈಲು ಸಂಖ್ಯೆ 07307/07308 ಬೆಳಗಾವಿ-ಮೈಸೂರು-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು: ರೈಲು ಸಂಖ್ಯೆ 07307 ಬೆಳಗಾವಿ-ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 11, 2024 ರಂದು ಬೆಳಗಾವಿಯಿಂದ 17:30 ಗಂಟೆಗೆ ಹೊರಟು, ಮರುದಿನ ಮೈಸೂರಿಗೆ 06:25 ಗಂಟೆಗೆ ತಲುಪಲಿದೆ. ಈ ರೈಲು ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ಹಾಸನ, ಹೊಳೆ ನರಸೀಪುರ ಮತ್ತು ಕೃಷ್ಣರಾಜನಗರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 07308 ಮೈಸೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 12, 2024 ರಂದು ಮೈಸೂರಿನಿಂದ 22:30 ಗಂಟೆಗೆ ಹೊರಟು, ಮರುದಿನ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ 07:00 ಗಂಟೆಗೆ ತಲುಪಲಿದೆ. ಈ ರೈಲು ಕೃಷ್ಣರಾಜನಗರ, ಹೊಳೆ ನರಸೀಪುರ, ಹಾಸನ, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು ಮತ್ತು ಹಾವೇರಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ವಿಶೇಷ ರೈಲುಗಳು (07305/06 ಮತ್ತು 07307/08) 1 ಎಸಿ 2-ಟೈಯರ್, 1 ಎಸಿ 3-ಟೈಯರ್, 10 ಸ್ಲೀಪರ್ ಕ್ಲಾಸ್, 2 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ 16 ಬೋಗಿಗಳನ್ನು ಒಳಗೊಂಡಿರುತ್ತವೆ.

3. ರೈಲು ಸಂಖ್ಯೆ 06279/06280 ಮೈಸೂರು-ಕೆಎಸ್ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು: ರೈಲು ಸಂಖ್ಯೆ 06279 ಮೈಸೂರು-ಕೆಎಸ್‌ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ಅಕ್ಟೋಬರ್ 9, 10, 11, 12 ಮತ್ತು 13, 2024 ರಂದು ಮೈಸೂರಿನಿಂದ 23:15 ಗಂಟೆಗೆ ಹೊರಟು, ಮರುದಿನ ಕೆಎಸ್‌ಆರ್ ಬೆಂಗಳೂರಿಗೆ 02:30 ಗಂಟೆಗೆ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06280 ಕೆಎಸ್ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅಕ್ಟೋಬರ್ 10, 11, 12, 13 ಮತ್ತು 14, 2024 ರಂದು ಕೆಎಸ್ಆರ್ ಬೆಂಗಳೂರಿನಿಂದ 03:00 ಗಂಟೆಗೆ ಹೊರಟು, ಅದೇ ದಿನ ಮೈಸೂರಿಗೆ 06:15 ಗಂಟೆಗೆ ತಲುಪಲಿದೆ.

ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ನಾಗನಹಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ಚಂದ್ರಗಿರಿ, ಕೊಪ್ಪಳ ಹಾಲ್ಟ್, ಬ್ಯಾಡರಹಳ್ಳಿ, ಎಲಿಯೂರು, ಮಂಡ್ಯ, ಹನಕೆರೆ, ಮದ್ದೂರು, ಸೆಟ್ಟಿಹಳ್ಳಿ, ಚನ್ನಪಟ್ಟಣ, ರಾಮನಗರಂ, ಬಿಡದಿ, ಹೆಜ್ಜಾಲ, ಕೆಂಗೇರಿ ಮತ್ತು ನಾಯಂಡಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ಈ ವಿಶೇಷ ರೈಲುಗಳು 21 ಬೋಗಿಗಳನ್ನು (06279/80) 18- 2ನೇ ದರ್ಜೆಯ ಬೋಗಿಗಳು, 1-ಚೇರ್ ಕಾರ್ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ 21 ಬೋಗಿಗಳನ್ನು ಒಳಗೊಂಡಿರುತ್ತವೆ.

