ಕರ್ನಾಟಕ

karnataka

ETV Bharat / state

ಆರ್​ಸಿಬಿ - ಸಿಎಸ್​ಕೆ ಫ್ಯಾನ್ಸ್ ನಡುವೆ ಏರ್ಪಟ್ಟ ದೋಸ್ತಿ: ಧೋನಿ, ಕೊಹ್ಲಿಯನ್ನು ಒಟ್ಟಿಗೆ ಹೊಗಳಿ ಸಂಭ್ರಮ - RCB CSK FANS REACTION - RCB CSK FANS REACTION

ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್​ಕೆ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದೆ. ಸದ್ಯ ಇತ್ತಂಡಗಳ ಅಭಿಮಾನಿಗಳು ಧೋನಿ ಮತ್ತು ವಿರಾಟ್ ಕೊಹ್ಲಿ ಅವರನ್ನು ಶ್ಲಾಘಿಸುತ್ತಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ - ಸಿಎಸ್​ಕೆ ಫ್ಯಾನ್ಸ್ ನಡುವೆ ಏರ್ಪಟ್ಟ ದೋಸ್ತಿ
ಆರ್​ಸಿಬಿ - ಸಿಎಸ್​ಕೆ ಫ್ಯಾನ್ಸ್ ನಡುವೆ ಏರ್ಪಟ್ಟ ದೋಸ್ತಿ (ETV Bharat)

By ETV Bharat Karnataka Team

Published : May 19, 2024, 5:34 PM IST

ಆರ್​ಸಿಬಿ - ಸಿಎಸ್​ಕೆ ಫ್ಯಾನ್ಸ್ ನಡುವೆ ಏರ್ಪಟ್ಟ ದೋಸ್ತಿ (ETV Bharat)

ಬೆಂಗಳೂರು: ನಿನ್ನೆಯ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯ ಕೊನೆಯ ಓವರ್ ವರೆಗೂ ಕುತೂಹಲ ಕೆರಳಿಸಿತ್ತು. ಕೊನೆಯದಾಗಿ ಆರ್​ಸಿಬಿ ಗೆಲುವಿನ ನಗೆ ಬೀರಿ ಪ್ಲೇ ಆಫ್ ಹಂತಕ್ಕೆ ದಾಪುಗಾಲು ಇಟ್ಟಿತು. ಕಿತ್ತಾಡುತ್ತಿದ ಇತ್ತಂಡಗಳ ಅಭಿಮಾನಿಗಳು ಶಾಂತ ರೀತಿಯಿಂದ ವರ್ತಿಸಿ ಒಟ್ಟಿಗೆ ಸಂಭ್ರವನ್ನು ಪಡುತ್ತಿದ್ದಾರೆ. ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನು ಶ್ಲಾಘಿಸುತ್ತಾ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಎಂ.ಡಿ ಬ್ಲಾಕ್​​ನ ಡೆಲಿವರಿ ಬಾಯ್ ಗಣೇಶ್, ಕೊನೆಯ ಓವರ್ ವರೆಗೂ ನಿನ್ನೆಯ ಪಂದ್ಯ ಕುತೂಹಲವನ್ನು ಮೂಡಿಸಿತ್ತು. ಆರ್​ಸಿಬಿ ತನ್ನ ಆರಂಭಿಕ ಹಿನ್ನಡೆಯನ್ನು ಬದಿಗೊತ್ತಿ ಸತತ ಗೆಲುವನ್ನು ದಾಖಲಿಸಿ ಪ್ಲೇ ಆಫ್ ಹಂತಕ್ಕೆ ತಲುಪಿರುವುದು ಸಂತಸ ತಂದಿದೆ. ಎಲ್ಲ ತಂಡಗಳು ಉತ್ತಮ ರೀತಿಯಲ್ಲಿ ತಮ್ಮ ಪ್ರದರ್ಶನವನ್ನು ನೀಡಿವೆ. ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ ಉತ್ತಮ ಪ್ರದರ್ಶನವನ್ನು ನೀಡಿ ಕಪ್ ತನ್ನದಾಗಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.

