ಕರ್ನಾಟಕ

karnataka

ETV Bharat / state

ಶಿಗ್ಗಾಂವಿ ಉಪಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿ ಯಾಸಿರ್‌ ಖಾನ್ ಆಸ್ತಿ ಎಷ್ಟು ಗೊತ್ತಾ?

ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ 6.02 ಲಕ್ಷ ರೂ ಮೌಲ್ಯದ ಚರಾಸ್ತಿ ಮತ್ತು 42.35 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ನಾಮಪತ್ರ ಸಲ್ಲಿಸಿದ ಯಾಸಿರ್‌ ಖಾನ್
ನಾಮಪತ್ರ ಸಲ್ಲಿಸಿದ ಯಾಸಿರ್‌ ಖಾನ್ (ETV Bharat)

By ETV Bharat Karnataka Team

Published : 5 hours ago

ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ ಇಂದು ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್‌ ಪ್ರಕಾರ, ಯಾಸೀರ್ ಖಾನ್ ಒಟ್ಟು 3.04 ಕೋಟಿ ಆಸ್ತಿ ಹೊಂದಿದ್ದಾರೆ. ಅವರ ಬಳಿ 85 ಸಾವಿರ ನಗದು ಹಣ, 4.27 ಲಕ್ಷ ಮೌಲ್ಯದ 60 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 6.02 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ.

ಹಾನಗಲ್​ ತಾಲೂಕು ಬಾದಾಮಗಟ್ಟಿ, ಬೊಮ್ಮನಹಳ್ಳಿ, ನೆಲ್ಲಿಕೊಪ್ಪ, ಶಿಗ್ಗಾಂವಿ ತಾಲೂಕು ಹುಲಗೂರು ಗ್ರಾಮಗಳಲ್ಲಿ 14.35 ಲಕ್ಷ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಹಾನಗಲ್​ ಪುರಸಭೆ ವ್ಯಾಪ್ತಿಯಲ್ಲಿ 10,098 ಚದರಡಿ ವಿಸ್ತೀರ್ಣದ 28 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಸೇರಿದಂತೆ 42.35 ಲಕ್ಷ ಮೌಲ್ಯದ ಸ್ಥಿರಾಸ್ತಿಯಿದೆ.

ವಾಹನ ಇಲ್ಲ: ಯಾಸೀರ್ ಬಳಿ ಯಾವುದೇ ವಾಹನಗಳಿಲ್ಲ. ಸಾಲವನ್ನೂ ಹೊಂದಿಲ್ಲ. ಯಾಸಿರ್‌ ಅವರ ಪತ್ನಿ ಬಳಿ 3 ಲಕ್ಷ ನಗದು, 35.60 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ ಸೇರಿದಂತೆ 38.86 ಲಕ್ಷ ಮೌಲ್ಯದ ಚರಾಸ್ತಿಯಿದೆ. ಜೊತೆಗೆ, 24 ಲಕ್ಷ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಇವರ ಬಳಿ 1.93 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ ಸೇರಿದಂತೆ 2.17 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ದಂಪತಿಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣುಮಗಳಿದ್ದಾಳೆ. ಅವರ ಹೆಸರಿನಲ್ಲಿ ಯಾವುದೇ ಆಸ್ತಿಯಿಲ್ಲ.

ಇದನ್ನೂ ಓದಿ:ಚನ್ನಪಟ್ಟಣ ಉಪಚುನಾವಣೆ: ₹113 ಕೋಟಿ ಆಸ್ತಿ ಘೋಷಿಸಿದ ನಿಖಿಲ್‌ ಕುಮಾರಸ್ವಾಮಿ

ABOUT THE AUTHOR

...view details