ಕರ್ನಾಟಕ

karnataka

ETV Bharat / state

ಚಾಮರಾಜನಗರ: ₹1.44 ಕೋಟಿ ಮೌಲ್ಯದ ಗಾಂಜಾ ವಶ, ನಾಲ್ವರ ಬಂಧನ - ಚಾಮರಾಜನಗರ

ಎರಡು ಕ್ವಿಂಟಲ್‌ನಷ್ಟು ಒಣ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಕೊಳ್ಳೇಗಾಲದಲ್ಲಿ ಪೊಲೀಸರು ಬಂಧಿಸಿದ್ದಾರೆ.

Cannabis
ಚಾಮರಾಜನಗರ ಪೊಲೀಸರ ಭರ್ಜರಿ ಬೇಟೆ: 1.44 ಕೋಟಿ ಮೌಲ್ಯದ ಗಾಂಜಾ ವಶ, ನಾಲ್ವರ ಬಂಧನ

By ETV Bharat Karnataka Team

Published : Feb 14, 2024, 6:17 PM IST

ಚಾಮರಾಜನಗರ:ಕೊಳ್ಳೇಗಾಲ ಗ್ರಾಮಾಂತರಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 2 ಕ್ವಿಂಟಲ್‌ನಷ್ಟು ಒಣ ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ. ಕೊಳ್ಳೇಗಾಲದ ಮಧುವನಹಳ್ಳಿ ಬೈಪಾಸ್ ಬಳಿ ಮಂಗಳವಾರ ಕಾರ್ಯಾಚರಣೆ ನಡೆದಿದೆ. ಬೆಂಗಳೂರು ಮೂಲದ ಸೆಂದಿಲ್ ಕುಮಾರ್, ದಾವಣಗೆರೆಯ ರವಿಕುಮಾರ್, ಯಾದಗಿರಿಯ ಉಮಾಶಂಕರ್ ಹಾಗೂ ಹರಿಹರದ ವಿನಾಯಕ ಬಂಧಿತರು.

ಹನೂರು ಭಾಗದಲ್ಲಿ ಮಾರಾಟ ಮಾಡಲು ಈಚರ್ ವಾಹನದಲ್ಲಿ ಗಾಂಜಾ ತರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ನಾಲ್ಕು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ 1.44 ಕೋಟಿ ರೂ. ಮೌಲ್ಯದ ಒಟ್ಟು 221 ಕೆ.ಜಿ. ಒಣ ಗಾಂಜಾವನ್ನು ಪ್ಲೈವುಡ್ ಶೀಟ್‌ಗಳೊಂದಿಗೆ ಅಡಗಿಸಿಟ್ಟುಕೊಂಡು ಬರುತ್ತಿದ್ದುದು ಪತ್ತೆಯಾಗಿದೆ. ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಂಗಳೂರು: 120 ಕೆ.ಜಿ ಗಾಂಜಾ ಸಾಗಾಟ; ಇಬ್ಬರು ಆರೋಪಿಗಳು ಸೆರೆ

ABOUT THE AUTHOR

...view details