ಕರ್ನಾಟಕ

karnataka

ETV Bharat / state

'ನಶೆ ಮುಕ್ತ ಕರ್ನಾಟಕ' ಆ್ಯಪ್ ಆರಂಭ: ಡ್ರಗ್ಸ್ ಕೇಸ್​ ಬಗ್ಗೆ ಪೊಲೀಸರಿಗೆ ನೀವೂ ಮಾಹಿತಿ ನೀಡಬಹುದು - DRUG FREE KARNATAKA APP

ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯು ನಿರಂತರ ಶ್ರಮ ವಹಿಸುತ್ತಿದ್ದು, 'ನಶೆ ಮುಕ್ತ ಕರ್ನಾಟಕ' ಆ್ಯಪ್ ಆಭಿವೃದ್ಧಿಪಡಿಸಲಾಗಿದೆ.

app
ಆ್ಯಪ್ (ETV Bharat)

By ETV Bharat Karnataka Team

Published : Dec 7, 2024, 7:02 AM IST

ಬೆಂಗಳೂರು:ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪೊಲೀಸ್ ಇಲಾಖೆಯು ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದೆ. ಮಾದಕ ವಸ್ತು ಸಾಗಣೆ ಹಾಗೂ ಮಾರಾಟದ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ಆ್ಯಪ್ ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಮನವಿ ಮಾಡಿದೆ.

ನಶೆ ಮುಕ್ತ ಕರ್ನಾಟಕ ಎಂಬ ಆ್ಯಪ್ ಅಭಿವೃದ್ಧಿಪಡಿಸಿರುವ ರಾಜ್ಯ ಪೊಲೀಸ್ ಇಲಾಖೆ, ಆ್ಯಪ್ ಮೂಲಕ ಡ್ರಗ್ಸ್​​ ಪ್ರಕರಣಗಳ ಮಾಹಿತಿ ಹಂಚಿಕೊಳ್ಳುವಂತೆ ಜನರಿಗೆ ತಿಳಿಸಿದೆ. ಮಾಹಿತಿ ನೀಡಿದವರ ಗೌಪ್ಯತೆ ಕಾಯ್ದುಕೊಳ್ಳಲಾಗುವುದು. ಈ ಮೂಲಕ ಡ್ರಗ್ಸ್​ ದಂಧೆಗೆ ಕಡಿವಾಣ ಹಾಕಲು ಇಲಾಖೆಯು ಮುಂದಾಗಿದೆ.

ಆ್ಯಪ್ (ETV Bharat)

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಆ್ಯಪ್:ಮಾದಕ ವಸ್ತು ಮಾರಾಟ ಕಂಡು ಬಂದರೆ ಆ್ಯಪ್ ಮೂಲಕ ಯಾರು, ಎಲ್ಲಿಂದ ಬೇಕಾದರೂ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಇದಕ್ಕೂ ಮುನ್ನ ಗೂಗಲ್ ಪ್ಲೇ ಸ್ಟೋರ್​ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ಹಂಚಿಕೊಳ್ಳವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಆ್ಯಪ್ (ETV Bharat)

ಡ್ರಗ್ಸ್​​ ದಂಧೆ ಕಂಡುಬಂದ ಬಗ್ಗೆ ಮಾಹಿತಿ ಹಂಚಿಕೊಂಡರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ರವಾನೆಯಾಗಲಿದೆ. ನಂತರ ಮಾಹಿತಿ ಖಚಿತತೆ ಆಧರಿಸಿ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ರೋಪ್ ವೇ ಪ್ರವಾಸೋದ್ಯಮದತ್ತ ರಾಜ್ಯ ಸರ್ಕಾರದ ಚಿತ್ತ; 12 ಕಡೆ ಯೋಜನೆಗೆ ಸಮೀಕ್ಷೆ ಆರಂಭ

ABOUT THE AUTHOR

...view details