4. ರೈಲು ಸಂಖ್ಯೆ 06281/06282 ಮೈಸೂರು-ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು: ರೈಲು ಸಂಖ್ಯೆ 06281 ಮೈಸೂರು-ಚಾಮರಾಜನಗರ ಕಾಯ್ದಿರಿಸದ ವಿಶೇಷ ರೈಲು ಅಕ್ಟೋಬರ್ 9, 10, 11, 12 ಮತ್ತು 13, 2024 ರಂದು ಮೈಸೂರಿನಿಂದ 23:30 ಗಂಟೆಗೆ ಹೊರಟು, ಮರುದಿನ ಚಾಮರಾಜನಗರವನ್ನು 01:30 ಗಂಟೆಗೆ ತಲುಪಲಿದೆ.

ರೈಲು ಸಂಖ್ಯೆ 06282 ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅಕ್ಟೋಬರ್ 10, 11, 12, 13 ಮತ್ತು 14, 2024 ರಂದು ಚಾಮರಾಜನಗರದಿಂದ 04:15 ಗಂಟೆಗೆ ಹೊರಟು, ಅದೇ ದಿನ ಮೈಸೂರು 06:00 ಗಂಟೆಗೆ ತಲುಪಲಿದೆ.

ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೋಳ, ತಾಂಡವಪುರ ಹಾಲ್ಟ್, ಸುಜಾತಪುರಂ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಟ್, ನರಸಂಬುಧಿ ಹಾಲ್ಟ್, ಕವಲಂದೆ ಹಾಲ್ಟ್, ಕೊಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಮತ್ತು ಮರಿಯಾಲ್ ಗಂಗವಾಡಿ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ವಿಶೇಷ ರೈಲುಗಳು (06281/82) 15 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ 17 ಬೋಗಿಗಳನ್ನು ಒಳಗೊಂಡಿರುತ್ತದೆ.

5. ರೈಲು ಸಂಖ್ಯೆ 06283/06284 ಮೈಸೂರು-ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು

: ರೈಲು ಸಂಖ್ಯೆ 06283 ಮೈಸೂರು-ಚಾಮರಾಜನಗರ ಕಾಯ್ದಿರಿಸದ ವಿಶೇಷ ರೈಲು ಅಕ್ಟೋಬರ್ 12, 2024 ರಂದು ಮೈಸೂರಿನಿಂದ 22:45 ಗಂಟೆಗೆ ಹೊರಟು, ಅಕ್ಟೋಬರ್ 13, 2024 ರಂದು 00:40 ಗಂಟೆಗೆ ಚಾಮರಾಜನಗರವನ್ನು ತಲುಪಲಿದೆ.

ರೈಲು ಸಂಖ್ಯೆ 06284 ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅಕ್ಟೋಬರ್ 13, 2024 ರಂದು ಚಾಮರಾಜನಗರದಿಂದ 01:50 ಗಂಟೆಗೆ ಹೊರಟು, ಅದೇ ದಿನ ಮೈಸೂರು 03:50 ಗಂಟೆಗೆ ತಲುಪಲಿದೆ. ಈ ವಿಶೇಷ ರೈಲುಗಳು ರೈಲು ಸಂಖ್ಯೆ 06281/82 ರಂತೆಯೇ ಅದೇ ನಿಲ್ದಾಣಗಳಲ್ಲಿ ನಿಲ್ಲುತ್ತವೆ.

ವಿಶೇಷ ರೈಲುಗಳು (06283/84) 14 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್ / ಡಿ ಬೋಗಿಗಳನ್ನು ಒಳಗೊಂಡಿರುತ್ತವೆ.

6. ರೈಲು ಸಂಖ್ಯೆ 06285/86 ಕೆಎಸ್ಆರ್ ಬೆಂಗಳೂರು-ಮೈಸೂರು-ಕೆಎಸ್ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು: ರೈಲು ಸಂಖ್ಯೆ 06285 ಕೆಎಸ್ಆರ್ ಬೆಂಗಳೂರು-ಮೈಸೂರು ಕಾಯ್ದಿರಿಸದ ವಿಶೇಷ ರೈಲು ಅಕ್ಟೋಬರ್ 9, 10, 11, 12 ಮತ್ತು 13, 2024 ರಂದು ಕೆಎಸ್ಆರ್ ಬೆಂಗಳೂರಿನಿಂದ 12:15 ಗಂಟೆಗೆ ಹೊರಟು, ಅದೇ ದಿನ ಮೈಸೂರು 15:20 ಗಂಟೆಗೆ ತಲುಪಲಿದೆ.

