ಮೈಸೂರು:ಬಜೆಟ್‌ನಲ್ಲಿ ತವರು ಜಿಲ್ಲೆ ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವ ಪ್ರಮುಖ ಕೊಡುಗೆಗಳು ಇಂತಿವೆ:
- ಮೈಸೂರಿನಲ್ಲಿ ಹಾಲಿ ಇರುವ 40 ಹಾಸಿಗೆಯ ನೆಪ್ರೋ-ಯೂರಾಲಜಿ ಆಸ್ಪತ್ರೆಯನ್ನು 100 ಹಾಸಿಗೆಯ
ಆಸ್ಪತ್ರೆಯನ್ನಾಗಿ ಉನ್ನತೀಕರಣ. - ಮೈಸೂರು ಮೆಡಿಕಲ್ ಕಾಲೇಜಿನ (ಎಂಎಂಸಿಆರ್‌ಐ) ಶತಮಾನೋತ್ಸವದ ನೆನಪಿಗಾಗಿ ಕೆ.ಆರ್.ಆಸ್ಪತ್ರೆ ಆವರಣದಲ್ಲಿ 75 ಕೋಟಿ ವೆಚ್ಚದಲ್ಲಿ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ.
- ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್ ಹಾಗೂ Human Milk Bank ಘಟಕ ಸ್ಥಾಪನೆ.
- ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ 54 ಕೋಟಿ ಹಾಗೂ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 116 ಕೋಟಿ.
- ಪ್ರಖ್ಯಾತ ಲ್ಯಾನ್ಸ್ ಗೌಟ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿ.
- ಮೈಸೂರಿನ ಹೊರವಲಯದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಎನ್.ಹೆಚ್.ಎ.ಐ ಸಹಯೋಗದೊಂದಿಗೆ ಮೇಲ್ಸೇತುವೆ ನಿರ್ಮಾಣ.
- ಕುಕ್ಕರಹಳ್ಳಿ ಹಾಗೂ ಕೆ.ಆರ್.ಎಸ್ ರಸ್ತೆಯ ರೈಲ್ವೆಯ ಮೇಲು ಸೇತುವೆ ಹಾಗೂ ಕೆಳಸೇತುವೆ
ನಿರ್ಮಾಣ. - ಎ.ಪಿ.ಎಂ.ಸಿ.ಯಲ್ಲಿ ಶೀತಲಗೃಹವನ್ನು 40 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವುದು.
- ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಯೋ-ಸಿಎನ್‌ಜಿ ಪ್ಲೆಂಟ್
ಸ್ಥಾಪನೆ. - ನಗರಕ್ಕೆ ಪೆರಿಫೆರಲ್ ರಿಂಗ್ ರಸ್ತೆಯನ್ನು ಪಿಪಿಪಿ ಅಥವಾ ಟೌನ್ ಪ್ಲಾನಿಂಗ್ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲಾಗುವುದು.
11. ವಿಮಾನ ನಿಲ್ದಾಣದ ರನ್-ವೇ ವಿಸ್ತರಣೆಗೆ 43 ಕೋಟಿ ಬಿಡುಗಡೆಗೊಳಿಸಿದೆ.
12. ವಿಜ್ಞಾನ ಕೇಂದ್ರ / ತಾರಾಲಯ ಹೊಸದಾಗಿ ಸ್ಥಾಪನೆ.
13. ಇಂಟಿಗ್ರೇಟೆಡ್ ಟೌನ್ಶಿಪ್ಗಳನ್ನು ಅಭಿವೃದ್ಧಿ.
ಬಜೆಟ್ ಬಗ್ಗೆ ಗಣ್ಯರ ಹೇಳಿಕೆ :