ಕರ್ನಾಟಕ

karnataka

ETV Bharat / state

ಗೀತಾ ಅವರು ಶಿವಮೊಗ್ಗ ಜನರ ಸೇವೆ ಮಾಡುವ ಗ್ಯಾರಂಟಿ ಕೊಡುತ್ತೇನೆ: ಶಿವರಾಜ್ ಕುಮಾರ್ - Shivaraj Kumar

ನಟ ಶಿವರಾಜ್ ಕುಮಾರ್ ಇಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಪಡವಗೋಡು ಗ್ರಾ.ಪಂ ವ್ಯಾಪ್ತಿ ಲಿಂಗದಹಳ್ಳಿಯಲ್ಲಿ ಮತಪ್ರಚಾರ ನಡೆಸಿದರು.

Actor Shivraj Kumar spoke at the campaign meeting.
ಪ್ರಚಾರ ಸಭೆಯಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡಿದರು.

By ETV Bharat Karnataka Team

Published : Apr 3, 2024, 10:53 PM IST

Updated : Apr 3, 2024, 11:05 PM IST

ಪ್ರಚಾರ ಸಭೆಯಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡಿದರು.

ಶಿವಮೊಗ್ಗ:ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ನಾನು ಗ್ಯಾರಂಟಿ ನೀಡುತ್ತೇನೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಇಂದು ಪತ್ನಿ ಗೀತಾ ಶಿವರಾಜ್ ಕುಮಾರ್ ಪರ ಸಾಗರ ತಾಲೂಕು ಪಡವಗೋಡು ಗ್ರಾ.ಪಂ ವ್ಯಾಪ್ತಿಯ ಲಿಂಗದಹಳ್ಳಿ ಹಾಗೂ ಭೀಮನೇರಿ ಗ್ರಾಪಂ ಸೂರನಗದ್ದೆ ಗ್ರಾಮದಲ್ಲಿ ಅವರು ಪ್ರಚಾರ ಸಭೆ ನಡೆಸಿದರು. ಈ ವೇಳೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಸಾಗರ ತಾಲೂಕು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

"ಮೊನ್ನೆ ನನಗೆ ಸ್ವಲ್ಪ ಹುಷಾರಿರಲಿಲ್ಲ. ನನಗೆ ಪ್ರಚಾರಕ್ಕೆ ಇಂದು ಬರುವುದು ಬೇಡ ಎಂದಿದ್ದರು. ಆದರೆ ಕೆಲವು ಕಡೆ ಹೋಗಿ, ಕೆಲವು ಕಡೆ ಹೋಗದೇ ಇರುವುದು ಚೆನ್ನಾಗಿರದು. ಯಾಕಂದ್ರೆ ಜನರನ್ನು ನೋಡುವುದು ನಮಗೆ ಖುಷಿ. ಆರೋಗ್ಯದ ಸಮಸ್ಯೆ ಏನೇ ಇದ್ರೂ ಸಹ ಅದು ನಮ್ಮೊಳಗಡೆ ಇರಬೇಕು, ನಾನು ಚೆನ್ನಾಗಿದ್ದೇನೆ ಅಂದ್ರೆ, ನಿಮ್ಮೆಲ್ಲರ ಆಶೀರ್ವಾದ ಅಷ್ಟೇ" ಎಂದು ಶಿವರಾಜ್ ಕುಮಾರ್ ಹೇಳಿದರು.

"ಕಳೆದ 5 ವರ್ಷಗಳ ಹಿಂದೆ ಗೀತಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಜೀವನದಲ್ಲಿ ಸೋಲು, ಗೆಲುವು ಇರಬೇಕು ಎಂದು ಆಗ ಹೇಳಿದ್ದೆ. ಸಿನಿಮಾದಲ್ಲೂ ಸೋಲು ಗೆಲುವು ಇದ್ದೇ ಇರುತ್ತದೆ. ಎಲ್ಲರ ಭವಿಷ್ಯದಲ್ಲೂ ಸೋಲು ಗೆಲುವು ಇರುತ್ತದೆ. ಸೋತೆವು ಎಂದು ಸುಮ್ಮನೆ ಕೂರದೆ, ಕೆಲಸ ಮಾಡಬೇಕು" ಎಂದು ಅವರು ಸಲಹೆ ನೀಡಿದರು.

"2024 ನಮಗೆ ಚೆನ್ನಾಗಿ ಆಗುತ್ತದೆ ಎಂಬ ಭರವಸೆಯಿಂದ ಬಂದಿದ್ದೇವೆ. ಗೀತಾ ಶೇ.100ರಷ್ಟು‌ ಕೆಲಸ ಮಾಡುತ್ತಾರೆ. ನಮ್ಮ ತಂದೆ ತಾಯಿ ಸ್ಥಾಪಿಸಿ ನಡೆಸುತ್ತಿದ್ದ ಶಕ್ತಿಧಾಮವನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ.‌ ಅಲ್ಲಿ 200 ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಓದಿನ ಜತೆ ಜೀವನದಲ್ಲಿ ಅವರ ಆಸೆಯನ್ನು ಈಡೇರಿಸಿಕೊಳ್ಳಲು ಎಲ್ಲ ರೀತಿಯ ಸಹಕಾರವನ್ನು ಗೀತಾ ಮಾಡುತ್ತಿದ್ದಾರೆ" ಎಂದು ತಿಳಿಸಿದರು.

ಗೀತಾ ಶಿವರಾಜ್ ಕುಮಾರ್ ಮಾತನಾಡಿ, "ನಮ್ಮ ತಂದೆ ಬಂಗಾರಪ್ಪನವರು ಗ್ರಾಮೀಣ ಕೃಪಾಂಕ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಇದರಿಂದ ಹಲವು ಗ್ರಾಮೀಣ ಭಾಗದವರಿಗೆ ಉದ್ಯೋಗ ಸಿಕ್ಕಿದೆ. ಅದೇ ರಾಜ್ಯ ಸರ್ಕಾರದ ಗ್ಯಾರಂಟಿಗಳು ಜನರ ಮನ ಗೆದ್ದಿವೆ. ಗ್ಯಾರಂಟಿ ಯೋಜನೆಯಿಂದ ಜನ ಸೋಮಾರಿಗಳಾಗಲ್ಲ. ಇದರಿಂದ ಅವರ ಜೀವನ ನಡೆಯುತ್ತಿದೆ. ಈ ಬಾರಿ ನನಗೆ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಆಶೀರ್ವಾದ ಮಾಡಿ" ಎಂದು ಮನವಿ ಮಾಡಿದರು.

ಇದನ್ನೂಓದಿ:ಪ್ರಧಾನಮಂತ್ರಿ ಆವಾಸ್ ಯೋಜನೆ ಟೀಕಿಸಿದ ಸಿಎಂ ಸಿದ್ದರಾಮಯ್ಯ - CM Siddaramaiah Campaign

Last Updated : Apr 3, 2024, 11:05 PM IST

ABOUT THE AUTHOR

...view details