ಎಂ.ಡಿ.ಬ್ಲಾಕ್​ನ ಕಾಲೇಜು ವಿದ್ಯಾರ್ಥಿಯಾದ ಮಹೇಶ್ ಮಾತನಾಡಿ, ಸಿಎಸ್​ಕೆ ಟೀಮ್ ಗೆಲ್ಲುತ್ತದೆ ಎಂದುಗೊಂಡಿದ್ದೆ. ಕ್ಯಾಪ್ಟನ್ ಕೂಲ್ ಧೋನಿ ಮ್ಯಾಜಿಕ್ ಮಾಡುತ್ತಾರೆ ಅಂದುಕೊಂಡಿದ್ದೆ. ಧೋನಿ ಸಿಕ್ಸ್ ಹೊಡೆದಾಗ ಗೆಲವು ನಮ್ಮದೇ ಅಂದುಕೊಂಡಿದ್ದೆ. ಆದರೆ ಆರ್​ಸಿಬಿ ಮತ್ತು ಸಿಎಸ್​ಕೆ ಕೊನೆಯ ಹಂತದವರೆಗೆ ಹೋರಾಟ ನೆಡೆಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ್ದು ಮರೆಯಲಾಗದ ಗಳಿಗೆಯಾಗಿದೆ. ಸಿಎಸ್​ಕೆ ಮತ್ತು ಆರ್​ಸಿಬಿ ಫ್ಯಾನ್ಸ್ ಇಬ್ಬರೂ ಒಂದೇ ಎನ್ನುವ ಭಾವದಲ್ಲಿ ಪಂದ್ಯಗಳನ್ನು ತೆಗೆದುಕೊಳ್ಳಬೇಕು. ಹೊಡೆದಾಟ ಬಡಿದಾಟ ಮಾಡಿಕೊಳ್ಳಬಾರದು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಕಾಮೆಂಟ್ ಹಾಕುವಾಗ ಸೂಕ್ಷ್ಮ ಸಂವೇದನೆಯನ್ನು ಬೆಳೆಸಿಕೊಳ್ಳಬೇಕು. ಪಾಕಿಸ್ತಾನ್ - ಇಂಡಿಯಾ ಪಂದ್ಯಗಳ ವೇಳೆ ಉಭಯ ದೇಶದ ಫ್ಯಾನ್ಸ್ ಕಿತ್ತಾಡುತ್ತಾರೆ. ಅದೇ ಮಾದರಿಯಲ್ಲಿ ಸಿಎಸ್​ಕೆ ಮತ್ತು ಆರ್​ಸಿಬಿ ತಂಡಗಳ ಸದಸ್ಯರು ಅಭಿಮಾನಿಗಳು ಆಗಬಾರದು ಎಂದು ಹೇಳಿದರು.

ಧೋನಿ ಇನ್ನೊಂದು ಐಪಿಎಲ್ ಸೀಸನ್ ಆಡಬೇಕು ಎನ್ನುವುದು ನಮ್ಮ ಆಶಯವಾಗಿದೆ. ಅವರು ತಮ್ಮ ಕರ್ತವ್ಯವನ್ನು ಇಲ್ಲಿಯವರೆಗೆ ಚೆನ್ನಾಗಿ ನಿಭಾಯಿಸಿದ್ದಾರೆ. ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಆರ್​ಸಿಬಿ ಗೆಲುವಿಗೆ ಕಾರಣರಾದರು ಎಂದು ಯಶವಂತಪುರದಲ್ಲಿರುವ ಡಿಪ್ಲೋಮ ವಿದ್ಯಾರ್ಥಿ ನೀರೇಶ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಯಶ್ ದಯಾಳ್ ಎಂಬ ಆರ್​​ಸಿಬಿ ಪಾಲಿನ ಹೀರೋ: ಟೀಂ ಗೆಲ್ಲಿಸಿ ಟೀಕಾಕಾರರಿಗೆ ಬೌಲರ್​ ತಿರುಗೇಟು - Yash Dayal

ABOUT THE AUTHOR

...view details