ರೈಲು ಸಂಖ್ಯೆ 06286 ಮೈಸೂರು-ಕೆಎಸ್ಆರ್ ಬೆಂಗಳೂರು ಕಾಯ್ದಿರಿಸದ ವಿಶೇಷ ರೈಲು ಅಕ್ಟೋಬರ್ 9, 10, 11, 12 ಮತ್ತು 13, 2024ರಂದು ಮೈಸೂರಿನಿಂದ 15:30 ಗಂಟೆಗೆ ಹೊರಟು, ಅದೇ ದಿನ ಕೆಎಸ್ಆರ್ ಬೆಂಗಳೂರು 19:15 ಗಂಟೆಗೆ ತಲುಪಲಿದೆ.

ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನ ಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ರಾಮನಗರಂ, ಚನ್ನಪಟ್ಟಣ, ಶೆಟ್ಟಿಹಳ್ಳಿ, ಮದ್ದೂರು, ಹನಕೆರೆ, ಮಂಡ್ಯ, ಎಲಿಯೂರು, ಬ್ಯಾಡರಹಳ್ಳಿ, ಚಂದ್ರಗಿರಿ ಕೊಪ್ಪಳ ಹಾಲ್ಟ್, ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲ್ಲಲಿವೆ. ಈ ವಿಶೇಷ ರೈಲುಗಳು (06285/86) 8 ಡೆಮು ಕಾರ್ ಬೋಗಿಗಳನ್ನು ಒಳಗೊಂಡಿವೆ.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 139ಗೆ ಸಂಪರ್ಕಿಸಿ ಅಥವಾ ವೆಬ್‌ಸೈಟ್ www.enquiry.indianrail.gov.in.ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ರೈಲುಗಳ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ: ಮೈಸೂರು ದಸರಾ ಮಹೋತ್ಸವದ ಸಮಯದಲ್ಲಿ ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ತೆರವುಗೊಳಿಸಲು ರೈಲು ಸಂಖ್ಯೆ 17301/17302 ಮೈಸೂರು-ಬೆಳಗಾವಿ-ಮೈಸೂರು ಡೈಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ನೀಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ಅಕ್ಟೋಬರ್ 9ರಿಂದ ಅಕ್ಟೋಬರ್ 13, 2024ರವರೆಗೆ ಮೈಸೂರಿನಿಂದ ಪ್ರಾರಂಭವಾಗುವ, ರೈಲು ಸಂಖ್ಯೆ 17301 ಮೈಸೂರು-ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ ರೈಲು ಬೆಳಗುಳ (9:43/9:44 PM), ಸಾಗರಕಟ್ಟೆ (9:56/9:57 PM) , ಹೊಸ ಅಗ್ರಹಾರ (10:29/10:30 PM), ಅಕ್ಕಿಹೆಬ್ಬಾಳು (10:37/10:38 PM), ಬೀರಹಳ್ಳಿ ಹಾಲ್ಟ್ (10:43/10:44 PM) ಮತ್ತು ಮಾವಿನಕೆರೆ (11:09/11:10 PM) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಹೊಂದಿರುತ್ತದೆ.

ಅಕ್ಟೋಬರ್ 11, 2024ರಂದು ಬೆಳಗಾವಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಮಾವಿನಕೆರೆ (3:22/3:23 AM), ಬೀರಹಳ್ಳಿ ಹಾಲ್ಟ್ (4:02/4:03 AM), ಅಕ್ಕಿಹೆಬ್ಬಾಳು (4:09/4:10 AM), ಹೊಸ ಅಗ್ರಹಾರ (4:18/4:19 AM), ಸಾಗರಕಟ್ಟೆ (4:45/4:46 AM) ಮತ್ತು ಬೆಳಗುಳ (4:59/5:00 AM) ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಹೊಂದಿರುತ್ತದೆ.

ದಸರಾ ಉತ್ಸವದಲ್ಲಿ ಭಾಗವಹಿಸುವ ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಪ್ರಯಾಣಿಕರೇ ಗಮನಿಸಿ: ಹಬ್ಬಗಳಿಗೆ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳು; ಪಟ್ಟಿ ಇಲ್ಲಿದೆ - Special Train For Festivals

ABOUT THE AUTHOR

...view details