ಕರ್ನಾಟಕ

karnataka

ETV Bharat / state

ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳು ಮಾತನಾಡಬಾರದು ಎನ್ನುವುದು ಸರಿಯಲ್ಲ: ಪೇಜಾವರ ಶ್ರೀ - pejavara shree

ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳು ಮಾತನಾಡಬಾರದು ಎಂದು ಹೇಳುವುದು ಸರಿಯಲ್ಲ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.

By ETV Bharat Karnataka Team

Published : Jul 10, 2024, 6:55 PM IST

pejavara-shree
ಪೇಜಾವರ ಶ್ರೀ (ETV Bharat)

ಪೇಜಾವರ ಶ್ರೀ (ETV Bharat)

ದಾವಣಗೆರೆ :ಚಂದ್ರಶೇಖರ್ ಸ್ವಾಮೀಜಿ ಸಿಎಂ ಬದಲಾವಣೆ ಹೇಳಿಕೆ ವಿಚಾರವಾಗಿ ಪೇಜಾವರ ಶ್ರೀ ಬ್ಯಾಟ್ ಬೀಸಿದ್ದಾರೆ. ಇದರ ಬಗ್ಗೆ ಸ್ವಾಮೀಜಿಗಳು ಮಾತನಾಡಬಾರದು ಎನ್ನುವುದು ಸರಿಯಲ್ಲ ಎಂದು ಪೇಜಾವರ ಶ್ರೀ ಧ್ವನಿ‌ ಎತ್ತಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳು ಇದರ ಬಗ್ಗೆ ಮಾತನಾಡಬಾರದು ಎನ್ನುವುದು ಸರಿಯಲ್ಲ. ಅವರು ಕೂಡ ಮತ ಹಾಕಿದ್ದಾರೆ. ಹಾಗಾಗಿ ಮಾತನಾಡುವುದು ತಪ್ಪಲ್ಲ. ಸ್ವಾಮೀಜಿಗಳು ರಾಜಕೀಯ ಮಾತ್ನಾಡೋದು ನನ್ನ ಪ್ರಕಾರ ತಪ್ಪಲ್ಲ ಎಂದು ಪೇಜಾವರ ಶ್ರೀ ಒಕ್ಕಲಿಗ ಸಮಾಜದ ಚಂದ್ರಶೇಖರ್ ಸ್ವಾಮೀಜಿ ಪರ ಮಾತನಾಡಿದರು.

ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಿಂದೂ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಮಾತನಾಡಿದ ಅವರು, ಹಿಂದೂಗಳು ದ್ವೇಷ ಸಾಧಿಸುತ್ತಾರೆ, ಹಿಂಸಾಪ್ರಿಯರು ಅಂತ ಹೇಳಿದ್ದಾರೆ. ಹಾಗಾದರೆ ನಮಗೆ ಕೋರ್ಟ್ ಕಚೇರಿಗಳು ಬೇಕಾಗಿರ್ಲಿಲ್ಲ. ನೇರವಾಗಿ ಹಿಂಸವಾದವನ್ನು ಮಾಡ್ತಿದ್ದರು. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡಬಾರದು, ಇದು ಪ್ರಚೋದನಕಾರಿ ಭಾಷಣ, ಯಾರೋ ಬೇರೆಯವರು ಮಾತ್ನಾಡಿದರೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಇದುವರೆಗೂ ಅವರ ವಿರುದ್ಧ ಕ್ರಮ ಆಗಿಲ್ಲ ಎಂದರು.

ಸಮಾಜ ಸಮಾಜದ ನಡುವೆ, ಎರಡು ಪಂಗಡದ ನಡುವೆ ದ್ವೇಷ ಹರಡಿದ್ರೆ ಕಷ್ಟ. ಮಣಿಪುರದಲ್ಲಿ ನಡೆದ ಘಟನೆ ಶಮನ ಮಾಡಲು ಯಾರಿಂದಲೂ ಸಾಧ್ಯ ಇಲ್ಲ ಎಂದರು. ಅಯೋಧ್ಯೆಯಲ್ಲಿ ಸರಿಯಾದ ಕಾಮಗಾರಿ ಆಗಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಕಾಮಗಾರಿ ಇನ್ನೂ ಸಂಪೂರ್ಣ ಮುಗಿದಿಲ್ಲ. ಹಾಗಾಗಿ ಮಳೆ ಬಂದರೆ ನೀರು ಕೆಳಗೆ ಬರುತ್ತೆ ಎಂದು ಹೇಳಿದರು.

ಇದನ್ನೂ ಓದಿ :ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಸಮ್ಮುಖದಲ್ಲೇ ಚಂದ್ರಶೇಖರ್ ಸ್ವಾಮೀಜಿ ಬೇಡಿಕೆ - Chandrashekhar Swamiji

ABOUT THE AUTHOR

...view details