ಕರ್ನಾಟಕ

karnataka

ETV Bharat / state

ಚಾಮರಾಜನಗರ: ಕಾರಿನ ಹಿಂಬದಿ ಸೀಟ್​​ನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ! - Dead Body Found In Car - DEAD BODY FOUND IN CAR

ಕಾರೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಮೃತದೇಹ ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

dead body found
ಘಟನಾ ಸ್ಥಳ (ETV Bharat)

By ETV Bharat Karnataka Team

Published : Sep 21, 2024, 8:49 PM IST

ಚಾಮರಾಜನಗರ:ಕಾರೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲದ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಸ್ ನಿಲ್ದಾಣ ಬದಿಯಲ್ಲಿ ಶನಿವಾರ ಸಂಜೆ ನಡೆದಿದೆ. ಸುಮಾರು 40 ರಿಂದ 45 ವರ್ಷದ ವಯಸ್ಸಿನ ವ್ಯಕ್ತಿಯ ಶವ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ನೋಂದಣಿಯ ಸ್ವಿಫ್ಟ್ ಕಾರಿನ ಹಿಂಬದಿ ಸೀಟ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶುಕ್ರವಾರ ಮಧ್ಯಾಹ್ನದಿಂದಲೂ ಈ ಕಾರು ಒಂದೇ ಜಾಗದಲ್ಲಿ ನಿಂತಿತ್ತು ಎನ್ನಲಾಗಿದೆ. ಕಾರಿನ ಬಾಗಿಲಿನಿಂದ ರಕ್ತ ಕೆಳಗಡೆ ಸುರಿದು, ವಾಸನೆ ಬಂದಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಕಾರಿನ ಬಾಗಿಲು ತೆರೆದು ಪರಿಶೀಲಿಸಿದಾಗ ಬನಿಯನ್ ಹಾಗೂ ಚಡ್ಡಿ ಧರಿಸಿದ್ದ ವ್ಯಕ್ತಿ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

''ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವ ಕೊಳೆತ ಸ್ಥಿತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈಗಲೇ ಆತ್ಮಹತ್ಯೆ, ಇಲ್ಲವೇ ಕೊಲೆ ಎಂಬುದನ್ನು ಹೇಳಲಾಗಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಎಲ್ಲವೂ ತಿಳಿಯಲಿದೆ. ಗುರುತು ಪತ್ತೆಗೆ ಮುಂದಾಗಿದ್ದೇವೆ'' ಎಂದು ಕೊಳ್ಳೇಗಾಲ ಸಿಪಿಐ ಶಿವಮಾದಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಕೊಲೆ; ದೇಹ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಟ್ಟ ಆರೋಪಿ - Murder In Bengaluru

ABOUT THE AUTHOR

...view details