ಕರ್ನಾಟಕ

karnataka

ETV Bharat / state

ಬೆಳಗಾವಿಯ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಗೆ ಶರದ್​ ಪವಾರ್​ ಭೇಟಿ - Sharad Pawar - SHARAD PAWAR

ಈ ಹಿಂದೆ ತಾವೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದ ಬೆಳಗಾವಿಯ ಕೆಎಲ್​ಇ ಕ್ಯಾನ್ಸರ್​ ಆಸ್ಪತ್ರೆಗೆ ಹಿರಿಯ ಎನ್‌ಸಿಪಿ ನಾಯಕ ಶರದ್​ ಪವಾರ್​ ಭೇಟಿ ನೀಡಿ, ವೀಕ್ಷಿಸಿದರು.

MAHARASHTRA FORMER CM SHARAD PAWAR VISITED KLE CANCER HOSPITAL IN BELAGAVI
ಬೆಳಗಾವಿಯ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಗೆ ಶರದ್​ ಪವಾರ್​ ಭೇಟಿ (ETV Bharat)

By ETV Bharat Karnataka Team

Published : Sep 3, 2024, 8:02 AM IST

Updated : Sep 3, 2024, 12:26 PM IST

ಬೆಳಗಾವಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ ಶರದ್​ ಪವಾರ್​ ಅವರು ಸೋಮವಾರ ಕೆಎಲ್​ಇ ಸಂಸ್ಥೆ ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿದರು.

ಬೆಳಗಾವಿಯ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಗೆ ಶರದ್​ ಪವಾರ್​ ಭೇಟಿ (ETV Bharat)

ಆಸ್ಪತ್ರೆ ವೀಕ್ಷಿಸಿ ಮಾತನಾಡಿದ ಅವರು, "ನಾನೇ 2011ರಲ್ಲಿ ಈ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಿದ್ದೆ. ಈಗ ಆಸ್ಪತ್ರೆ ಅತ್ಯಾಧುನಿಕ ವ್ಯವಸ್ಥೆಯಿಂದ ಕೂಡಿದೆ. ಬೆಳಗಾವಿಯಂಥ ನಗರಗಳಲ್ಲಿ ಅತ್ಯಂತ ಸುಸಜ್ಜಿತ ಹಾಗೂ ಸಕಲ ರೀತಿಯ ವ್ಯವಸ್ಥೆಯುಳ್ಳ ಆಸ್ಪತ್ರೆಯನ್ನು ನೋಡಿ ಬಹಳ ಖುಷಿಯಾಯಿತು. ಕಟ್ಟಡ ಹಾಗೂ ವಿನ್ಯಾಸ ಸುಂದರವಾಗಿದೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಲಿ" ಎಂದರು.

ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, "ಎಲ್ಲಾ ಕಾಮಗಾರಿಗಳು ಮುಗಿದಿವೆ. ಈಗಾಗಲೇ ಒಂದು ವಿಭಾಗವನ್ನು ಪ್ರಾರಂಭಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಆಸ್ಪತ್ರೆ ಜನರ ಸೇವೆಗೆ ಮುಕ್ತವಾಗಲಿದೆ. ಈ ಭಾಗದಲ್ಲಿ ಕ್ಯಾನ್ಸರ್​ಗೆ ಸಮಗ್ರ ಚಿಕಿತ್ಸೆ ನೀಡುವ ಅತ್ಯಾಧುನಿಕ ಕೇಂದ್ರಗಳ ಅವಶ್ಯಕತೆ ಬಹಳಷ್ಟಿತ್ತು. ಅದನ್ನರಿತು ಒಂದೇ ಸೂರಿನಡಿ ಎಲ್ಲಾ ಚಿಕಿತ್ಸೆ ಲಭಿಸಬೇಕೆಂಬ ಉದ್ದೇಶ ಇಟ್ಟುಕೊಂಡು ಸುಮಾರು 300 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗಿದೆ" ಎಂದು ಹೇಳಿದರು.

ಬೆಳಗಾವಿಯ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶರದ್​ ಪವಾರ್ (ETV Bharat)

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಅವರು ಆಸ್ಪತ್ರೆಯ ಕುರಿತು ಶರದ್​ ಪವಾರ್​ ಅವರಿಗೆ ಸಮಗ್ರ ಮಾಹಿತಿ ನೀಡಿದರು. ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ಡಾ.ವಿ.ಎಸ್‌.ಸಾಧುನವರ, ಕಾಹೆರ್ ಉಪಕುಲಪತಿ ಡಾ.ನಿತಿನ ಗಂಗಾಣೆ, ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲೆ ಡಾ.ಎನ್.ಎಸ್.ಮಹಾಂತ ಶೆಟ್ಟಿ, ಉಪಪ್ರಾಂಶುಪಾಲ ಡಾ.ರಾಜೇಶ್​ ಪವಾರ್​, ಡಾ.ವಿ‌.ಎಂ‌.ಪಟ್ಟಣಶೆಟ್ಟಿ, ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ನವೀನ್​ ಎನ್. ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ:ಜಯದೇವ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಿಸಲು ಸಿಬ್ಬಂದಿ, ಹಣದ ನೆರವು : ಸಿಎಂ ಸಿದ್ದರಾಮಯ್ಯ - cm siddaramaiah

Last Updated : Sep 3, 2024, 12:26 PM IST

ABOUT THE AUTHOR

...view details