ಕರ್ನಾಟಕ

karnataka

ETV Bharat / state

ಕಾರವಾರದಲ್ಲೊಂದು ರಂಗೋಲಿ ಜಾತ್ರೆ: ರಾರಾಜಿಸಿದ ಯಶ್, ಅಲ್ಲು ಅರ್ಜುನ್, ಪ್ರಧಾನಿ ಮೋದಿ, ಮಾಜಿ ಪ್ರಧಾನಿಗಳ ಚಿತ್ತಾರ - RANGOLI FAIR

ಕಾರವಾರದಲ್ಲಿ ಮಾರುತಿ ದೇವರ ವಾರ್ಷಿಕೋತ್ಸವ ನಡೆದಿದೆ. ಜಾತ್ರೆಯಲ್ಲಿ ಸಾಂಪ್ರದಾಯಿಕ ಶೈಲಿಯ ಚುಕ್ಕಿ ರಂಗೋಲಿಗಳಿಂದ ಹಿಡಿದು ರಾಜಕಾರಣಿಗಳು, ಪ್ರಮುಖ ವ್ಯಕ್ತಿಗಳು, ನಟರ ಚಿತ್ರವನ್ನು ರಂಗೋಲಿಯ ಮೂಲಕ ರಚಿಸಲಾಗಿದೆ.

KARWAR  UTTARA KANNADA  ರಂಗೋಲಿ ಜಾತ್ರೆ  MARUTI GOD FAIR
ಕಾರವಾರದಲ್ಲೊಂದು ರಂಗೋಲಿ ಜಾತ್ರೆ: ಯಶ್, ಅಲ್ಲು ಅರ್ಜುನ್, ಪ್ರಧಾನಿ ಮೋದಿ, ಮಾಜಿ ಪ್ರಧಾನಿಯ ರಚನೆ (ETV Bharat)

By ETV Bharat Karnataka Team

Published : Dec 30, 2024, 7:12 AM IST

ಕಾರವಾರ(ಉತ್ತರ ಕನ್ನಡ):ಜಾತ್ರೆ ಅಂದಾಕ್ಷಣ ನಮಗೆ ನೆನಪಾಗೋದು ಅಲ್ಲಿನ ತಿಂಡಿ ತಿನಿಸುಗಳು, ಹೂವು, ಹಣ್ಣು ಕಾಯಿ, ಮಕ್ಕಳ ಆಟದ ಸಾಮಾನುಗಳು. ಆದರೆ, ಕಾರವಾರ ನಗರದಲ್ಲಿ ನಡೆದ ಜಾತ್ರೆಯೊಂದು ನಾವು ಅಂದುಕೊಳ್ಳುವುದಕ್ಕಿಂತ ವಿಭಿನ್ನವಾಗಿತ್ತು. ಜಾತ್ರೆಗೆ ಆಗಮಿಸಿದ ಸಾವಿರಾರು ಜನರು ದೇವರ ದರ್ಶನ ಪಡೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಜಾತ್ರೆ ನಡೆಯುವ ಸ್ಥಳದಲ್ಲಿನ ಮನೆಗಳ ಮುಂದೆ ಹಾಕಿರುವ ರಂಗೋಲಿ ನೋಡುವುದರಲ್ಲಿಯೇ ಮೈಮರೆತಿದ್ದರು. ಈ ಸ್ಪೆಷಲ್​ ರಂಗೋಲಿ ಜಾತ್ರೆ ಕುರಿತಾದ ವರದಿ ಇಲ್ಲಿದೆ.

ರಂಗೋಲಿ ಜಾತ್ರೆ ಖ್ಯಾತಿಯ ಕಾರವಾರ ನಗರದ ಮಾರುತಿ ದೇವರ ವಾರ್ಷಿಕೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಜಾತ್ರೆ ನಿಮಿತ್ತ ದೇವಾಲಯ ಸಮೀಪದ ಬೀದಿಗಳಲ್ಲಿ ರಚಿಸಿದ ಚಿತ್ತಾಕರ್ಷಕ ರಂಗೋಲಿಗಳು ನೆರೆದವರ ಗಮನ ಸೆಳೆದವು. ಮಾರುತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಗ್ಗೆಯಿಂದ ಕೈಗೊಳ್ಳಲಾಗಿತ್ತು.

