ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ನೂರು ರಾಮಮಂದಿರ ಜೀರ್ಣೋದ್ಧಾರ; ಸರ್ಕಾರದ ಕ್ರಮ ಸ್ವಾಗತಿಸಿದ ಬಿ ವೈ ವಿಜಯೇಂದ್ರ - ಬಿ ವೈ ವಿಜಯೇಂದ್ರ

ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿದ್ದ ಕಾಂಗ್ರೆಸ್​ನವರು ಭಗವಾನ್​ ಶ್ರೀರಾಮನನ್ನು ಒಪ್ಪಿಕೊಂಡಿರುವುದು ಸಂತೋಷದ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

BJP State President B.Y. Vijayendra spoke to the media.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಧ್ಯಮದವರ ಜೊತೆ ಮಾತನಾಡಿದರು.

By ETV Bharat Karnataka Team

Published : Feb 4, 2024, 10:04 PM IST

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಧ್ಯಮದವರ ಜೊತೆ ಮಾತನಾಡಿದರು.

ವಿಜಯಪುರ:ರಾಜ್ಯದಲ್ಲಿ ನೂರು ರಾಮಮಂದಿರಗಳನ್ನು ಜೀರ್ಣೋದ್ಧಾರ ಮಾಡಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಶ್ರೀರಾಮನ ಮಂದಿರವನ್ನು ನಿರ್ಮಾಣ: ವಿಜಯಪುರ ಸೈನಿಕ ಶಾಲೆಯ ಹೆಲಿಪ್ಯಾಡ್​ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷ ಇವತ್ತು ಜ್ಞಾನೋದಯವಾಗಿ ಶ್ರೀರಾಮನ ಮಂದಿರವನ್ನು ಜೀರ್ಣೋದ್ಧಾರ ಮಾಡುತ್ತೇವೆ ಅನ್ನುವ ನಿಟ್ಟಿನಲ್ಲಿ ಮಾತಾಡಿದ್ದು ಸ್ವಾಗತಾರ್ಹ. ಒಳ್ಳೆಯ ಕೆಲಸ ಮಾಡುತ್ತಿರುವವರಿಗೆ ನಾವು ಶುಭ ಹಾರೈಸುತ್ತೇವೆ. ಭಗವಾನ್​ ಶ್ರೀರಾಮನನ್ನು ಕಾಂಗ್ರಸ್​ನವರು ಒಪ್ಪಿಕೊಂಡಿರುವುದು ತುಂಬಾ ಸಂತೋಷಕರ ವಿಚಾರ ಎಂದರು.

ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ:ಬೆಳಗಾವಿ ಜಿಲ್ಲೆಯ ಎಂ‌ ಕೆ‌ ಹುಬ್ಬಳ್ಳಿಯಲ್ಲಿ ಭಗವಾಧ್ವಜ ವಿಚಾರ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಂಡ್ಯದ ಕೆರಗೋಡುನಲ್ಲಿ ನಡೆದ ಘಟನೆ ಹಿಂದೆ ಕಾಂಗ್ರೆಸ್ ಸರ್ಕಾರದ ಪಿತೂರಿ ಇದೆ. ಅಲ್ಲಿ ಹನುಮ ಧ್ವಜ ಹಾರಿಸಬೇಕೆಂದು ಗ್ರಾಮ ಪಂಚಾಯಿತಿಯವರು ತೀರ್ಮಾನ ಮಾಡಿದ್ದರು. ನಂತರ ಸ್ತಂಭ ಸ್ಥಾಪಿಸಿ, ರಾಮನ ಧ್ವಜ ಹಾರಿಸಿದ್ದರಿಂದ ಅದನ್ನು ಪ್ರಶ್ನಿಸುವುದು ಎಷ್ಟು ಸರಿ. ಇದನ್ನು ನೋಡಿದ್ರೆ ನಾವು ಭಾರತದಲ್ಲಿ ಇದ್ದೇವಾ ಅಥವಾ ಬೇರೆ ದೇಶದಲ್ಲಿ ಇದ್ದೇವಾ ಎಂಬ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸುತ್ತಿದೆ ಎಂದು ವಿಜಯೇಂದ್ರ ಹರಿಹಾಯ್ದರು.

ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಈ ಮಟ್ಟಕ್ಕೆ ತಂದಿಟ್ಟಿದೆ, ಈ ರಾಜ್ಯದಲ್ಲಿ ರಾಷ್ಟ್ರಧ್ವಜ ಹಾರಿಸಲು, ನಮ್ಮ ಹನುಮ ಧ್ವಜ ಹಾರಿಸುವುದನ್ನು ಅವರು ಪ್ರಶ್ನೆ ಮಾಡ್ತಾರೆ. ಅಧಿಕಾರದ ಮದ ಏರಿದೆ, ಹೀಗಾಗಿ ಕಾಂಗ್ರೆಸ್ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿದೆ ಎಂದು ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬಿಜೆಪಿಗೆ 400ಕ್ಕೂ ಅಧಿಕ ಸ್ಥಾನ ನಿಶ್ಚಿತ:ಇಡೀ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಉಂಟಾಗಿದೆ. ಇದರಿಂದ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಮಂತ್ರಿ ಆಗಬೇಕೆಂಬುದು ದೇಶದ ಎಲ್ಲ ಮತದಾರರ ಆಶಯವಿದೆ. ಲೋಕಸಭೆಯಲ್ಲಿಯೂ ಕೂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಾಯಿಂದ ಸಹ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಬರುತ್ತದೆ. ಮೋದಿಯವರು ಮತ್ತೆ ಪ್ರಧಾನಿ ಆಗಲಿದ್ದಾರೆ ಎಂಬ ಮಾತು ಬಂದಿದೆ. ಹೀಗಾಗಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಜ್ಯದ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ಸಿನವರು ಪ್ರತಿಭಟನೆಗೆ ಮುಂದಾಗಿದ್ದಾರೆ: ಸಂಸದ ಪ್ರತಾಪ್​ ಸಿಂಹ

ABOUT THE AUTHOR

...view details