ಕರ್ನಾಟಕ

karnataka

ETV Bharat / state

ಹೆಚ್ಚುವರಿ ಡಿಸಿಎಂ ಮಾಡುವುದರಿಂದ ಎಲ್ಲಾ ಆಗುತ್ತೆ ಅನ್ನೋದಾದ್ರೆ ಇಡೀ ಸಂಪುಟ ಡಿಸಿಎಂ ಆಗಲಿ: ಪ್ರಿಯಾಂಕ್​ ಖರ್ಗೆ - ADDITIONAL DCM POST ISSUE

ರಾಜ್ಯ ರಾಜಕಾರಣದಲ್ಲಿ ಮೂವರು ಡಿಸಿಎಂ ಮಾಡಬೇಕೆಂಬ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಕಾಂಗ್ರೆಸ್​ ನಾಯಕರಲ್ಲಿ ಈ ಕುರಿತಂತೆ ಚರ್ಚೆ ಜೋರಾಗಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಸಚಿವ ಪ್ರಿಯಾಂಕ್​ ಖರ್ಗೆ, ಹೆಚ್ಚುವರಿ ಡಿಸಿಎಂ ಮಾಡುವುದರಿಂದ ಎಲ್ಲಾ ಆಗುತ್ತೆ ಅನ್ನೋದಾದರೆ ಇಡೀ ಸಂಪುಟವೇ ಡಿಸಿಎಂ ಆಗಲಿ ಎಂದಿದ್ದಾರೆ.

ADDITIONAL DCM POST
ಸಚಿವ ಪ್ರಿಯಾಂಕ ಖರ್ಗೆ (ETV Bharat)

By ETV Bharat Karnataka Team

Published : Jun 24, 2024, 2:48 PM IST

ಬೆಂಗಳೂರು:ಹೆಚ್ಚುವರಿ ಡಿಸಿಎಂ ಮಾಡುವುದರಿಂದಲೇ ಎಲ್ಲ ಆಗುತ್ತೆ ಅನ್ನೋದಾದ್ರೆ ಮುಖ್ಯಮಂತ್ರಿಯನ್ನು ಮಾತ್ರ ಬಿಟ್ಟು‌ ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ ಅಂದ್ರೆ ಆಗುತ್ತಾ? ಎಂದು ಸಚಿವ ಪ್ರಿಯಾಂಕ್​ ಖರ್ಗೆ ಪ್ರಶ್ನಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಚಿವ ರಾಜಣ್ಣ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿದರು. ಅದು ಅವರ ವೈಯಕ್ತಿಕ ವಿಚಾರ. ಎಲ್ಲರಿಗೂ ಕೇಳೋಕೆ‌ ಹಕ್ಕಿದೆ. ಹೈಕಮಾಂಡ್ ಬಳಿ ಹೋಗಿ ಕೇಳಲಿ, ಯಾರು ಬೇಡ ಅಂದಿಲ್ಲ ಎಂದರು.

ಡಿಸಿಎಂ ಮಾಡುವುದರಿಂದಲೇ ಎಲ್ಲ ಆಗುತ್ತೆ ಅನ್ನೋದಾದ್ರೆ ಸಿಎಂನ ಮಾತ್ರ ಬಿಟ್ಟು‌ ಇಡೀ ಕ್ಯಾಬಿನೆಟ್ ಡಿಸಿಎಂ ಆಗಲಿ ಅಂದ್ರೆ ಆಗುತ್ತಾ? ನಮ್ಮ‌ ಕೆಲಸ ಏನು? ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ತಕ್ಕಂತೆ ಸೀಟುಗಳು ಬಂದಿಲ್ಲ. ನಾಲ್ಕೈದು ಸ್ಥಾನ ಕಡಿಮೆ ಬಂದಿವೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಿಎಂ ಹುದ್ದೆನೂ‌ ಕೇಳಿ, ಯಾರು ಬೇಡ ಅಂದೋರು. ನಿಮ್ಮ‌(ಮಾಧ್ಯಮ) ಬಳಿ ಹೇಳಿದ್ರೆ ಆಗುತ್ತಾ ಎಂದು ಅಸಮಾಧಾನ ಹೊರಹಾಕಿದರು.

ಕರ್ನಾಟಕದಲ್ಲಿ ನೀಟ್ ಪರೀಕ್ಷೆ ವಿಚಾರವಾಗಿ ಯಾವ ನಿರ್ಧಾರ ಕೈಗೊಳ್ಳುತ್ತಿರಿ ಎಂಬ ಬಗ್ಗೆ ಪ್ರತಿಕ್ರಿಯಿಸುತ್ತ, ಶರಣಪ್ರಕಾಶ್ ಪಾಟೀಲ್, ಸಿಎಂ, ಡಿಸಿಎಂ ಚರ್ಚೆ ಮಾಡಿದ್ದಾರೆ. 25 ಲಕ್ಷ ಯುವಕರ ಭವಿಷ್ಯ ಹಾಳು ಮಾಡಿದ್ದಾರೆ. ಅದನ್ನ ಮುಚ್ಚಿ ಹಾಕೋಕೆ ಮುಂದಾಗುತ್ತಿದ್ದಾರೆ. ಅಶ್ವತ್ಥನಾರಾಯಣ್, ವಿಜಯೇಂದ್ರ, ಆರ್.ಅಶೋಕ್ ಯಾಕೆ ಮಾತಾಡ್ತಿಲ್ಲ? ಅಪ್ರಸ್ತುತ ವಿಚಾರಗಳ ಚರ್ಚೆಯಿಂದ ಯಾರ ಬದುಕಾದ್ರೂ ಸಹನಾಗುತ್ತಾ? ಪಾರ್ಲಿಮೆಂಟ್​​ನಲ್ಲಿ‌ ಈ ವಿಚಾರ ಬರುತ್ತೆ ನೋಡೋಣ ಎಂದರು.

ಇದನ್ನೂ ಓದಿ:'ರಾಹುಲ್​ ಗಾಂಧಿ ಕೈಯಲ್ಲಿರುವ ಸಂವಿಧಾನ ಬುಕ್​ ಬೈಬಲ್ ರೀತಿ ಕಾಣುತ್ತಿದೆ ಎಂದರೆ ಅವರನ್ನೇ ಕೇಳಬೇಕು' - Santosh Lad

ABOUT THE AUTHOR

...view details