ಶಿವಮೊಗ್ಗ: ಮಲೆನಾಡಿನ ಹೆಮ್ಮೆಯ ಅಡಕೆ ಮಾರಾಟ ಸಹಕಾರ ಸಂಘ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತಂಡ 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 19 ಸ್ಥಾನವನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿ ಮತ್ತೊಮ್ಮೆ ತಮ್ಮ ಪಾರುಪತ್ಯ ಮರೆದಿದೆ.
ಈ ಕುರಿತು ಸಹಕಾರ ಸಂಘದ ಉಪಾಧ್ಯಕ್ಷ ಹೆಚ್.ಎಸ್. ಮಹೇಶ್ ಮಾತನಾಡಿ, ಮ್ಯಾಮ್ಕೋಸ್ನ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗೆ ಕಾರಣವಾದ ಷೇರುದಾರರಿಗೆ ಅಭಿನಂದನೆ ಸಲ್ಲಿಸಿದರು.
"ಸಹಕಾರ ಭಾರತಿಯು 2005 ರಿಂದ ಮ್ಯಾಮ್ಕೋಸ್ನಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ. ಕಳೆದ ಎರಡು ವರ್ಷದಿಂದ ಸಹಕಾರ ಭಾರತಿ ತಂಡವನ್ನು ಸೋಲಿಸಬೇಕೆಂದು ಸಹಕಾರಿ ಪ್ರತಿಷ್ಠಾನ ಅವಿರತ ಶ್ರಮ ಹಾಕಿತ್ತು. ಸಹಕಾರ ಭಾರತಿ ಆಶ್ವಾಸನೆ ನೀಡಿದಂತೆ ನಡೆದುಕೊಂಡು ಬಂದಿದೆ. ಷೇರುದಾರರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿದೆ. ನಿನ್ನೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಹೆಸರಿನಲ್ಲಿ ಅಕ್ರಮವಾಗಿ ಕರಪತ್ರ ಮುದ್ರಿಸಿ, ಅದರಲ್ಲಿ ಸಹಕಾರಿ ಪ್ರತಿಷ್ಠಾನದಿಂದ ಸ್ಪರ್ಧಿಸಿರುವವರ ಹೆಸರು ಹಾಗೂ ಚಿಹ್ನೆಯನ್ನು ಮುದ್ರಿಸಿ ಷೇರುದಾರರನ್ನು ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಹತಾಷಭಾವದಿಂದ ಈ ಕೃತ್ಯ ಎಸಗಿದ್ದು ಕಂಡು ಬಂದಿದೆ" ಎಂದು ಹೇಳಿದರು.