ಬೆಂಗಳೂರು/ರಾಯಚೂರು: ಕಾನೂನುಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣ ಎದುರಿಸುತ್ತಿರುವ ಆರೋಪಿ, ಬಿಗ್‌ಬಾಸ್ ಒಟಿಟಿ ರಿಯಾಲಿಟಿ ಶೋ ಜನಪ್ರಿಯತೆಯ ಸೋನು ಶ್ರೀನಿವಾಸ್ ಗೌಡ ಅವರನ್ನು ಪೊಲೀಸರು ಇಂದು ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿ ವಾಪಸ್ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ದಂಪತಿಯಿಂದ ಸೋನು ಶ್ರೀನಿವಾಸ್ ಗೌಡ ಮಗು ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಗುರುತು ಬಹಿರಂಗಪಡಿಸಿ ಕಾಯಿದೆ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಇಂದು ಬಾಲಕಿ ಮನೆಯಲ್ಲಿ ಕೆಲವೇ ಕ್ಷಣಗಳಲ್ಲಿ ಮಹಜರ್ ಮುಗಿಸಿದ ಪೊಲೀಸರು ಪೋಷಕರ ಹೇಳಿಕೆ ದಾಖಲಿಸಿಕೊಂಡರು. ಈ ವೇಳೆ ಆರೋಪಿ ಜೊತೆ ಮಾತಾಡಬೇಕು ಎಂದು ಜನರು ಗಲಾಟೆ ಮಾಡಿದರು.
ಪ್ರಕರಣ ಸಂಬಂಧ ಹಣ ಪಡೆದು ಮಗು ಮಾರಾಟ ಮಾಡಲಾಗಿದೆಯೇ ಎಂಬ ಕುರಿತು ಪರಿಶೀಲನೆ ನಡೆಯುತ್ತಿದೆ. ಒಂದು ವೇಳೆ ಹಣ ಪಡೆದು ಪೋಷಕರು ಮಗುವನ್ನು ಹಸ್ತಾಂತರಿಸಿದ್ದರೆ ಮಾನವ ಕಳ್ಳಸಾಗಾಣಿಕೆ ಪ್ರಕರಣ ದಾಖಲಾಗಲಿದೆ.
ಇದನ್ನೂ ಓದಿ:ಮಗು ದತ್ತು ಪಡೆದ ಪ್ರಕರಣ: ಸೋನುಗೌಡರನ್ನ ನಾಲ್ಕು ದಿನಗಳ ಕಸ್ಟಡಿಗೆ ಪಡೆದ ಪೊಲೀಸರು - ನಟಿ ಹೇಳಿದ್ದಿಷ್ಟು - violation of Hindu Adoption Act