ಕರ್ನಾಟಕ

karnataka

ETV Bharat / state

ಮಂಗಳೂರಿಗೆ ಬಂದಿಳಿದ ಈ ಋತುವಿನ ಎರಡನೇ ಐಷಾರಾಮಿ ಹಡಗು 'ಸೆವೆನ್ ಸೀಸ್‌ ವೊಯೇಜರ್' - SEVEN SEAS VOYAGER

ಶುಕ್ರವಾರ ಬೆಳಗ್ಗೆ ನವಮಂಗಳೂರು ಬಂದರಿಗೆ ಆಗಮಿಸಿದ ಸೆವೆನ್ ಸೀಸ್‌ ವೊಯೇಜರ್ ಐಷಾರಾಮಿ ಹಡಗು ಸಂಜೆ ಕೊಚ್ಚಿ ಮೂಲಕ ಕೊಲಂಬೊಗೆ ತೆರಳಿತು.

Seven Seas Voyager
ಸೆವೆನ್ ಸೀಸ್‌ ವೊಯೇಜರ್ (ETV Bharat)

By ETV Bharat Karnataka Team

Published : Dec 28, 2024, 7:27 PM IST

ಮಂಗಳೂರು: ಈ ಋತುವಿನ ಎರಡನೇ ಐಷಾರಾಮಿ ಬಹೇಮಿಯನ್ ಪ್ರವಾಸಿ ಹಡಗು 'ಸೆವೆನ್ ಸೀಸ್‌ ವೊಯೇಜರ್' ನವ ಮಂಗಳೂರು ಬಂದರಿಗೆ ಶುಕ್ರವಾರ ಆಗಮಿಸಿತು.

ನಾರ್ವೆಯ ಕ್ರೂಸ್‌ಲೈನ್‌ನ ಈ ಹಡಗು ಕೊಚ್ಚಿಗೆ ತೆರಳುವ ಮಾರ್ಗಮಧ್ಯೆ ಶುಕ್ರವಾರ ಬೆಳಗ್ಗೆ 6.30ಕ್ಕೆ ನವಮಂಗಳೂರು ಬಂದರಿಗೆ ತಲುಪಿತು. ಈ ಐಷಾರಾಮಿ ಹಡಗು 650 ಪ್ರಯಾಣಿಕರು ಹಾಗೂ 450 ಸಿಬ್ಬಂದಿಯನ್ನು ಹೇರಿಕೊಂಡು ಆಗಮಿಸಿತು.

ಪ್ರವಾಸಿಗರನ್ನು ಭಾರತೀಯ ಸಂಪ್ರದಾಯದಂತೆ ಸ್ವಾಗತಿಸಲಾಯಿತು. ಬಳಿಕ ಹಡಗಿನಲ್ಲಿ ಆಗಮಿಸಿದ ವಿದೇಶಿ ಪ್ರಯಾಣಿಕರು ಸ್ಥಳೀಯ ಪ್ರಮುಖ ತಾಣಗಳಾದ ಕಾರ್ಕಳದ ಬಾಹುಬಲಿ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಕಲ್ಬಾವಿ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ ಹಾಗೂ ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡಿದರು. ಬಳಿಕ ಈ ಹಡಗು ಫುಝರ್‌ನಿಂದ ಮುಂಬೈ, ಗೋವಾ, ಮಂಗಳೂರು, ಕೊಚ್ಚಿಯ ಮೂಲಕ ಕೊಲಂಬೊಗೆ ಶುಕ್ರವಾರ ಸಂಜೆ 5.30ಕ್ಕೆ ವಾಪಸ್ ಆಗಿದೆ.

ಇದನ್ನೂ ಓದಿ:ಮೊದಲ ಬಾರಿಗೆ ಪ್ರಯಾಣಿಕರನ್ನು ಹೊತ್ತು ಸಾಗಿದ ಎಲೆಕ್ಟ್ರಿಕ್ ಫ್ಲೈಯಿಂಗ್ ಪ್ಯಾಸೆಂಜರ್ ಹಡಗು!

ABOUT THE AUTHOR

...view details