ಕರ್ನಾಟಕ

karnataka

ETV Bharat / state

ರಕ್ಷಣೆ ಕೋರಿ ಪ್ರಧಾನಿ‌, ಗೃಹ ಸಚಿವರಿಗೆ ಪತ್ರ ಬರೆದ ಮುಡಾ ದೂರುದಾರ ಸ್ನೇಹಮಯಿ ಕೃಷ್ಣ - SNEHAMAYI KRISHNA

ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

snehamayi-krishna
ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ (ETV Bharat)

By ETV Bharat Karnataka Team

Published : Dec 27, 2024, 7:40 PM IST

ಮೈಸೂರು: ಇತ್ತೀಚೆಗೆ ಬಿಡುಗಡೆಯಾದ ವಿಡಿಯೋವೊಂದರಲ್ಲಿ ನನ್ನ ವಿರುದ್ಧ ಸಮಯಕ್ಕಾಗಿ ಸಿಎಂ ಸಿದ್ದರಾಮಯ್ಯ ಕಾಯುತ್ತಿದ್ದಾರೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ, ನನ್ನ ಕುಟುಂಬ ಹಾಗೂ ಹಿತೈಷಿಗಳು ಗಾಬರಿಯಾಗಿದ್ದಾರೆ. ಹೀಗಾಗಿ, ನನಗೆ ರಕ್ಷಣೆ ನೀಡಬೇಕು ಎಂದು ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದೇನೆ ಎಂದು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು.

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಡಾ ಹಗರಣಗಳ ವಿರುದ್ಧ ಹೋರಾಟ ಪ್ರಾರಂಭಿಸಿದ ಮೇಲೆ ನನಗೆ ಆಮಿಷ ಹಾಗೂ ಬೆದರಿಕೆಗಳು ಬಂದಿವೆ. ಕಳೆದ ಆಗಸ್ಟ್​ನಲ್ಲೇ ನನಗೆ ಸೂಕ್ತ ರಕ್ಷಣೆಗಾಗಿ ಗನ್ ಮ್ಯಾನ್​ ಕೊಡಿ ಎಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದೆ‌ ಎಂದರು.

ಸ್ನೇಹಮಯಿ‌ ಕೃಷ್ಣ ಹೇಳಿಕೆ (ETV Bharat)

ಆದರೆ, ಇದುವರೆಗೂ ಕೂಡಾ ನನಗೆ ಗನ್​ಮ್ಯಾನ್​ ರಕ್ಷಣೆ ಕೊಟ್ಟಿಲ್ಲ. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಇತರೆ ಹಲವಾರು ಸಂಘ-ಸಂಸ್ಥೆಗಳು ನನ್ನ ಪರವಾಗಿ ಪೊಲೀಸ್​ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಕೂಡಾ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರೇ ಮೊದಲ ಆರೋಪಿಯಾಗಿರುವುದರಿಂದ ನನಗೆ ರಕ್ಷಣೆ ಕೊಡಲು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಹೋರಾಟ ಪ್ರಾರಂಭಿಸಿ ತುಂಬಾ ದಿನಗಳಾಗಿದೆ. ಇವಾಗ ನಿಮಗೆ ರಕ್ಷಣೆ ಏಕೆ? ಎಂಬ ಮಾಧ್ಯಮದವರ ಪ್ರಶ್ನೆಗೆ, ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಸದ್ಯದಲ್ಲಿಯೇ ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಎಲ್ಲಾ ಸಾಧ್ಯತೆ ಇರುವುದರಿಂದ ಅವರ ಪ್ರಯತ್ನಗಳು ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿವೆ ಎಂಬ ಮಾಹಿತಿ ಬಂದಿದೆ. ಹೀಗಾಗಿ, ನನಗಲ್ಲದಿದ್ದರೂ ನನ್ನ ಕುಟುಂಬದವರಿಗೆ ರಕ್ಷಣೆಯ ಅಗತ್ಯ ಕಂಡುಬಂದಿದೆ ಎಂದರು.

ಮಂಜು ವಿರುದ್ಧ ದೂರು ನೀಡಿದ್ದೇನೆ:ನನ್ನ ಬಗ್ಗೆವಿಡಿಯೋದಲ್ಲಿಮಂಜು ಎಂಬವರು ಮಾತನಾಡಿದ್ದಾರೆ. ಅವರು ಈಗಾಗಲೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧನಕ್ಕೊಳಪಡಿಸಿದ ಸಂದರ್ಭದಲ್ಲಿ ಆ ವಿಡಿಯೋದಲ್ಲಿ ಏನು ಮಾತನಾಡಿದ್ದಾರೋ ಅದಕ್ಕೆ ಪೂರಕವಾಗಿ ಅವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ಆಮಿಷ ಆರೋಪ: ಲೋಕಾಗೆ ಸ್ನೇಹಮಯಿ ಕೃಷ್ಣ ದೂರು, ಹೋರಾಟ ನಿಲ್ಲಸಬೇಡಿ ಎಂದ ವಿಶ್ವನಾಥ್ - SNEHAMAYI KRISHNA

ABOUT THE AUTHOR

...view details