ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಅಡಿಕೆ ದಾಸ್ತಾನು ಮಳಿಗೆ ಮೇಲೆ ತೆರಿಗೆ ಅಧಿಕಾರಿಗಳಿಂದ ದಾಳಿ - Tax Officials Raid - TAX OFFICIALS RAID

ಅಡಿಕೆ ದಾಸ್ತಾನು ಮಳಿಗೆಗಳ ಮೇಳೆ ದಾಳಿ ಮಾಡಿರುವ ತೆರಿಗೆ ಅಧಿಕಾರಿಗಳು, ಅಕ್ರಮ ಅಡಿಕೆ ವಹಿವಾಟು ದಾಸ್ತಾನು ಪತ್ತೆ ಜತೆಗೆ ದಂಡ ಸಹ ವಿಧಿಸಿದ್ದಾರೆ.

TAX OFFICIALS RAID
ಅಡಿಕೆ ದಾಸ್ತಾನು ಮಳಿಗೆ (ETV Bharat)

By ETV Bharat Karnataka Team

Published : May 29, 2024, 7:11 PM IST

ಶಿವಮೊಗ್ಗ:ಶಿವಮೊಗ್ಗ ವಿಭಾಗೀಯ ವ್ಯಾಪ್ತಿಯ ಜಾರಿ ಮತ್ತು ಜಾಗೃತಿ ದಳ ಹಾಗೂ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಸುಮಾರು 40 ಅಧಿಕಾರಿಗಳ ತಂಡ, ಮಲೆನಾಡು ವಿಭಾಗ ವ್ಯಾಪ್ತಿಯ ಎಲ್ಲಾ ಅಡಿಕೆ ವರ್ತಕರ ವ್ಯಾಪಾರ ಗೋದಾಮು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿದೆ.

ಅಡಿಕೆ ದಾಸ್ತಾನು ಮಳಿಗೆ (ETV Bharat)

ದಾಳಿ ವೇಳೆ ಲಕ್ಷಾಂತರ ಮೊತ್ತದ ಅಕ್ರಮ ಅಡಿಕೆ ವಹಿವಾಟು ದಾಸ್ತಾನು ಪತ್ತೆ ಹಚ್ಚಿದ್ದಲ್ಲದೇ ದಂಡ ಸಹ ವಿಧಿಸಿರುತ್ತಾರೆ. ಈ ವಿಶೇಷ ಕಾರ್ಯಾಚರಣೆಯ ನೇತೃತ್ವವನ್ನು ಶಿವಮೊಗ್ಗದ ಮಲೆನಾಡು ವಿಭಾಗೀಯ ತೆರಿಗೆ ಜಾಗೃತಿ ದಳ ಹಾಗೂ ಸರಕು ಮತ್ತು ಸೇವಾ ತೆರಿಗೆಗಳ ಜಂಟಿ ಆಯುಕ್ತರುಗಳು ಹಾಗೂ ಉಪ ಆಯುಕ್ತರುಗಳ ನೇತೃತ್ವದಲ್ಲಿ ನಡೆಸಿದ್ದಾರೆ. ಅಕ್ರಮವಾಗಿ ಅಡಿಕೆ ಸಂಗ್ರಹಿಸಿದ ವ್ಯಾಪಾರಿಗಳ ಮೇಲೆ ಜಿಎಸ್​ಟಿ ಕಾಯ್ದೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆ.

ಇದನ್ನೂ ಓದಿ:ಬೆಳ್ಳಂ ಬೆಳಗ್ಗೆ ದಾಳಿ: ಬೆಳಗಾವಿ ಪಾಲಿಕೆ ಅಧಿಕಾರಿಗಳ ಚಳಿ ಬಿಡಿಸಿದ ಲೋಕಾಯುಕ್ತ ಅಧಿಕಾರಿಗಳು - Lokayukta Officials Raid

ABOUT THE AUTHOR

...view details