ಕರ್ನಾಟಕ

karnataka

ETV Bharat / state

ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುಗಡೆ: ಶರಾವತಿ ನೆರೆ ತಡೆಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಿದ್ಧತೆ - Gerusoppa Dam

ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಡುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕೆಪಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Linganamakki Reservoir
ಲಿಂಗನಮಕ್ಕಿ ಜಲಾಶಯ (ETV Bharat)

By ETV Bharat Karnataka Team

Published : Aug 1, 2024, 11:10 PM IST

ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ (ETV Bharat)

ಕಾರವಾರ(ಉತ್ತರ ಕನ್ನಡ):ಲಿಂಗನಮಕ್ಕಿ ಜಲಾಶಯದಲ್ಲಿ ನೀರು 1,814 ಅಡಿ ತಲುಪಿದರೆ ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡುವಂತೆ ಕೆಪಿಸಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ತಿಳಿಸಿದರು.

ತಾಲೂಕಿನ ಗೇರುಸೊಪ್ಪ ಜಲಾಶಯಕ್ಕೆ ಗುರುವಾರ ಭೇಟಿ‌ ನೀಡಿದ ಅವರು ಪರಿಶೀಲನೆ ನಡೆಸಿದರು. ಗೇರುಸೊಪ್ಪ ಜಲಾಶಯ ಗರಿಷ್ಠ 1,819 ಅಡಿ ಇದೆ. ಡ್ಯಾಂ ಭರ್ತಿಯಾಗಿ ಹೊರಬಿಡಲಾದ ನೀರು ಜಿಲ್ಲೆಯ ಹೊನ್ನಾವರ ಭಾಗದಲ್ಲಿ ನೆರೆ ಸೃಷ್ಟಿಸುತ್ತದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ನೆರೆ ತಡೆಯಲು ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಲಿಂಗನಮಕ್ಕಿಯಿಂದ 6 ಸಾವಿರ ಕ್ಯೂಸೆಕ್​ ನೀರು ಬಿಟ್ಟಿದ್ದು, ಗೇರುಸೊಪ್ಪ ಜಲಾನಯನ ಪ್ರದೇಶದಲ್ಲಿ ಆರರಿಂದ ಎಂಟು ಸಾವಿರ ಕ್ಯೂಸೆಕ್​ ನೀರು ಬರುತ್ತಿದೆ. ಕೆಪಿಸಿ ಅಧಿಕಾರಿಗಳು ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರನ್ನು ಬಿಡುವುದಾಗಿ ತಿಳಿಸಿದ್ದಾರೆ. ಇಲ್ಲಿ ಪ್ರತಿನಿತ್ಯ ವಿದ್ಯುತ್ ಉತ್ಪಾದಿಸಿ ಹೊರಬಿಡಲಾಗುತ್ತಿದೆ. ಸದ್ಯ ಯಾವುದೇ ಗೇಟ್ ತೆರೆದಿಲ್ಲ. ಮಳೆ ಕಡಿಮೆಯಾಗಿದ್ದು, ಒಳ ಹರಿವು ಕೂಡ ಕಡಿಮೆ ಆಗಿದೆ ಎಂದರು.

ಗೇರುಸೊಪ್ಪ ಜಲಾಶಯದಿಂದ 50 ಸಾವಿರ ಕ್ಯೂಸೆಕ್​ ನೀರು ಹೊರಬಿಟ್ಟರೆ 163 ಕುಟುಂಬಗಳಿಗೆ ಸಮಸ್ಯೆಯಾಗುವ ಬಗ್ಗೆ ತಹಶೀಲ್ದಾರರು ಗುರುತು ಮಾಡಿದ್ದರು. ಈಗಾಗಲೇ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡುವ ಮುನ್ಸೂಚನೆ ನೀಡಿದ್ದರಿಂದ 7 ಕಾಳಜಿ ಕೇಂದ್ರಗಳನ್ನು ತೆರೆದು ಜನರನ್ನು ಶಿಫ್ಟ್ ಮಾಡಿದ್ದೇವೆ. ಅಲ್ಲದೆ 163 ಮನೆಗಳಿಗೂ ಸೂಚನೆ ನೀಡಿದ್ದು, ಕಾಳಜಿ ಕೇಂದ್ರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳುವ ಪ್ರತಿಯೊಬ್ಬರ ಲೆಕ್ಕ ಹಾಕಲಾಗುತ್ತಿದೆ. ನೀರು ಬಿಟ್ಟರೆ ಎಲ್ಲೂ ಸಮಸ್ಯೆ ಆಗದಂತೆ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿದೆ ಎಂದು ಹೇಳಿದರು.

ಇನ್ನು ಗೇರುಸೊಪ್ಪ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ಬಿಟ್ಟರೆ 986 ಮನೆಗೆ ಸಮಸ್ಯೆ ಆಗಲಿದೆ. 1 ಲಕ್ಷ ಕ್ಯೂಸೆಕ್ ನೀರನ್ನ ಹೊರಬಿಟ್ಟರೆ 3500 ಮನೆಗಳಿಗೆ ಸಮಸ್ಯೆ ಆಗಲಿದೆ. ಸದ್ಯ 55 ಮೀಟರ್ ಜಲಾಶಯ ಎತ್ತರವಿದ್ದು, 46 ಮೀಟರ್ ನೀರನ್ನು ಗರಿಷ್ಠ ಮಿತಿಯಾಗಿ ಇಟ್ಟುಕೊಂಡಿದ್ದೇವೆ. ಮಳೆ ಕೂಡ ಕಡಿಮೆಯಾಗಿರುವ ಕಾರಣ ಇಷ್ಟೊಂದು ಪ್ರಮಾಣದಲ್ಲಿ ನೀರು ಬಿಡುವ ಪ್ರಮೇಯ ಬರುವ ಸಾಧ್ಯತೆ ಕಡಿಮೆ ಇದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಲಿಂಗನಮಕ್ಕಿ ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - Linganamakki Dam Open

ABOUT THE AUTHOR

...view details