ಕಾರವಾರದಲ್ಲೊಂದು ರಂಗೋಲಿ ಜಾತ್ರೆ: ರಾರಾಜಿಸಿದ ಯಶ್, ಅಲ್ಲು ಅರ್ಜುನ್, ಪ್ರಧಾನಿ ಮೋದಿ, ಮಾಜಿ ಪ್ರಧಾನಿಗಳ ಚಿತ್ತಾರ (ETV Bharat)

ಕಾರವಾರ ಸೇರಿದಂತೆ ವಿವಿಧ ಪ್ರದೇಶದಿಂದ ಸಾರ್ವಜನಿಕರು ಬಂದು ದೇವರ ದರ್ಶನ ಪಡೆದರು. ದೇವಾಲಯವನ್ನು ವಿಧ ವಿಧದ ಹೂವುಗಳಿಂದ ಅಲಂಕರಿಸಲಾಗಿತ್ತು. ಬಗೆ ಬಗೆಯ ದೀಪಾಲಂಕಾರಗಳಿಂದ ದೇವಾಲಯವು ಶೋಭಿಸುತ್ತಿತ್ತು. ಮಾರುತಿಗಲ್ಲಿ, ಬ್ರಾಹ್ಮಣಗಲ್ಲಿ, ಕೋಣೆವಾಡಾ ರಸ್ತೆಗಳಲ್ಲಿ ಪ್ರತಿ ಮನೆ, ಅಂಗಡಿಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಕೂಡ ನಡೆಯಿತು.

ಇನ್ನು ಜಾತ್ರೆ ನಿಮಿತ್ತ ಇಲ್ಲಿನ ಬೀದಿಗಳಲ್ಲಿ ರಚಿಸಿದ ರಂಗೋಲಿಗಳು ಒಂದಕ್ಕಿಂತ ಒಂದು ಭಿನ್ನವಾಗಿ ಕಂಡು ಬಂದವು. ಪ್ರಮುಖವಾಗಿ ಪುಷ್ಪ 2 ಚಲನಚಿತ್ರದ ಅಲ್ಲು ಅರ್ಜುನ್​, ಯಶ್​, ಚೆಸ್​ ಚಾಂಪಿಯನ್ ಗುಕೇಶ್, ಪ್ರಧಾನಿ ನರೇಂದ್ರ ಮೋದಿ, ವಾಜಪೇಯಿ, ಸಾಂಪ್ರದಾಯಿಕ ಶೈಲಿಯ ಚುಕ್ಕಿ ರಂಗೋಲಿಗಳು, ಪ್ರಸ್ತುತ ವಿದ್ಯಮಾನದಲ್ಲಿರುವ ಚಿತ್ರ ನಟರುಗಳು, ರಾಜಕೀಯ ವ್ಯಕ್ತಿಗಳು, ದೇವರ ಕಲಾಕೃತಿಗಳು ರಂಗೋಲಿಯಲ್ಲಿ ಆಕರ್ಷಕವಾಗಿ ಕಂಡು ಬಂದರು. ಏಕದಳ - ದ್ವಿದಳ ಧಾನ್ಯಗಳು ಮತ್ತು ಬಣ್ಣ ಬಣ್ಣದ ಪುಡಿಗಳನ್ನು ಬಳಸಿಕೊಂಡು ಹಲವು ಬಗೆಯ ರಂಗೋಲಿಗಳನ್ನು ಹಾಕಿದ್ದರು. ಸಾವಿರಾರು ಜನ ಜಾತ್ರೆಗೆ ಬಂದು ನೀಡಿ ರಂಗೋಲಿ ವೀಕ್ಷಿಸಿ ಖುಷಿ ಪಟ್ಟರು.

ಪಲ್ಲಕ್ಕಿ ಸಾಗುವ ರಸ್ತೆಯ ಅಕ್ಕ ಪಕ್ಕದ ಮನೆಯವರು, ಅಂಗಡಿಕಾರರು ತಮ್ಮ ತಮ್ಮ ಮನೆಯ ಎದುರಿನಲ್ಲಿ ವಿವಿಧ ರೀತಿಯ ರಂಗೋಲಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಚುಕ್ಕಿ ರಂಗೋಲಿ, ಪುಡಿ ರಂಗೋಲಿ, ಧಾನ್ಯಗಳ ರಂಗೋಲಿ ಮೊದಲಾದವುಗಳು ವಿಶೇಷ ಗಮನ ಸೆಳೆದವು. ಪ್ರತಿ ಬಾರಿಯೂ ಈ ಜಾತ್ರೆಗೆ ರಂಗೋಲಿ ವಿಕ್ಷಣೆಗೆ ಕಾರವಾರ ತಾಲೂಕು ಮಾತ್ರವಲ್ಲದೇ ನೆರೆ ರಾಜ್ಯಗಳಾದ ಗೋವಾ ಹಾಗೂ ಮಹಾರಾಷ್ಟ್ರಗಳಿಂದಲೂ ಜನರು ಆಗಮಿಸುವುದು ಇಲ್ಲಿನ ವಿಶೇಷತೆಯಾಗಿದೆ.

ಇದನ್ನೂ ಓದಿ:ವಿಜಯಪುರದಲ್ಲಿ ಅಖಿಲ ಕರ್ನಾಟಕ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ

ABOUT THE AUTHOR

...view details