ವಿಜಯಪುರ:ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ವಿಜಯಪುರವನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕುರಿತು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾಮೂರ್ತಿ, ನಾನು ಬಾಲ್ಯದಿಂದಲೂ ವಿಜಯಪುರ ಜಿಲ್ಲೆಯ ಒಡನಾಟ ಹೊಂದಿದ್ದೇನೆ. ಇಲ್ಲಿಯ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಕೃಷ್ಣಾ ತೀರದ ಜನರ ಜೊತೆ ಒಡನಾಟವಿದೆ ಎಂದರು.
ನೋಡಲ್ ಜಿಲ್ಲೆಯಾಗಿ ವಿಜಯಪುರ ಆಯ್ಕೆ ಮಾಡಿದ ಸಂಸದೆ ಸುಧಾ ಮೂರ್ತಿ - Sudha Murthy - SUDHA MURTHY
ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ವಿಜಯಪುರವನ್ನು ನೋಡಲ್ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಸಂಸದೆ ಸುಧಾ ಮೂರ್ತಿ (ETV Bharat)
Published : Aug 13, 2024, 9:20 PM IST
|Updated : Aug 13, 2024, 10:59 PM IST
ವಿಜಯಪುರ ಜಿಲ್ಲೆಯಲ್ಲಿ ನಮ್ಮ ಸಂಬಂಧಿಕರಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಧರ್ಮ ಶಾಲೆ ಸ್ಥಾಪಿಸಲು ತೀರ್ಮಾನ ಮಾಡಿದ್ದು, ಜಿಲ್ಲೆಯ ಸಿಂದಗಿ, ಬಸವನಬಾಗೇವಾಡಿ, ತಾಳಿಕೋಟೆಯಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ದುಡ್ಡು ಕೊಟ್ಟು ಬಂದವ ಡ್ಯಾಂ ಏನಾಗಿದೆ ಅಂತಾ ನೋಡ್ತಾನಾ?: ಹೆಚ್ಡಿಕೆ - H D Kumaraswamy
Last Updated : Aug 13, 2024, 10:59 PM IST