ದಾವಣಗೆರೆ:ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 15 ಜನರನ್ನು ವಶಕ್ಕೆ ಪಡೆದ ಚನ್ನಗಿರಿ ಪೊಲೀಸರು, 5.54 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಎಸ್ಪಿ ಕಚೇರಿ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್ ನೇತೃತ್ವದಲ್ಲಿ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಕ್ರಾಸ್ನಲ್ಲಿ ದಾಳಿ ನಡೆಸಲಾಗಿದೆ.
ದಾಳಿ ನಡೆದ ಇದೇ ಸ್ಥಳದಲ್ಲಿ ಹಲವು ದಿನಗಳಿಂದ ಆರೋಪಿಗಳು ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
₹34 ಲಕ್ಷ ಮೌಲ್ಯದ ಗಾಂಜಾ ಪತ್ತೆ:ಒಡಿಶಾದಿಂದ ಬೆಂಗಳೂರಿಗೆ ಸಂಚರಿಸುವ ರೈಲಿನಲ್ಲಿ 34 ಲಕ್ಷ ರೂ ಮೌಲ್ಯದ ಗಾಂಜಾವನ್ನು ದಾವಣಗೆರೆ ರೈಲ್ವೇ ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗದ ಬಳಿ ರೈಲು ಬೋಗಿಯಲ್ಲಿ ತಲಾ 17 ಕೆ.ಜಿಯ ಎರಡು ಬ್ಯಾಗ್ಗಳಲ್ಲಿ ಒಟ್ಟು 34 ಕೆ.ಜಿ ಗಾಂಜಾ ದೊರೆತಿದೆ. ಒಂದು ಬೋಗಿಯಲ್ಲಿ ಗಾಂಜಾ ಇಟ್ಟು ಮತ್ತೊಂದು ಬೋಗಿಯಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದು ಪೊಲೀಸರು ಹುಡುಕಾಟ ಆರಂಭಿಸುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕೋರ್ಟ್ ಆದೇಶದ ಮೇರೆಗೆ ಅಕ್ರಮವಾಗಿ ನಿರ್ಮಿಸುತ್ತಿದ್ದ ವೈಎಸ್ಆರ್ಸಿಪಿ ಕಚೇರಿ ನೆಲಸಮ: ಟಿಡಿಪಿ - YSRP Office Demolished