ಕರ್ನಾಟಕ

karnataka

ETV Bharat / state

ದಾವಣಗೆರೆ ಬಿಜೆಪಿಯಲ್ಲಿ ಭಿನ್ನ‌ಮತ: ಅತೃಪ್ತರೊಂದಿಗೆ ಸಭೆ ನಡೆಸಿದ ರಾಧಾಮೋಹನ್ ದಾಸ್ - DAVANAGERE LOK SABHA CONSTITUENCY - DAVANAGERE LOK SABHA CONSTITUENCY

ಟಿಕೆಟ್ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿರುವ ನಾಯಕರ ಮನವೊಲಿಸಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್​ ದಾಸ್ ಅಗರವಾಲ್ ಸಭೆ ನಡೆಸಿದ್ದಾರೆ.

radhamohan-das-agrawal-held-a-meeting-with-bjp-rebel-leaders-in-davanagere
ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಭಿನ್ನ‌ಮತ: ರೆಬಲ್ ನಾಯಕರೊಂದಿಗೆ ಸಭೆ ನಡೆಸಿದ ರಾಧಾಮೋಹನ್ ದಾಸ್ ಅಗರವಾಲ್

By ETV Bharat Karnataka Team

Published : Apr 6, 2024, 4:45 PM IST

Updated : Apr 6, 2024, 7:11 PM IST

ದಾವಣಗೆರೆ ಬಿಜೆಪಿಯಲ್ಲಿ ಭಿನ್ನ‌ಮತ: ಅತೃಪ್ತರೊಂದಿಗೆ ಸಭೆ ನಡೆಸಿದ ರಾಧಾಮೋಹನ್ ದಾಸ್

ದಾವಣಗೆರೆ: ಹಾಲಿ ಸಂಸದ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಅಸಮಾಧಾನಗೊಂಡಿರುವ ನಾಯಕರನ್ನು ಮನವೊಲಿಸಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್​ ದಾಸ್ ಅಗರವಾಲ್ ಮುಂದಾಗಿದ್ದಾರೆ. ಮಾಜಿ ಸಚಿವರಾದ ಎಂ. ಪಿ‌. ರೇಣುಕಾಚಾರ್ಯ, ಎಸ್.ಎ. ರವೀಂದ್ರನಾಥ್ ಹಾಗೂ ಮಾಜಿ ಶಾಸಕ ಕರುಣಾಕರ ರೆಡ್ಡಿ ಸೇರಿದಂತೆ ಇತರೆ ಅತೃಪ್ತರೊಂದಿಗೆ ಅಗರವಾಲ್ ಮಾತುಕತೆ ನಡೆಸುತ್ತಿದ್ದಾರೆ.

ನಗರದ ಸಾಯಿ ಇಂಟರ್​ನ್ಯಾಷನಲ್​ ಹೋಟೆಲ್​ನಲ್ಲಿ ಸಭೆ ಆಯೋಜಿಸಲಾಗಿದ್ದು, ದಾವಣಗೆರೆ ಲೋಕ‌ಸಭಾ ಕ್ಷೇತ್ರ ವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರದ ರೆಬಲ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಸಭೆಯಲ್ಲಿ ಸಂಸದ ಸಿದ್ದೇಶ್ವರ್ ಭಾಗಿ:ಜಿಲ್ಲಾಬಿಜೆಪಿಯಲ್ಲಿ ತಲೆದೂರಿರುವ ಭಿನ್ನ‌ಮತ ಶಮನಕ್ಕೆ‌ ಮುಂದಾಗಿರುವ ಬಿಜೆಪಿ ನಾಯಕರು ಸಂಸದ ಸಿದ್ದೇಶ್ವರ್ ನೇತೃತ್ವದಲ್ಲಿ ಸಭೆ ನಡೆಸುತ್ತಿದ್ದಾರೆ. ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್​ದಾಸ್ ಅಗರವಾಲ್ ಜೊತೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್​ ಜಿ ಸಭೆ ಪಾಲ್ಗೊಂಡಿದ್ದಾರೆ. ಮಾಜಿ ಸಚಿವ ಎಂ.ಪಿ‌. ರೇಣುಕಾಚಾರ್ಯ, ಎಸ್. ಎ. ರವೀಂದ್ರನಾಥ್, ಬಸವರಾಜ್ ನಾಯ್ಕ್ ಮತ್ತು ಲೋಕಿಕೆರೆ ನಾಗರಾಜ್, ಬಿ. ಜಿ. ಅಜಯ್ ಕುಮಾರ್ ಸೇರಿದಂತೆ ಬಿಜೆಪಿ ರೆಬಲ್ ಟೀಮ್ ಜೊತೆಗೆ ಚರ್ಚೆ ನಡೆಯುತ್ತಿದೆ. ಸಭೆಯಲ್ಲಿ ಸಿದ್ದೇಶ್ವರ್ ಪುತ್ರ ಅನಿತ್ ಕುಮಾರ್ ಸಹ ಭಾಗಿಯಾಗಿದ್ದಾರೆ.

ಇದನ್ನೂ ಓದಿ:ಈ ಸರ್ಕಾರ ಇರುವುದೇ ಗ್ಯಾರಂಟಿ ಇಲ್ಲ, ಚುನಾವಣೆ ನಂತರ ಕಾಂಗ್ರೆಸ್​ ಗ್ಯಾರಂಟಿಗಳು ಬಂದ್ ಆಗಲಿವೆ: ಜೋಶಿ ಭವಿಷ್ಯ - Lok Sabha Election 2024

Last Updated : Apr 6, 2024, 7:11 PM IST

ABOUT THE AUTHOR

...view details