ಬೆಂಗಳೂರು :ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ. ಸರ್ಕಾರ ಏನಾಗತ್ತೋ ಆಗಲಿ ನೋಡೋಣ. ಸಿದ್ದರಾಮಯ್ಯನವರೇ ಜಾತಿ ಗಣತಿ ವರದಿಯನ್ನು ಮೊದಲು ಬಿಡುಗಡೆ ಮಾಡಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿಯನ್ನ ಮೊದಲು ಬಿಡುಗಡೆ ಮಾಡಿ. ಈ ಸರ್ಕಾರ ಬರಲು ಶೋಷಿತ ಸಮುದಾಯಗಳೇ ಕಾರಣ. ಸರ್ಕಾರ ಬಿದ್ರೆ ಬೀಳಲಿ. ಏಕೆ ಹೆದರಬೇಕು? ಜಾತಿಗಣತಿ ವರದಿ ಜಾರಿಗೆ ಬರಲಿ. ಜಾತಿಗಣತಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದೆ. ಆದ್ರೆ ಸರ್ಕಾರ ಏಕೆ ಯೋಚನೆ ಮಾಡುತ್ತಿದೆ? ಮೊದಲು ಜಾತಿಗಣತಿ ಜಾರಿ ಮಾಡಲಿ. ಎಲ್ಲ ಸಮುದಾಯಕ್ಕೆ ಅನುಕೂಲ ಇದೆ. ಜಾತಿಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ ಹರಿಪ್ರಸಾದ್ (ETV Bharat) ಜಾತಿ ಗಣತಿ ಜಾರಿಗೆ ತರಬೇಕು :ಲೋಕಸಭೆ ಪ್ರತಿಪಕ್ಷ ನಾಯಕರಾಹುಲ್ ಗಾಂಧಿ ಪ್ರಣಾಳಿಕೆ ಬಗ್ಗೆ ಗೌರವ ಇರುವವರು ಬೆಂಬಲ ಕೊಡಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಜಾತಿಗಣತಿ ಜಾರಿ ಬಗ್ಗೆ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕೂಡ ಹೇಳಿದ್ರು. ರಾಹುಲ್ ಗಾಂಧಿ ಹೇಳಿದ್ರು ಪ್ರಪಂಚ ಬಿದ್ರೂ ಜಾತಿಗಣತಿ ಜಾರಿಯಾಗಬೇಕು ಅಂತ. ಪ್ರಪಂಚ ತಲೆಕೆಳಗಾಗಲಿ, ಜಾತಿಗಣತಿ ಜಾರಿಗೆ ತರಬೇಕು. ಸರ್ಕಾರ ಬಿದ್ರೆ ಬೀಳಲಿ, ಏಕೆ ಹೆದರಬೇಕು. ಸರ್ಕಾರಕ್ಕೆ ಕಂಟಕ ಎದುರಾದ್ರೆ ಆಗಲಿ. ಜಾತಿ ಗಣತಿ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಜಾತಿಗಣತಿ ಬೆಂಬಲಿಸಲಿ : ನಮ್ಮ ಸರ್ಕಾರ ಬಂದಿರೋದು ಅಧಿಕಾರ ಅನುಭವಿಸುವುದಕ್ಕಲ್ಲ, ಕಾಂಗ್ರೆಸ್ ಪ್ರಣಾಳಿಕೆ ಓದಿದವರು, ಕಾಂಗ್ರೆಸ್ ಪ್ರಣಾಳಿಕೆ ಮೇಲೆ ನಂಬಿಕೆ ಇರುವವರು ಜಾತಿಗಣತಿ ಬೆಂಬಲಿಸಲಿ ಎಂದು ಹರಿಪ್ರಸಾದ್ ಮನವಿ ಮಾಡಿದರು.
ಇದನ್ನೂ ಓದಿ :ಜಾತಿಗಣತಿ ಬಗ್ಗೆ ಸಚಿವ ಸಂಪುಟ ಸಭೆ ಮಾಡಿ ತೀರ್ಮಾನ: ಸಚಿವ ಜಿ. ಪರಮೇಶ್ವರ್ - G Parameshwar