ಕರ್ನಾಟಕ

karnataka

ETV Bharat / state

70 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್​ ಅಭಿವೃದ್ಧಿ ಮಾಡಿಲ್ಲ: ಸಚಿವ ರಾಮದಾಸ್ ಆಠಾವಳೆ

ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ ಮುಂದೆ ಮೀಸಲಾತಿ ಕುರಿತ ಹಲವು ಪ್ರಸ್ತಾವನೆ ಬಂದಿವೆ. ಇವತ್ತು ಎಲ್ಲ ಸಮುದಾಯಗಳು ಮೀಸಲಾತಿಗೆ ಆಗ್ರಹಿಸುತ್ತಿವೆ. ರಾಹುಲ್ ಗಾಂಧಿ ಅವರು ಒಬಿಸಿ ಜನಗಣತಿಗೆ ಆಗ್ರಹಿಸುತ್ತಿದ್ದು, ಆದರೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ನಿರ್ಧಾರ ಕೈಗೊಳ್ಳಲಿಲ್ಲ? ಎಂದು ಕೇಂದ್ರ ಸಚಿವ ರಾಮದಾಸ್ ಆಠಾವಳೆ ಪ್ರಶ್ನಿಸಿದರು.

Union Minister Ramdas Athavale
ಕೇಂದ್ರ ಸಚಿವ ರಾಮದಾಸ್ ಆಠಾವಳೆ

By ETV Bharat Karnataka Team

Published : Feb 17, 2024, 5:24 PM IST

ಬೆಂಗಳೂರು: ಕಳೆದ 70 ವರ್ಷಗಳಿಂದ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ವೇಳೆ ಅಷ್ಟೇನು ಭಾರತ ದೇಶ ಅಭಿವೃದ್ಧಿ ಸಾಧಿಸಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ರಾಮದಾಸ್ ಆಠಾವಳೆ ಆರೋಪಿಸಿದರು.

ಬೆಂಗಳೂರಿನ ಕುಮಾರಕೃಪಾ ವಸತಿಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆಯ ಮುಂದೆ ಮೀಸಲಾತಿ ಕುರಿತ ಹಲವು ಪ್ರಸ್ತಾವನೆಗಳು ಬಂದಿವೆ. ಇವತ್ತು ಎಲ್ಲ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸುತ್ತಿವೆ. ರಾಹುಲ್ ಗಾಂಧಿ ಅವರು ಒಬಿಸಿ ಜನಗಣತಿಗೆ ಆಗ್ರಹಿಸುತ್ತಿದ್ದಾರೆ. ಆದರೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ನಿರ್ಧಾರ ಕೈಗೊಳ್ಳಲಿಲ್ಲ? ಎಂದು ಪ್ರಶ್ನಿಸಿದರು.

ಮಹಿಳಾ ಸಬಲೀಕರಣಕ್ಕೆ ಒತ್ತು: ನಮ್ಮ ಸರ್ಕಾರ ಇಡಬ್ಲ್ಯುಎಸ್ ಗೆ 10% ಮೀಸಲಾತಿ ನೀಡಲು ನಿರ್ಧಾರ ಕೈಗೊಂಡಿದೆ. ಕರ್ನಾಟಕದಲ್ಲಿ ಬಸವಣ್ಣನವರು ಅಂತರ್ಜಾತಿ ವಿವಾಹ ಸೇರಿದಂತೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿದ್ದಾರೆ. ಲಿಂಗಾಯತ ಸಮುದಾಯ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಇದೆ. ನಮ್ಮ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಸರ್ಕಾರಿ ಸೇವೆಗಳಲ್ಲಿ ಮಹಿಳಾ ಮೀಸಲಾತಿಗೆ ಕೂಡಾ ಬೇಡಿಕೆ ಇದೆ ಎಂದು ತಿಳಿಸಿದರು.

ದೇಶದಲ್ಲಿ ಇಂದು ಪ್ರಬಲ ಜಾತಿಗಳು ಕೂಡಾ ಮೀಸಲಾತಿ ಕೇಳುತ್ತಿವೆ. ಅದರೆ ಅದಕ್ಕೆ ಮುನ್ನ ಜಾತಿ ಗಣತಿ‌ ಮಾಡಬೇಕೆಂಬ ಒತ್ತಾಯವೂ ಇದೆ. ನಮ್ಮ ಪಕ್ಷದ ಒತ್ತಾಯ ಕೂಡಾ ಜಾತಿ ಗಣತಿ ಬಗ್ಗೆ ಇದೆ. ಆದರೆ ಅದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಕೂಡಾ ಇವೆ ಎಂದು ಹೇಳಿದರು.

ಯುಪಿಎ ತೊರೆದು ಎನ್​ಡಿಎ ಸೇರ್ಪಡೆ:ರಾಮಮಂದಿರ ವಿಷಯ ಈಗ ಕ್ಲಿಯರ್ ಆಗಿದೆ. ಹಲವು ಯೋಜನೆಗಳು ಪ್ರತಿ ಜನಸಾಮಾನ್ಯನಿಗೆ ತಲುಪಿವೆ ಎಂದ ಕೇಂದ್ರ ಸಚಿವರು, ನಾನು ಯುಪಿಎ ಸರ್ಕಾರದಲ್ಲೂ ಕೂಡಾ ಪಾಲುದಾರನಾಗಿದ್ದೆನು. ಆದರೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಹಲವು ಹಗರಣಗಳು ನಡೆದವು. ಹಾಗಾಗಿ ನಾನು ಯುಪಿಎ ತೊರೆದು ಎನ್ ಡಿಎ ಸೇರ್ಪಡೆಯಾದೆ ಎಂದರು.

25 ಸೀಟುಗಳನ್ನು ಗೆಲ್ಲುವ ವಿಶ್ವಾಸ: ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 25 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ. ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ 400ರಷ್ಟು ಸೀಟುಗಳನ್ನು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಒಪಿಎಸ್ ಮರು ಜಾರಿಯಿಂದ ರಾಜ್ಯದ ಹಣಕಾಸಿಗೆ ಭಾರೀ ಪೆಟ್ಟು; ಮಧ್ಯಮಾವಧಿ ವಿತ್ತೀಯ ವರದಿ ಎಚ್ಚರಿಕೆ

ABOUT THE AUTHOR

...view details